ಆರ್ ಎಸ್ಎಸ್ ಇರದಿದ್ದರೆ ಭಾರತ ಮೂರ್ನಾಲ್ಕು ಪಾಕಿಸ್ಥಾನವಾಗುತ್ತಿತ್ತು: ಶೆಟ್ಟರ್
Team Udayavani, Oct 7, 2021, 3:14 PM IST
ಹುಬ್ಬಳ್ಳಿ: ಕೇವಲ ಮತಬ್ಯಾಂಕ್ ಗಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಆರ್ ಎಸ್ಎಸ್ ವಿರುದ್ದ ಪೈಪೋಟಿಯಂತೆ ಟೀಕೆಗಿಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಲ್ಲದಿದ್ದರೆ ಈ ವೇಳೆಗೆ ಭಾರತ ಮೂರ್ನಾಲ್ಕು ಪಾಕಿಸ್ಥಾನ ಆಗುತ್ತಿತ್ತು. ದೇಶಪ್ರೇಮ ಸಂಘಟನೆ ಬಗ್ಗೆ ಇಲ್ಲಸಲ್ಲದ ಟೀಕೆ ಮೂಲಕ ಇಬ್ಬರು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳುತ್ತಿದ್ದಾರೆ ಎಂದರು.
ಆರ್ ಎಸ್ಎಸ್ ಟೀಕಿಸಿದರೆ ಮುಸ್ಲಿಂ ಮತದಾರರು ತಮ್ಮ ಪರವಾಗುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಮುಸ್ಲಿಮರಿಗೂ ಇವರ ಬಂಡವಾಳ ಗೊತ್ತಾಗಿದ್ದು, ಅನೇಕರು ಬಿಜೆಪಿ ಸೇರಿದ್ದಾರೆ, ಸಂಘ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
ಇದನ್ನೂ ಓದಿ:ಬಿಎಸ್ ವೈ ಆಪ್ತನ ನಿವಾಸದ ಮೇಲಿನ ಐಟಿ ದಾಳಿ ಬಗ್ಗೆ ರಾಜಕೀಯ ಬಣ್ಣ ಸರಿಯಲ್ಲ: ಸಚಿವ ಸೋಮಣ್ಣ
ಸಂಘ-ಬಿಜೆಪಿ ಒಂದೇ ನಾವು ಸಂಘ ಮೂಲದಿಂದ ಬಂದವರು, ಇಂದಿಗೂ ಸಂಘ ಕಾರ್ಯಕರ್ತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ, ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದರು.
ಸಂಘ ಇದ್ದ ಕಾರಣಕ್ಕೆ ದೇಶದಲ್ಲಿ ಸುರಕ್ಷತೆ, ಜನರಿಗೆ ಗೌರವ ಇದೆ. ಮತಬ್ಯಾಂಕ್ ಗಾಗಿ ಆರ್ ಎಸ್ಎಸ್ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಿದ್ದರಾಮಯ್ಯ, ಕುಮಾರಸ್ವಾಮಿ ನಿಲ್ಲಿಸಬೇಕು ಎಂದು ಶೆಟ್ಟರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.