ಧಾರಾನಗರಿಯಲ್ಲಿ ಸಂಭ್ರಮದ ಶಿವರಾತ್ರಿ
Team Udayavani, Feb 25, 2017, 2:24 PM IST
ಧಾರವಾಡ: ಹರ ಹರ ಮಹಾದೇವ ಜಯಘೋಷ.. ಶಿವನ ದರ್ಶನ ಮಾಡಿ ಪುನೀತ ಭಾವದಲ್ಲಿ ಶಿವಭಕ್ತರು.. ಎಲ್ಲ ಶಿವನ ದೇವಸ್ಥಾನಗಳಲ್ಲೂ ಶಿವನ ನಾಮಸ್ಮರಣೆ..ಆರಾಧನೆ.. ಶಿವರಾತ್ರಿ ನಿಮಿತ್ತ ಶಿವಲಿಂಗ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹ..ಎಲ್ಲೆಡೆ ಶಿವನಾಮ ಸ್ಮರಣೆ !
ನಗರದಲ್ಲಿ ಶುಕ್ರವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ ಬಗೆ ಇದು. ಈಶ್ವರ ದೇವಾಲಯಗಳಿಗೆ ಆಗಮಿಸಿದ್ದ ಪ್ರವಾಹೋಪಾದಿಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಇವರಲ್ಲಿ ಮಕ್ಕಳು, ಮಹಿಳೆಯರ ಸಂಖ್ಯೆಯೇ ಜಾಸ್ತಿ ಇತ್ತು. ಶಿವಲಿಂಗಗಳಿಗೆ ಜಲ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಶಿವನ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹ ನಗರದಲ್ಲಿ ಈಶ್ವರ ದೇವಾಲಯಗಳಿಗೆ ತೆರಳಿ ಲಿಂಗಕ್ಕೆ ಪೂಜೆ ಸಲ್ಲಿಸಿದರು.
ಹೂವು, ಪತ್ರಿಗಳಿಂದ ಶಿವಲಿಂಗವನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವು ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಾಮ ಧ್ಯಾನದ ಮೂಲಕ ಶಿವನನ್ನು ಆರಾಧಿಸಿದರೆ ಇನ್ನು ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಶಿವಸ್ಮರಣೆ, ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ]
ದಕ್ಷಿಣ ಕಾಶಿಯ ದರ್ಶನ: ದಕ್ಷಿಣ ಕಾಶಿ ಆಗಿರುವ ಕಲಘಟಗಿ ರಸ್ತೆಯ ಗುಪ್ತಗಾಮಿನಿ ಶಾಲ್ಮಲಾ ಉಗಮ ಸ್ಥಾನದ ಸೋಮೇಶ್ವರದ ಶಿವಲಿಂಗಕ್ಕೆ ಮುಖ್ಯ ಅರ್ಚಕರಾದ ಗಂಗಯ್ನಾ ಬಳ್ಳಾರಿಮಠ ನೇತೃತ್ವದಲ್ಲಿ ಬೆಳಿಗ್ಗೆ 12:05 ಗಂಟೆಯಿಂದ ವಿಶೇಷ ಮಹಾರುದ್ರಾಭಿಷೆಕ, ಪಂಚಾಮೃತ, ಕ್ಷೀರಾಭಿಷೇಕ, ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಿದವು.
ಇದಾದ ಬಳಿಕ ಬೆಳಿಗ್ಗೆ 3:30 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮಧ್ಯಾಹ್ನದ ಬಿರು ಬಿಸಿಲು ಲೆಕ್ಕಸಿದೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು. ಇದು ರಾತ್ರಿವರೆಗೂ ಮುಂದುವರಿದು ಸೋಮೇಶ್ವರನಲ್ಲಿ ಇಷ್ಟಾರ್ಥ ಸಿದ್ಧಿದಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಒಟ್ಟಿನಲ್ಲಿ ಮಹಾಶಿವರಾತ್ರಿ ನಿಮಿತ್ತ “ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿ ಪಡೆದ ಶ್ರೀಕ್ಷೇತ್ರ ಸೋಮೇಶ್ವರ, ಜಯನಗರ ಈಶ್ವರ ದೇವಾಲಯ, ಕಾಮನಕಟ್ಟಿ ಬ್ರಹ್ಮಲಿಂಗೇಶ್ವರ ದೇವಾಲಯ, ಹೆಬ್ಬಳ್ಳಿ ಅಗಸಿ ಈಶ್ವರ ದೇವಾಲಯ, ಎಪಿಎಂಸಿ ಶಂಭುಲಿಂಗೇಶ್ವರ ದೇವಾಲಯ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಗ್ರಾಮೀಣದಲ್ಲೂ ಜಾಗರಣೆ: ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ನಿಮಿತ್ತ ಆಯಾ ಗ್ರಾಮದ ಶಿವಲಿಂಗ ದೇವಸ್ಥಾನಗಳಿಗೆ ತೆರಳಿದ ಭಕ್ತರು, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಉಪಾಸನೆ ಕೈಗೊಂಡು ಶುಕ್ರವಾರ ರಾತ್ರಿ ಇಡೀ ಜಾಗರಣೆ ಮಾಡಿದ ಭಕ್ತರು ಶಿವನಾಮ ಸ್ಮರಿಸಿದರು.
ಅದರಲ್ಲೂ ದೇವರಹುಬ್ಬಳ್ಳಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಬೆಳಗಿನಿಂದಲೇ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆದವು. ಉಳಿದಂತೆ ನಿಗದಿ, ಉಪ್ಪಿನಬೆಟಗೇರಿ, ಲಕಮಾಪುರ, ಪುಡಕಲಕಟ್ಟಿ, ಹೆಬ್ಬಳ್ಳಿ, ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಿವರಾತ್ರಿ ಹಬ್ಬ ಮನೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.