ಯರಗುಪ್ಪಿಯಲ್ಲಿ ಶ್ರದ್ಧಾ-ಭಕ್ತಿಯ ಮೊಹರಂ
Team Udayavani, Sep 10, 2019, 9:50 AM IST
ಕುಂದಗೋಳ: ತಾಲೂಕಿನ ಹಲವು ಹಳ್ಳಿಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಇಡೀ ರಾಜ್ಯದ ಗಮನ ಸೆಳೆದಿವೆ. ತಾಲೂಕಿನ ಯರಗುಪ್ಪಿಯಲ್ಲಿ ನಡೆಯುವ ಮೊಹರಂ ಗಮನ ಸೆಳೆದಿದೆ.
4 ಗ್ರಾಮಗಳ 7 ಡೋಲಿಗಳು ಇಲ್ಲಿ ಸೇರುವುದು ನೋಡುವುದೇ ಒಂದು ಭಾಗ್ಯ. ಸೂರ್ಯಾಸ್ತ ಆಗುವುದರೊಳಗೆ ಯರಗುಪ್ಪಿಯ ಹೈಸ್ಕೂಲ್ ಮೈದಾನದಲ್ಲಿ ಯರಗುಪ್ಪಿಯ 3, ಚಿಕ್ಕನರ್ತಿಯ 2, ಯರಿನಾರಾಯಣಪುರ ಮತ್ತು ಮುಳ್ಳೊಳ್ಳಿಯ ತಲಾ ಒಂದು ಸೇರಿ 7 ಡೋಲಿಗಳು ಕೂಡುತ್ತವೆ. ಅಲ್ಲಿ ಯುವಕರ ಹೆಜ್ಜೆಮೇಳ ಗಮನ ಸೆಳೆಯುತ್ತದೆ. ಅಲ್ಲಿಂದ ದೇವರು ಹೊಳಿಗೆ ಹೋಗುತ್ತವೆ.
ಕುಂದಗೋಳ ಪಟ್ಟಣದ ಸ್ಥಳೀಯ ಗಾಣಿಗ ಮನೆತನದ ರೇವಣಸಿದ್ದಪ್ಪ ಬಸಪ್ಪ ಹೊಳಿಯವರ ಮುಂದಾಳತ್ವದಲ್ಲಿ ಪಂಜಾ ದೇವರ ಸ್ಥಾಪಿಸಿ ಮುಸ್ಲಿಂ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಾರೆ. ತಾಲೂಕಿನಾದ್ಯಂತ ಸೆ.10ರಂದೇ ದೇವರು ಹೊಳಿಗೆ ಹೋದರೆ, ಯರಗುಪ್ಪಿ ಗ್ರಾಮದಲ್ಲಿ ಮಾತ್ರ ಒಂದು ದಿನ ತಡವಾಗಿ ಸೆ.11ರಂದು ದೇವರು ಹೋಗುತ್ತವೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಮೊಹರಂ ಆಚರಣೆಗೊಂಡರೆ, ತಾಲೂಕಿನಲ್ಲಿ ಮುಸ್ಲಿಂ ಬಾಂಧವರಿಲ್ಲದ ಅನೇಕ ಗ್ರಾಮಗಳಿದ್ದು, ಅಲ್ಲಿ ಮೊಹರಂನ್ನು ಹಿಂದೂಗಳೇ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದ್ದಾರೆ. ಮುಸ್ಲಿಮರೇ ಇಲ್ಲದ ಗೌಡಗೇರಿ, ಕೊಡ್ಲಿವಾಡ, ರಟಗೇರಿ, ಹೊಸಕಟ್ಟಿ, ವಿಠಲಾಪೂರಗಳಲ್ಲಿ ಸಂಭ್ರಮದ ಮೊಹರಂ ಜರುಗುತ್ತದೆ.
ಗೌಡಗೇರಿ ಗ್ರಾಮದ ಮಧ್ಯಭಾಗದಲ್ಲಿ ಮಕಾನ್ ನಿರ್ಮಿಸಿದ್ದಾರೆ. ಪ್ರತಿವರ್ಷ ಇದರಲ್ಲೇ ಡೋಲಿಯನ್ನು ಬಿಂಗು, ಕಾಗದಗಳಿಂದ ಶೃಂಗರಿಸಿ, ಲೋಹದ ಪಂಜಾಗಳನ್ನು ವಸ್ತ್ರಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ, ಶ್ರೀಗಂಧದಿಂದ ಪೂಜಿಸುತ್ತಾರೆ. ಮಕಾನನ್ನು ದೀಪಾಲಂಕಾರದಿಂದ ಶೃಂಗರಿಸಿ, ರಾತ್ರಿ ಗ್ರಾಮದ ಜನ ಸಕ್ಕರೆ ಬೆಲ್ಲ ನೈವೇದ್ಯಗೈದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬೇಡಿಕೊಳ್ಳುತ್ತಾರೆ. ಹಲವರು ಹರಕೆ ತೀರಿಸುತ್ತಾರೆ.
ಮುಸ್ಲಿಂರಿಲ್ಲದ ಈ ಗ್ರಾಮಗಳಲ್ಲಿ ಹಿಂದೂಗಳೇ ಮಸೂತಿಗಳನ್ನು ಕಟ್ಟಿಸಿ, ಹಬ್ಬದಂದು ಮುಸ್ಲಿಂ ಗುರುಗಳೊಬ್ಬರನ್ನು ಕರೆದುಕೊಂಡು ಬಂದು ಕೈ ದೇವರುಗಳನ್ನು ಪ್ರತಿಷ್ಠಾಪಿಸಿ, ಡೋಲಿಗಳನ್ನು ಮಿಂಚು ಮಿಂಚಿನ ಬಿಂಗುಗಳಿಂದ ಶೃಂಗರಿಸಿ ಹೊತ್ತುಕೊಂಡು, ಮಸೂತಿ ಮುಂದಿನ ಅಗ್ನಿಕುಂಡದಲ್ಲಿ ಹಾಯ್ದು, ಪ್ರತಿಮನೆಮನೆಗಳಿಗೆ ಭೇಟಿ ಕೊಟ್ಟು ಕೊನೆಗೆ ದೇವರುಗಳೆಲ್ಲ ಹೊಳಿಗೆ ಹೋಗುವುದರೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.