ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
Team Udayavani, Feb 7, 2020, 11:42 AM IST
ಕುಂದಗೋಳ: ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ರೈತರು ಹೆಸರು ನೋಂದಾಯಿಸುತ್ತಿರುವಾಗ ಜಿಪಿಎಸ್ ತಾಂತ್ರಿಕ ತೊಂದರೆಯಿಂದಾಗಿ ಬೆಳೆ ಕ್ಷೇತ್ರವೇ ಬದಲಾಗಿರುವುದರಿಂದ ಖರೀದಿಸಲು ಅಧಿಕಾರಿಗಳು ತಿರಸ್ಕರಿಸಿದ್ದರಿಂದ ರೈತರು ಗುರುವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದ ಘಟನೆ ಜರುಗಿತು.
ಮುಖಂಡ ಮುತ್ತು ಶಿವಳ್ಳಿ ಮಾತನಾಡಿ, ರೈತರು ಪ್ರಸಕ್ತ ವರ್ಷ ತಮ್ಮ ಹೊಲದಲ್ಲಿ ಶೇಂಗಾ ಬೆಳೆದಿದ್ದರೂ ಜಿಪಿಎಸ್‌ನಲ್ಲಿ ಮಾತ್ರ ಹತ್ತಿ ಬೆಳೆ ಎಂದು ನಮೂದಾಗಿರುವುದರಿಂದ ಬೆಂಬಲ ಬೆಲೆಯಿಂದ ರೈತರು ವಂಚಿತರಾಗುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಅಸಮರ್ಪಕವಾಗಿ ಜಿಪಿಎಸ್ ಮಾಡಿರುವುದರಿಂದ ಈ ಅಚಾತುರ್ಯ ಸಂಭವಿಸಿದೆ. ಇದರಿಂದ ಸಾವಿರಾರು ರೈತರು ಬೆಂಬಲ ಬೆಲೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ರೈತರಿಗೆನ್ಯಾಯ ನೀಡುವವರೆಗೂ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.
ನಂತರ ತಹಶೀಲ್ದಾರ್ ರೈತರೊಂದಿಗೆ ಸಮಾಲೋಚಿಸಿ,ನಿಮಗೆ ತೊಂದರೆ ಆಗದ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೆಳೆ ದೃಢೀಕರಣ ಪತ್ರವನ್ನು ನಾವೇ ನೀಡುತ್ತೇವೆ. ಖರೀದಿ ಕೇಂದ್ರದಲ್ಲಿ ಇದನ್ನು ನೀಡಿ ನಿಮ್ಮ ಶೇಂಗಾ ಬೆಳೆಯನ್ನು ಮಾರಾಟ ಮಾಡಲು ಅನುವು ಮಾಡಿಕೊಡುವುದಾಗಿ ಹೇಳಿದ ಬಳಿಕ ಕಚೇರಿ ಬೀಗವನ್ನು ತೆರೆದರು. ಮುಖಂಡ ಶೇಖಣ್ಣ ಬಾಳಿಕಾಯಿ ಮಾತನಾಡಿ, ರೈತರ ಶೇಂಗಾ ಬೆಳೆಯನ್ನು ಇಲ್ಲೇ ಖರೀದಿಸಬೇಕು ಹಾಗೂ 10 ಕ್ವಿಂಟಲ್ ಬೆಳೆಯನ್ನು ಖರೀದಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.
ಪರಶುರಾಮ ಕಲಾಲ, ರವಿ ಕಿರೇಸೂರ, ಶಿವಾನಂದ ಕೊಪ್ಪದ, ಉಮೇಶಗೌಡ ಅಲ್ಲಾಪುರ, ಬಸವರಾಜ ಅಲ್ಲಾಪುರ, ಜಿ.ಎಸ್. ಸುಂಕದ, ಎಸ್.ಬಿ. ಗೌಡಪ್ಪನವರ, ಬಸವರಾಜ ಹೂಗಾರ, ಮಂಜುನಾಥ ರಂಗನಾಯ್ಕರ, ಯು.ವೈ. ಪಾಟೀಲ, ಬಸವರಾಜ ರೇವಡೆಣ್ಣವರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.