ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ
Team Udayavani, Feb 22, 2017, 2:32 PM IST
ಧಾರವಾಡ: ಗೋ ರಕ್ಷಣೆಗೆ ಮುಂದಾಗಿರುವ ಕಾರ್ಯಕರ್ತರನ್ನೇ ಬಂಧಿಸುತ್ತಿರುವ ಸರಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಖಂಡಿಸಿ ಶ್ರೀರಾಮಸೇನಾ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಗೋ ಮಾತೆಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ.
ಆದರೆ ಅವುಗಳನ್ನು ರಕ್ಷಣೆಗೆ ಮುಂದಾಗಿರುವ ಕಾರ್ಯಕರ್ತರನ್ನೇ ಬಂಧಿಸುವ ಮೂಲಕ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ. ಗೋ ಕಳ್ಳರು ಯಾವುದೇ ರೀತಿಯ ಎಪಿಎಂಸಿ ಮತ್ತು ಆರ್‌ಟಿಒ ಮತ್ತು ಪಶು ವೈದ್ಯಕೀಯರ ಅನುಮತಿ ಪಡೆಯದೇ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಅಂಥವರನ್ನು ಬಂಧಿಸಿದೇ ರಕ್ಷಕರನ್ನು ಬಂಧಿಸುವುದು ಹೀನಕೃತ್ಯ.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗೋ ರಕ್ಷಕರನ್ನು ಬಿಡುಗಡೆ ಮಾಡಿ, ಕಳ್ಳರನ್ನು ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರ ಸಂಚಾಲಕ ಮಂಜುನಾಥ ಕವಳಿ, ವಿಶ್ವನಾಥ ಕುರಟ್ಟಿ, ನಾಗರಾಜ ಗಾಣಿಗೇರ, ಪುನೀತ ಹಿರೇಮಠ, ಲತಾ ಆರೇರ ಇತರರು ಇದ್ದರು.
ಹಿಂದೂ ಜನಜಾಗೃತಿ ಸಮಿತಿ: ಸಂಸತ್ತಿನಲ್ಲಿ ಗಲಭೆ ನಡೆಸಿ ಕಾರ್ಯ ಕಲಾಪ ನಿಲ್ಲಿಸುವುದರಿಂದ ಉಂಟಾದ ಕೋಟ್ಯಂತರ ರೂ.ಗಳ ಹಾನಿಯನ್ನು ಸಂಸದರ ವೇತನದಿಂದಲೇ ವಸೂಲಿ ಮಾಡಬೇಕು ಮತ್ತು ಹಜ್ ಯಾತ್ರೆಗೆ ನೀಡಲಾಗುವ ಅನುದಾನವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಲ್ಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಘಟಕವು ಡಿಸಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಕೇರಳದಲ್ಲಿ ಸಾಮ್ಯವಾದಿ ಹಾಗೂ ಮತಾಂಧರರು ಹಿಂದೂ ಮುಖಂಡರ ಮೇಲೆ ಆಕ್ರಮಣ ನಡೆಸಿ, ಅವರನ್ನು ಕೊಲೆ ಮಾಡುತ್ತಿದ್ದಾರೆ. ಈ ಆಕ್ರಮಣಗಳು ಹಿಂದೂ ವಿರೋಧಿ ಷಡ್ಯಂತ್ರ ಎಂಬ ಅನುಭವವಾಗುತ್ತಿದೆ. ಇದರ ಮೇಲೆ ಕೇಂದ್ರೀಯ ಅನ್ವೇಷಣೆ ವಿಭಾಗವು ತಪಾಸಣೆ ಮಾಡಲಿ.
ಹಿಂದೂ ದ್ವೇಷದಿಂದ ಪೀಡಿತರಾಗಿ ಪಠ್ಯ-ಪುಸ್ತಕಗಳಲ್ಲಿ ದೇವತೆಗಳ ಹೆಸರುಗಳನ್ನು ತೆಗೆದು ಹಾಕಿರುವ ಬಂಗಾಳ್ ಪಠ್ಯಪುಸ್ತಕ ಮಂಡಳಿ ವಿರುದ್ಧ ಕಾರ್ಯಾಚರಣೆ ನಡೆಯಲಿದೆ. ತೆಗೆದು ಹಾಕಲಾಗಿರುವ ಶಬ್ದಗಳನ್ನು ಮತ್ತೆ ಪಠ್ಯಪುಸ್ತಕಗಳಲ್ಲಿ ಹಾಕುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.