ಪರರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ಶಿವಳ್ಳಿ
ಯರಗುಪ್ಪಿಯಲ್ಲಿ ದಿ| ಸಿ.ಎಸ್. ಶಿವಳ್ಳಿ ತೃತೀಯ ಪುಣ್ಯಸ್ಮರಣೆ
Team Udayavani, Mar 21, 2022, 10:46 AM IST
ಕುಂದಗೋಳ: ಮನುಷ್ಯನ ದೇಹ ಹೋದ ಮೇಲೂ ಅವರ ಹೆಸರು ಜನರ ಬಾಯಲ್ಲಿ ಇದ್ದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಆ ದಾರಿಯಲ್ಲಿ ನಿಮ್ಮ ನಾಯಕ ಸಿ.ಎಸ್. ಶಿವಳ್ಳಿಯವರು ಬದುಕಿ ತೋರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಎಸ್.ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ರವಿವಾರ ಮಾಜಿ ಸಚಿವ ದಿ| ಸಿ.ಎಸ್. ಶಿವಳ್ಳಿಯವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಮನುಷ್ಯರಲ್ಲಿ ಎರಡು ವಿಧ. ಒಂದು ಅವರಿಗೋಸ್ಕರ ಬದುಕುವ ಜನ, ಇನ್ನೊಂದು ಪರರಿಗೋಸ್ಕರ ಬದುಕುವ ಜನ. ಶಿವಳ್ಳಿಯವರು ಬದುಕಿನುದ್ದಕ್ಕೂ ಪರರಿಗೋಸ್ಕರ ಜೀವನ ಮುಡುಪಾಗಿಟ್ಟಿದ್ದರು.ಇಂದು ನೆರೆದ ಜನರೆ ಇದಕ್ಕೆ ಸಾಕ್ಷಿ ಎಂದರು.
ಬಸವಣ್ಣ ಸೇರಿದಂತೆ ಅನೇಕ ಮಹಾತ್ಮರು ಜಾತಿಯನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಆದರಿಂದು ಜಾತಿ ಗಟ್ಟಿಯಾಗಿದ್ದು, ಕೆಳವರ್ಗದ ಜನರು ಇನ್ನೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾರೂ ಸಹ ಹುಟ್ಟುವಾಗ ಇಂತಹ ಜಾತಿ ಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗಿದ್ದರೆ ನಾನು ಸಹ ಮೇಲ್ಜಾತಿಯಲ್ಲಿ ಹುಟ್ಟಲು ಅರ್ಜಿ ಹಾಕುತ್ತಿದ್ದೆ. ನಾವೆಲ್ಲ ಮನುಷ್ಯರೇ ಆಗಿದ್ದು, ಎಲ್ಲರೂ ಕೂಡಿ ಬಾಳಬೇಕು. ಶಿಕ್ಷಣ ಪಡೆದು ಸ್ವಾಭಿಮಾನ ಬದುಕು ಸಾಗಿಸಬೇಕು ಎಂದರು.
ರಾಜಕೀಯ ಜೀವನದಲ್ಲಿ ಪ್ರಾಮಾಣಿಕರು ಸಿಗುವುದು ಅಪರೂಪ. ಅಂದು ಕೈ-ಬಾಯಿ ಸ್ವಚ್ಛವಿಟ್ಟುಕೊಂಡ ಶಿವಳ್ಳಿಯವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಅವರಲ್ಲಿ ಎಳ್ಳಷ್ಟು ಅಹಂಕಾರ ಇರಲಿಲ್ಲ, ಆದರೆ ಕೆಲವರು ಶಾಸಕರಾದರೆ ಸಾಕು ಅಹಂಕಾರ ತುಂಬಿ ತುಳುಕುತ್ತಿರುತ್ತದೆ. ಆದರೆ ಶಿವಳ್ಳಿ ಅವರ ಹಾದಿಯನ್ನೇ ದೀಪವಾಗಿಸಿಕೊಂಡ ಕುಸುಮಾವತಿ ಅವರು ಸಹ ಸರಳತೆಯಿಂದ ಬಡಜನರ ಕೆಲಸ ಮಾಡುತ್ತಿದ್ದಾರೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬದುಕಿದರೆ ಶಿವಳ್ಳಿಯವರ ಹಾಗೆ ಬದುಕಬೇಕು. ಅಂದಾಗ ಮಾತ್ರ ಭೂಮಿಯ ಮೇಲಿನ ಹುಟ್ಟು ಸ್ವಾರ್ಥಕವಾದಂತೆ. ಕುಸುಮಾವತಿ ಶಿವಳ್ಳಿಯವರು ಮಹಿಳೆಯಾದರೂ ತಾಲೂಕಿನಲ್ಲಿ ಓಡಾಡಿಕೊಂಡು ಉತ್ತಮ ಶಾಸಕತ್ವ ನಿರ್ವಹಿಸುತ್ತಿದ್ದಾರೆ ಎಂದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ನಾನು ರಾಜಕೀಯ ಕುಟುಂಬದಿಂದ ಬಂದಿಲ್ಲ, ರಾಜಕಾರಣ ಕಂಡಿಲ್ಲ, ಆದರೆ ನಿಮ್ಮೆಲ್ಲರ ಪ್ರೀತಿಯಿಂದ ಶಾಸಕಿಯಾಗಿದ್ದೇನೆ. ನನ್ನ ಪತಿದೇವರ ಹಾದಿಯಲ್ಲಿಯೇ ಸಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ನಮ್ಮ ಪತಿಯ ಮೇಲಿದ್ದು ಅದಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಸಲೀಂ ಅಹ್ಮದ, ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಮಾಜಿ ಶಾಸಕ ಎಮ್. ಎಸ್. ಅಕ್ಕಿ ಮಾತನಾಡಿ, ಶಿವಳ್ಳಿಯವರ ಆದರ್ಶಗಳು ನಮ್ಮ ರಾಜಕೀಯ ಜೀವನಕ್ಕೆ ದಾರಿ ದೀಪವಾಗಿದ್ದು, ಅವರ ಬದುಕು ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.
ಮುಕ್ತಿಮಂದಿರದ ಶ್ರೀ ವಿಮಲರೇಣುಕ ಮುಕ್ತಿಮನಿ ಸ್ವಾಮೀಜಿ, ಕಲ್ಯಾಣಪುರ ಶ್ರೀ ಬಸವಣ್ಣಜ್ಜನವರು, ಬೆಳಗಾವಿಯ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ, ಮನಸೂರ ಶ್ರೀ ಬಸವರಾಜ ದೇವರು ಆರ್ಶೀವಚನ ನೀಡಿದರು.
ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಷಣ್ಮುಖ ಶಿವಳ್ಳಿ, ಮುತ್ತು ಶಿವಳ್ಳಿ, ಅಮರಶಿವಾ ಶಿವಳ್ಳಿ, ಬಾಬಣ್ಣ ಬೆಟಗೇರಿ, ಅರವಿಂದ ಕಟಗಿ, ವಿಜಯಕುಮಾರ ಹಾಲಿ, ಸಕ್ರಪ್ಪ ಲಮಾಣಿ, ದಯಾನಂದ ಕುನ್ನೂರ, ಜಗದೀಶ ಉಪ್ಪಿನ, ಸುರೇಶ ಗಂಗಾಯಿ, ಚಂದ್ರಶೇಖರ ಜುಟ್ಟಲ, ಉಮೇಶ ಹೆಬಸೂರ, ಎಚ್.ಎಸ್. ಲಕ್ಷ್ಮೇಶ್ವರ, ಗುರು ಚಲವಾದಿ, ಬಸವರಾಜ ಸಿರಸಂಗಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.