ಸಮಾಜ ಸೇವೆಯಲ್ಲಿ ಧಾರ್ಮಿಕ ಚಿಂತನೆ ಅಗತ್ಯ
Team Udayavani, Jul 15, 2018, 4:29 PM IST
ಅಳ್ನಾವರ: ಜನಪ್ರತಿನಿಧಿಗಳು ಸಮಾಜ ಸೇವೆ ಸಲ್ಲಿಸುವಾಗ ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಅವರ ಸೇವೆ ಉತ್ಕೃಷ್ಟತೆಯಿಂದ ಕೂಡಿರುತ್ತದೆ ಎಂದು ಪಪಂ ಅಧ್ಯಕ್ಷೆ ಭಾಗ್ಯವತಿ ಕುರುಬರ ಅಭಿಪ್ರಾಯಪಟ್ಟರು. ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ವತಿಯಿಂದ ಪಪಂನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಪುಣ್ಯಭೂಮಿಯಲ್ಲಿ ಸನ್ಮಾನ ದೊರೆತಿದ್ದು, ನನ್ನ ಸೌಭಾಗ್ಯ. ಆರಾಧ್ಯ ದೇವರ ಅನುಗ್ರಹ ಸದಾ ನನ್ನ ಸೇವೆಗೆ ದೊರಕಲಿ ಎಂದ ಅವರು, ಈ ಧಾರ್ಮಿಕ ತಾಣದಲ್ಲಿ ನಡೆಯುತ್ತಿರುವ ಧಾರ್ಮಿಕ, ಆಧ್ಯಾತ್ಮಿಕ, ಶಿವಾನುಭವ ಗೋಷ್ಠಿಗಳು ಭಕ್ತ ಸಮೂಹಕ್ಕೆ ನೈತಿಕ ಬೆಂಬಲ ಸೂಚಿಸುತ್ತಾ ಸಾಗುವುದರ ಜೊತೆಗೆ ಸಮಾಜದಲ್ಲಿ ಸನ್ನಡತೆಯನ್ನು ಜೀವಂತಿಕೆಯಲ್ಲಿಡಲು ಸಹಕಾರಿಯಾಗಿವೆ ಎಂದರು.
ಉಪಾಧ್ಯಕ್ಷ ಕಿರಣ ಗಡಕರ ಮಾತನಾಡಿ, ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಸದಾ ಸಮಾಜದ ಒಳಿತಿಗೆ ಶ್ರಮಿಸುತ್ತಿದೆ. ವ್ಯಕ್ತಿಯ ಬೆಳವಣಿಗೆ, ಸಾಧನೆಯಲ್ಲಿ ಅವಕಾಶಗಳ ಸದ್ಬಳಕೆ ಜೊತೆಗೆ ಸಾರ್ವಜನಿಕರ ಸಹಕಾರ ನಿರ್ಣಾಯಕವಾಗಿರುತ್ತದೆ. ಇಂದಿನ ಸನ್ಮಾನ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ಈ ಜನಪ್ರತಿನಿಧಿ ಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಭಾಗ್ಯವತಿ ಅವರು ನೂತನವಾಗಿ ಅಧ್ಯಕ್ಷರಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿ. ಇವರಲ್ಲಿ ಅಡಗಿರುವ ಧಾನ, ಧರ್ಮದ ಜಾಗೃತಿ ಹಾಗೂ ಸಮಾಜಮುಖೀ ಚಿಂತನೆಗಳು ಇತರರಿಗೆ ಮಾದರಿಯಾಗಿವೆ ಎಂದರು.
ಹಿರಿಯರಾದ ಎಸ್.ಡಿ. ದೇಗಾವಿಮಠ ಮಾತನಾಡಿದರು. ಐ.ಸಿ. ಹಸಬಿಮಠ, ವಿನಾಯಕ ಕುರುಬರ, ವೀರೇಶ ಲಿಂಗನಮಠ, ವಿನಾಯಕ ಹಿರೇಮಠ, ರಾಜು ಬೆಂಡಿಗೇರಿ, ಮಂಜುನಾಥ ಹಕ್ಕಿ, ರಾಜಶೇಖರ ಕೌಜಲಗಿ, ಉಮೇಶ ದೊಡ್ಡಮನಿ, ಪೂರ್ಣಿಮಾ ಮುತ್ನಾಳ, ಜಯಶ್ರೀ ಸೊಪ್ಪಿ, ಶಕುಂತಲಾ ದೇಗಾವಿಮಠ ಇದ್ದರು. ಪಲ್ಲಕ್ಕಿ ಸೇವೆ, ಮಹಾ ಮಂಗಳಾರತಿ, ಪ್ರಸಾದ ಸೇವೆ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.