5 ಕಡೆ ತಲೆ ಎತ್ತಲಿವೆ ಸ್ಮಾರ್ಟ್‌ ಪಾರ್ಕಿಂಗ್‌ ಕಟ್ಟಡ


Team Udayavani, Jun 17, 2017, 3:02 PM IST

hub2.jpg

ಹುಬ್ಬಳ್ಳಿ: ವಾಹನಗಳ ಬೇಕಾಬಿಟ್ಟಿ ನಿಲುಗಡೆ ತಪ್ಪಿಸುವ ಹಾಗೂ ಸುಗಮ ಸಂಚಾರಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಸುಮಾರು ಐದು ಕಡೆ ಬಹು ಅಂತಸ್ತಿನ ವಾಹನ ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ನಾಲ್ಕು ಪಾಲಿಕೆ ವ್ಯಾಪ್ತಿಯ ಜಾಗಗಳಾದರೆ, ಒಂದು ಸ್ಥಳ ರೈಲ್ವೆ ಇಲಾಖೆಯದ್ದಾಗಿದ್ದು, ಇಲಾಖೆ ಒಪ್ಪಿಗೆ ನೀಡಿದರೆ ಅಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಾಗಲಿದೆ. 

ಅವಳಿನಗರದಲ್ಲಿ ವಾಹನ ನಿಲುಗಡೆಗೆ ಎಲ್ಲಿಯೂ ವ್ಯವಸ್ಥಿತ ಜಾಗ ಇಲ್ಲವಾಗಿದೆ. ಅನೇಕ ಮಾರುಕಟ್ಟೆ ಸ್ಥಳ, ಪ್ರಮುಖ ವ್ಯಾಪಾರ-ವಾಣಿಜ್ಯ ರಸ್ತೆಗಳು ಅಲ್ಲದೆ ವಿವಿಧ ಕಡೆಗಳಲ್ಲಿ ವಾಹನ ನಿಲುಗಡೆ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಕೆಲವೊಮ್ಮೆ ಇದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಬಹು ಅಂತಸ್ತಿನ ಹಾಗೂ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. 

ಈ ಹಿಂದೆ ಹುಬ್ಬಳ್ಳಿಯ ಕೋರ್ಟ್‌ ವೃತ್ತದ ಬಳಿಯ ಜಾಗದಲ್ಲಿ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ಯೋಜಿಸಿ ಇದಕ್ಕಾಗಿ ಬಿಡ್‌ದಾರರನ್ನು ಕರೆಯಲಾಗಿತ್ತು. ಕೆಲ ಬಿಡ್‌ದಾರರು  ಮುಂದಾಗಿದ್ದರಲ್ಲದೆ, ತಮ್ಮದೇಯಾದ ಸಮೀಕ್ಷೆ ನಡೆಸಿ ಕೋಟ್ಯಂತರ ರೂ.ವೆಚ್ಚ ಮಾಡಿ ಕಟ್ಟಡ ನಿರ್ಮಿಸಿದರೆ ಲಾಭವಾಗದು ಎಂಬ ಅನಿಸಿಕೆ ಹಿನ್ನೆಲೆಯಲ್ಲಿ ಇದರಿಂದ  ಹಿಂದೆ ಸರಿದಿದ್ದರು. ಅನಂತರದಲ್ಲಿ ವಾಹನ ನಿಲುಗಡೆ ಕಟ್ಟಡ ಪ್ರಸ್ತಾಪ ಪ್ರಸ್ತಾಪವಾಗಿಯೇ ಉಳಿದಿತ್ತು. ಇದೀಗ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳಿಗೆ ಒತ್ತು ನೀಡಲಾಗಿದೆ. 

ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ: ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳನ್ನು ಸ್ಮಾರ್ಟ್‌ ಸಿಟಿ ಅಡಿಯಲ್ಲಿ ನಿರ್ಮಿಸಲು ಸದ್ಯಕ್ಕೆ ನಗರದ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಕೋರ್ಟ್‌ ವೃತ್ತದ ಬಳಿಯ ಜಾಗ, ದುರ್ಗದ ಬಯಲು ಎಂ.ಜಿ.ಮಾರುಕಟ್ಟೆ, ಹೊಸೂರಿನಲ್ಲಿ ಗಾಳಿ ದುರ್ಗಮ್ಮ ದೇವಿ ದೇವಸ್ಥಾನ ಎದುರಿನ ವೇರ್‌ಹೌಸ್‌ ಬಳಿ, ಮೇದಾರ ಓಣಿಯ ಪಾಲಿಕೆ ಒಡೆತನದ ಕಟ್ಟಡಗಳ ಸ್ಥಳ ಹಾಗೂ ರೈಲ್ವೆ ನಿಲ್ದಾಣ ಜಾಗದಲ್ಲಿ ಹೀಗೆ ಒಟ್ಟು ಐದು ಕಡೆ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. 

ರೈಲ್ವೆ ನಿಲ್ದಾಣದ ಪ್ರವೇಶ ಜಾಗದ ಬಳಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಬೇಕಿದೆ. ಆಗ ಮಾತ್ರ ಅಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಅಡಿಯಲ್ಲಿ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಬಹುತೇಕ ಕಟ್ಟಡಗಳು ವಿನ್ಯಾಸ, ನಿರ್ಮಾಣ ಬಂಡವಾಳ, ನಿರ್ವಹಣೆ ಮತ್ತು ಹಸ್ತಾಂತರ(ಡಿಬಿಎಫ್ಒಟಿ)ಮಾದರಿಯಲ್ಲಿ ನಿರ್ಮಾಣಗೊಳ್ಳಲಿವೆ. ಕಟ್ಟಡ ನಿರ್ಮಾಣಕ್ಕೆ ಯಾರಾದರೂ ಬಿಡ್‌ದಾರರರು ಮುಂದಾದರೆ ಕಟ್ಟಡದ ವಿನ್ಯಾಸ, ನಿರ್ಮಾಣ ಹಾಗೂ ನಿರ್ವಹಣೆಯನ್ನು ಅವರೇ ಕೈಗೊಳ್ಳಬೇಕಿದ್ದು, ಇಂತಿಷ್ಟು ವರ್ಷದ ಕಾಲಾವಧಿ ಅನಂತರ ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರಿಸಬೇಕಿದೆ.

ನಗರದ ಕೋರ್ಟ್‌ ವೃತ್ತದ ಬಳಿಯ ಜಾಗದಲ್ಲಿ ಡಿಬಿಎಫ್ಒಟಿ ಮಾದರಿಯಲ್ಲಿಯೇ ಸುಮಾರು 50ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಆರ್ಥಿಕ ಸಬಲತೆ ವರದಿಗಾಗಿ ಟೆಂಡರ್‌ ಆಹ್ವಾನಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳು ಬಹುತೇಕವಾಗಿ ಡಿಬಿಎಫ್ಒಟಿ ಮಾದರಿಯಲ್ಲೇ ನಿರ್ಮಾಣಗೊಳ್ಳಲಿವೆ. ಬಹುಪಯೋಗಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ ಕುರಿತಾಗಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದ ಸಲಹಾ ಏಜೆನ್ಸಿ ಪ್ರೈಸ್‌ವಾಟರ್‌ ಹೌಸ್‌ ಕೂಪರ್‌ ಸಂಸ್ಥೆ ಅಕ್ಟೋಬರ್‌ 1ರೊಳಗೆ ವಿಸ್ತೃತ ಯೋಜನಾ ರದಿ(ಡಿಪಿಆರ್‌)ಸಿದ್ಧಪಡಿಸಲಿದೆ. 

2 ಸಾವಿರ ಬೈಕ್‌-750 ಕಾರು: ಬಹುಸ್ತರ ವಾಹನ ನಿಲುಗಡೆ ಕಟ್ಟಡದಲ್ಲಿ ಸುಮಾರು 500ರಿಂದ 2,000 ಮೋಟಾರ್‌ ಬೈಕ್‌ಗಳ ನಿಲುಗಡೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸುಮಾರು 750 ಕಾರು-ಜೀಪುಗಳ ನಿಲುಗಡೆಗೆ ಸ್ಥಳಾವಕಾಶ ನೀಡಲಾಗುತ್ತದೆ. ವಾಹನಗಳನ್ನು ಲಿಫ್ಟ್ ಮಾಡಿ ಮೇಲಿನ ಮಹಡಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಅಳವಡಿಸಲಾಗುತ್ತಿದೆ. 

ನಗರದಲ್ಲಿ ವಿವಿಧ ಕಡೆ ಬಸ್‌ ಇನ್ನಿತರ ವಾಹನಗಳ ವಾಹನ ನಿಲುಗಡೆ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಸುಮಾರು 2.7ಲಕ್ಷ ಚದರ ಅಡಿ ಜಾಗದ ಲಭ್ಯತೆ ಇದ್ದರೆ, ಬಿಆರ್‌ಟಿಎಸ್‌ ಹೊಸೂರು ಡಿಪೋದಲ್ಲಿ ಸುಮಾರು 1.6ಲಕ್ಷ ಚದರ ಅಡಿ, ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆ ಡಿಪೋದಲ್ಲಿ ಸುಮಾರು 9ಲಕ್ಷ ಚದರ ಅಡಿ, ಸಿಬಿಟಿಯಲ್ಲಿ 1ಲಕ್ಷ ಚದರ ಅಡಿ ಹಾಗೂ ಚನ್ನಮ್ಮ ವೃತ್ತದಲ್ಲಿ ಸುಮಾರು 60ಸಾವಿರ ಚದರ ಅಡಿ ಜಾಗವಿದೆ. 

ಸುಗಮ ಸಂಚಾರ ನಿಟ್ಟಿನಲ್ಲಿ ವಾಹನ ನಿಲುಗಡೆ ಕಟ್ಟಡಗಳ ಜತೆಗೆ ಕೊಪ್ಪಿಕರ ರಸ್ತೆ ಹಾಗೂ ಸ್ಟೇಶನ್‌ ರಸ್ತೆಗಳನ್ನು ವಾಹನ ನಿಲುಗಡೆಗೆ ನಿಷೇಧ ರಸ್ತೆಗಳನ್ನಾಗಿಸುವ ಸಾಧ್ಯತೆಯೂ ಇದೆ. ಅಲ್ಲದೆ ಕೆಲವೊಂದು ಮಾರ್ಗಗಳನ್ನು ಏಕಮುಖ ರಸ್ತೆಗಳನ್ನಾಗಿ ಮಾಡಲಾಗುತ್ತಿದ್ದರೆ, ಇನ್ನು ಕೆಲವು ರಸ್ತೆಗಳನ್ನು ವಾಹನ ರಹಿತ ವಲಯಗಳನ್ನಾಗಿ ಹಾಗೂ ಕೇವಲ ಪಾದಚಾರಿ ಹಾಗೂ ಸೈಕಲ್‌ ಸಂಚಾರ ರಸ್ತೆಗಳನ್ನಾಗಿ ಮಾಡುವ ಯೋಜನೆ ಹೊಂದಲಾಗಿದೆ.

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.