Hijab ವಿಷಯದಲ್ಲಿ ಸಿದ್ದರಾಮಯ್ಯ ಹೇಳಿಕೆ ಮುಠ್ಠಾಳತನದ ಪರಮಾವಧಿ: ಪ್ರಹ್ಲಾದ ಜೋಶಿ


Team Udayavani, Dec 24, 2023, 3:03 PM IST

pralhad-joshi

ಹುಬ್ಬಳ್ಳಿ: ರಾಜ್ಯದಲ್ಲಿ ಹಿಜಾಬ್ ನಿಷೇಧವೇ ಆಗಿಲ್ಲ. ಇಲ್ಲದ ನಿಷೇಧವನ್ನು ರದ್ದುಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಮುಠ್ಠಾಳತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಜಾಬ್ ವಿಚಾರವಾಗಿ ಅನಗತ್ಯ ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಅವರು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದರು.

ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕೆಂಬುದು ಕೋರ್ಟ್ ಆದೇಶವಾಗಿಯೇ ವಿನಃ ಅದನ್ನು ಯಾರು ನಿಷೇಧ ಮಾಡಿಲ್ಲ. ಇದನ್ನು ಅರಿಯದ ಅಥವಾ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸಿಎಂ ಬೌದ್ಧಿಕ ದಿವಾಳಿತನ ತೋರಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಯೋಜನೆ ಮಾಡಿ ಮಾತನಾಡಬೇಕು ಅದು ಬಿಟ್ಟು ಕೇವಲ ಮತ ತುಷ್ಟಿಕರಣಕ್ಕೆ ಇಲ್ಲವೇ ಸರಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದರು.

ಬಿಜೆಪಿಯವರ ವಿರುದ್ಧ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಹರಿಪ್ರಸಾದರನ್ನು ಕಾಂಗ್ರೆಸ್ ನಲ್ಲಿ ಬೂಟಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದ್ದು ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಹತಾಶೆಯಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ನುಡಿದರು.

ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರ ಅಮಾನತು ಕುರಿತಾಗಿ ಪ್ರತಿಕ್ರಿಯಿಸಿದವರು ಐದು ರಾಜ್ಯಗಳ ಸೋಲಿನ ನಂತರ ಕಾಂಗ್ರೆಸ್ ಹತಾಶಗೊಂಡಿದ್ದು ಇಲ್ಲಸಲ್ಲದ ಗದ್ದಲಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ನಡೆದ ಘಟನೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು ತಕ್ಕ ತನಿಖೆ ನಡೆಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳ ಸಂಸದರು ಬಯಸಿ, ಬಯಸಿ ಅಮಾನತ್ತಿಗೆ ಮುಂದಾಗುತ್ತಿದ್ದು ಅನಿವಾರ್ಯವಾಗಿ ಅವರ ಅನುಪಸ್ಥಿತಿಯಲ್ಲಿ ಐಪಿಸಿ ಕೋಡ್ ಸೇರಿದಂತೆ ವಿವಿಧ ತಿದ್ದುಪಡಿ ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ ಎಂದು ಜೋಶಿ ತಿಳಿಸಿದರು

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

Parameshwar

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.