ಸಿದ್ಧಾರೂಢಸ್ವಾಮಿ ಜಲರಥೋತ್ಸವ
Team Udayavani, Aug 9, 2017, 12:28 PM IST
ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢ ಸ್ವಾಮಿ ಮಹಾರಾಜ ಕೀ ಜೈ, ಸದ್ಗುರು ಗುರುನಾಥರೂಢ ಸ್ವಾಮಿ ಮಹಾರಾಜ ಕೀ ಜೈ ಎಂಬ ಜಯಘೋಷ ಗಳೊಂದಿಗೆ ಮಂಗಳವಾರ ಸಂಜೆ ಸಿದ್ಧಾರೂಢರ ತೆಪ್ಪದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರಾವಣ ಮಾಸದ ನಿಮಿತ್ತ ಬೆಳಿಗ್ಗೆಯಿಂದಲೇ ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆ ಉಭಯ ಶ್ರೀಗಳ ಪಲ್ಲಕ್ಕಿ ಉತ್ಸವ ವಾದ್ಯಮೇಳಗಳೊಂದಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಮರಳಿ ಸಂಜೆ ಶ್ರೀಮಠಕ್ಕೆ ಆಗಮಿಸಿದ ನಂತರ ತೆಪ್ಪದ ತೇರು ಪ್ರಾರಂಭಗೊಂಡಿತು. ಸಾವಿರಾರು ಭಕ್ತರು ತೆಪ್ಪದ ತೇರಿಗೆ ಉತ್ತತ್ತಿ, ಬಾಳೆಹಣ್ಣು, ಮೋಸಂಬಿ ಹಣ್ಣು ಎಸೆಯುವ ಮೂಲಕ ಉಭಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.
ನ್ಯಾಯಾಧೀಶ ಎಸ್.ಎಸ್. ಬಳ್ಳೂಳ್ಳಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಶ್ರೀಗಳು ಹಾಗೂ ಶ್ರೀಮಠದ ಟ್ರಸ್ಟ್ ಚೇರ್ಮನ್ ಧರಣೇಂದರ ಜವಳಿ, ವೈಸ ಚೇರ್ಮನ್ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್.ಜಿ., ನಾರಾಯಣಸಾ ಮೆಹರವಾಡೆ,
-ನಾರಾಯಣ ನಿರಂಜನ, ನಾರಾಯಣ ಪ್ರಸಾದ ಪಾಠಕ, ಬಸವರಾಜ ಕಲ್ಯಾಣಶೆಟ್ಟರ, ಯಲ್ಲಪ್ಪ ದೊಡ್ಡಮನಿ, ಶಾಮಾನಂದ ಪೋಜೇರಿ, ಮಹೇಂದ್ರ ಸಿಂ , ಆನಂದಕುಮಾರ ಮಗದುಮ್, ರಂಗಾಬದ್ದಿ, ಗವಿಸಿದ್ದಯ್ಯ ಅಮೋ ಮಠ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.