ಹೆಸರು ಬಿತ್ತನೆ ಬೀಜ ಕೊರತೆ; ಅನ್ನದಾತರ ಪರದಾಟ

ಪೊಲೀಸರೊಂದಿಗೆ ಮಾತಿನ ಚಕಮಕಿ

Team Udayavani, Jun 3, 2020, 12:12 PM IST

ಹೆಸರು ಬಿತ್ತನೆ ಬೀಜ ಕೊರತೆ; ಅನ್ನದಾತರ ಪರದಾಟ

ನವಲಗುಂದ: ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಬಿತ್ತನೆಗಾಗಿ ರೈತರು ಜಮೀನುಗಳನ್ನು ಹದ ಮಾಡಿಕೊಡಿದ್ದು, ಹೆಸರು ಬಿತ್ತನೆ ಬೀಜಕ್ಕಾಗಿ ಪರದಾಡುವಂತಾಗಿದೆ.

ಮಂಗಳವಾರ ಪಟ್ಟಣದ ಎಪಿಎಂಸಿಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಬೆಳ್ಳಂಬೆಳಗ್ಗೆಯಿಂದಲೇ ಹೆಸರು ಬೀಜ ಖರೀದಿಗಾಗಿ ಮುಗಿಬಿದ್ದು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಅಗತ್ಯ ಬೀಜದ ದಾಸ್ತಾನು ಇಲ್ಲದ್ದರಿಂದ ಹಿಡಿಶಾಪ ಹಾಕುತ್ತ ಮರಳಿ ಹೋಗುವಂತಾಯಿತು.

ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳು ಆಯಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಂದರೆಯಾಗದಂತೆ ಬಿತ್ತನೆ ಬೀಜಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ದಾಸ್ತಾನು ಇದ್ದದ್ದು 11 ಕ್ವಿಂಟಲ್‌ ಹೆಸರು ಬೀಜಮಾತ್ರ. ಕೆಲವು ರೈತರಿಗೆ ವಿತರಿಸಿ, ಸ್ಟಾಕ್‌ ಬಂದ ನಂತರ ಉಳಿದವರಿಗೆ ವಿತರಿಸಲಾಗುವುದೆಂದು ಸಬೂಬು ಹೇಳಿ ಕೇಂದ್ರದವರು ಜಾರಿಕೊಂಡರು. ಸರದಿಯಲ್ಲಿದ್ದ ನೂರಾರು ರೈತರಿಗೆ ಜೂ. 4 ಹಾಗೂ 6ರ ವರೆಗೆ ಟೋಕನ್‌ ನೀಡಿ ಕಳುಹಿಸಿದರು. ಇನ್ನು ಒಂದೇ ಕಂಪ್ಯೂಟರ್‌ ಇರುವುದರಿಂದ ರೈತರ ದಾಖಲಾತಿ ಪರಿಶೀಲನೆ ಅಡೆತಡೆಯಾಗಿ ಸಂಜೆಯವರೆಗೂ ರೈತರು ಬೀಜಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ.

ಮುಗಿಬಿದ್ದಿದ್ದು ಯಾಕೆ?: ರೈತ ಸಂಪರ್ಕ ಕೇಂದ್ರದಲ್ಲಿ 5 ಕೆಜಿಗೆ 360 ರೂ. ಇದ್ದರೆ, ಹೊರಗಡೆ ವ್ಯಾಪಾರಸ್ಥರಲ್ಲಿ 5 ಕೆಜಿಗೆ 1100ರಿಂದ 1700 ರೂ.ವರೆಗೆ ವಿವಿಧ ಕಂಪನಿಗಳ ಬೀಜಗಳು ಮಾರಾಟಕ್ಕೆ ಇವೆ. ಹೀಗಾಗಿ ಹೆಚ್ಚಿನ ಅನ್ನದಾತರು ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಕೊರೊನಾದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಸರಕಾರ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜಗಳನ್ನು ಆಯಾ ಕ್ಷೇತ್ರಗಳಿಗೆ ಕಳುಹಿಸಿದ್ದರೆ ಹದಗೊಳಿಸಿದ ಜಮೀನುಗಳಲ್ಲಿ ರೈತರು ಇಷ್ಟೊತ್ತಿಗೆ ಬಿತ್ತನೆ ಕಾರ್ಯ ಪ್ರಾರಂಭಿಸುತ್ತಿದ್ದರು.

10 ಕ್ವಿಂಟಲ್‌ ದಾಸ್ತಾನಿದೆ ಎಂದಿದ್ದ ಅಧಿಕಾರಿಗಳು ಕೇವಲ 23 ರೈತರಿಗೆ ಮಾತ್ರ ನೀಡಿ ಇನ್ನುಳಿದ ಬೀಜಗಳನ್ನು ರಾತ್ರೋರಾತ್ರಿ ಬೇರೆಯವರಿಗೆ ನೀಡಿದ್ದಾರೆ. ಕೊರೊನಾದಿಂದ ಜೀವನ ನಡೆಸುವುದು ತೊಂದರೆಯಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ನೀಡುವ ಬೀಜಗಳು ಆಸರೆಯಾಗುತ್ತವೆ ಎಂದು ಬಂದರೆ ದಾಸ್ತಾನಿಲ್ಲ ಎಂಬುದನ್ನು ಕೇಳಿ ಬಂದ ದಾರಿಗೆ ಸುಂಕ ಇಲ್ಲದೇ ಅಲೆದಾಡಬೇಕಾಗಿದೆ. ಜಮೀನು ಹದಗೊಳಿಸಿಟ್ಟಿದ್ದು, ಬಿತ್ತನೆ ಕೈಗೊಳ್ಳುವುದು ಯಾವಾಗ ಎಂಬ ಚಿಂತೆ ಆವರಿಸಿದೆ. –ನಿಂಗಪ್ಪ ಸಿದ್ದಗಿರಿ, ಬೆಳವಟಗಿ ರೈತ

ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Kannada-Replica

ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.