ಸೌರಶಕ್ತಿ ಸಮಸ್ಯೆ ಪರಿಹಾರದ ಸಾಧನವಾಗಲಿ
Team Udayavani, May 31, 2017, 3:15 PM IST
ಹುಬ್ಬಳ್ಳಿ: ಸೌರಶಕ್ತಿ ಕೇವಲ ಸೋಲಾರ್ ಪ್ಯಾನಲ್ಗಳಿಗೆ ಸೀಮಿತಗೊಳ್ಳದೆ ಜನರ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ವರ್ಗಗೊಂಡರೆ ಅದಕ್ಕೆ ಹೆಚ್ಚಿನ ಮೌಲ್ಯ ಬರಲಿದೆ. ಈ ನಿಟ್ಟಿನಲ್ಲಿ ಸೆಲ್ಕೋ ಕಂಪೆನಿ ಮಹತ್ವದ ಹೆಜ್ಜೆ ಇರಿಸಿರುವುದು ಸಂತಸದ ವಿಚಾರ ಎಂದು ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಜೈರಾಮ ರಮೇಶ ಅಭಿಪ್ರಾಯಪಟ್ಟರು.
ಸೆಲ್ಕೋ ಫೌಂಡೇಶನ್ನ ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, 1980ರ ಸುಮಾರಿಗೆ ಸೌರಶಕ್ತಿ ವಿಚಾರದಲ್ಲಿ ಭಾರತ ಅತ್ಯಂತ ಹಿಂದುಳಿದಿತ್ತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಈ ಬಗ್ಗೆ ಗಮನ ನೀಡಲಾಗಿತ್ತು. ಇದೀಗ ವಾತಾವರಣದ ಬದಲಾವಣೆ ಹಾಗೂ ಜಾಗತಿಕ ತಾಪಮಾನದಿಂದ ಸೌರಶಕ್ತಿ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಈ ಹಿಂದೆ ಬಯೋಗ್ಯಾಸ್ ಹಾಗೂ ಪವನ ಶಕ್ತಿಗಳು ಸದ್ದು ಮಾಡಿದವಾದರೂ ಅವುಗಳಿಂದ ನಿರೀಕ್ಷಿತ ಕ್ರಾಂತಿ ಸಾಧ್ಯವಾಗಲಿಲ್ಲ. ಪವನಶಕ್ತಿ ಎಂಬುದು ತೆರಿಗೆ ತಪ್ಪಿಸಿಕೊಳ್ಳುವ ಸಿರಿವಂತರ ಹೂಡಿಕೆ ಕ್ಷೇತ್ರ ಎನ್ನುವಂತಾಗಿದೆ. ಜರ್ಮನ್ ಜನಸಂಖ್ಯೆ ಕೇವಲ 80 ಮಿಲಿಯನ್ ಆಗಿದ್ದರೂ ಶೇ.30ರಷ್ಟು ನಿತ್ಯದ ಇಂಧನ ಬಳಕೆ ಸೌರಶಕ್ತಿ ಮೂಲದಿಂದಲೇ ಬರುತ್ತಿದೆ.
ಭಾರತ ವಿಶ್ವದಲ್ಲಿ ನಾಯಕತ್ವ ಸ್ಥಾನ ಪಡೆಯಬೇಕಾದರೆ ಸೌರಶಕ್ತಿ ಪರಿಣಾಮಕಾರಿ ಬಳಕೆ ಹಾಗೂ ಇದರ ಪ್ರಯೋಜನ-ಪರಿಹಾರಗಳನ್ನು ಸಮರ್ಪಕವಾಗಿ ಜನರಿಗೆ ಹಸ್ತಾಂತರ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು. ಸೂರ್ಯಮಿತ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರುಣಾ ಟ್ರಸ್ಟ್ ಸಂಸ್ಥಾಪಕ ಪದ್ಮಶ್ರೀ ಪುರಸ್ಕೃತ ಡಾ| ಎಚ್.ಸುದರ್ಶನ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಡೆಗಳಲ್ಲಿ ನಾವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಪಡೆದಿದ್ದೆವು.
ಜನರ ಚಿಕಿತ್ಸೆಗೆ ಸೆಲ್ಕೋದ ಸೌರಶಕ್ತಿ ಅನೇಕ ಉಪಕರಣಗಳು ನೆರವಾಗುತ್ತಿವೆ. ಈ ಪ್ರಶಸ್ತಿ ಬಂದಿರುವುದು ಹಾಗೂ ನಾನು ಮೆಚ್ಚುವ ಜೈರಾಮ ರಮೇಶ ಅವರಿಂದ ಇದನ್ನು ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು. ಸೆಲ್ಕೋ ಚೇರನ್ ಮ್ಯಾಗ್ಸೆಸೆ ಪುರಸ್ಕೃತ ಡಾ| ಎಚ್. ಹರೀಶ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಮಹಾರಾಷ್ಟ್ರದ ನೀಲಮ್ ಮಿಶ್ರಾ, ಅರ್ಜುನ ಮೆಂಡಾ, ಥಾಮಸ್ ಮಾತನಾಡಿದರು. ಸೆಲ್ಕೋದ ಸಿಇಒ ಮೋಹನ ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ತೋರಿದ ಸೆಲ್ಕೋ ಕಂಪೆನಿಯ ಕುಂದಾಪುರ ಶಾಖೆಗೆ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.