ಸ್ಟಾಂಪ್ ಪೇಪರ್ ಕರಾಮತ್ತು; ಮನೆಗಳಿಗೆ ಆಪತ್ತು
•ಸೂರು ಕಳೆದುಕೊಂಡು ಬೀದಿಗೆ ಬಂದವರ ಗೋಳು•ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಕಟ್ಟಿದ ಮನೆ ಹಾಳು
Team Udayavani, Jun 11, 2019, 7:07 AM IST
ಹುಬ್ಬಳ್ಳಿ: ಸ್ವಂತದ್ದೊಂದು ಸೂರು ಹೊಂದಬೇಕೆಂಬ ಆಸೆಯಿಂದ ಯಾರನ್ನೋ ನಂಬಿ ನಗರ ಮಧ್ಯಭಾಗದಲ್ಲಿ ಕಡಿಮೆ ಹಣಕ್ಕೆ ಜಾಗ ಸಿಗುತ್ತದೆಯಲ್ಲ ಎಂದು ಹಿಂದೆ-ಮುಂದೆ ನೋಡದೆ ನಿವೇಶನ ಪಡೆದು, ಮನೆ ಕಟ್ಟಿದವರೀಗ ಪಶ್ಚಾತಾಪ ಪಡುವಂತಾಗಿದೆ. ಇಲ್ಲಿನ ಬೆಂಗೇರಿಯ ಸುಮಾರು 72 ಮನೆಯವರು ಹಣವೂ ಇಲ್ಲ, ಮನೆಯೂ ಇಲ್ಲದೆ ಅಕ್ಷರಶಃ ಬೀದಿಪಾಲಾದ ಸ್ಥಿತಿ ಅನುಭವಿಸುವಂತಾಗಿದೆ.
ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿ ಸುಮಾರು 2 ಎಕರೆ 28 ಗುಂಟೆ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದ 52 ಕುಟುಂಬಗಳು ಯಾರೋ ಮಾಡಿದ ತಪ್ಪಿಗೆ ಇದೀಗ ಮನೆ ಕಳೆದುಕೊಳ್ಳುವಂತಾಗಿದೆ. ಕಳೆದ 20-30 ವರ್ಷಗಳಿಂದ ಇದ್ದ ಜಾಗ ಇನ್ನೇನು ತಮ್ಮದಾಯಿತು ಎಂದು ನಂಬಿ ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಮನೆ ಕಟ್ಟಿದವರೀಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ.
ಕಡಿಮೆ ದರದಲ್ಲಿ ಜಾಗ ಕೊಡುತ್ತೇವೆಂದು ಜನರನ್ನು ನಂಬಿಸಿ ಇನ್ನೊಬ್ಬರ ಜಾಗ ಮಾರಾಟ ಮಾಡುವವರ ದಂಧೆ ನಗರದಲ್ಲಿ ಜೋರಾಗಿ ನಡೆಯುತ್ತಿದೆ. ಇಂತಹ ವಂಚಕರಿಗೆ ಮಧ್ಯಮವರ್ಗ, ಬಡವರೇ ಟಾರ್ಗೆಟ್. ಏಕೆಂದರೆ ಅವರು ಇದ್ದ ಹಣದಲ್ಲಿಯೇ ಮನೆ ಕಟ್ಟಿಸಿಕೊಳ್ಳಬೇಕೆಂಬ ಕನಸು ಕಂಡಿರುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಖದೀಮರ ಜಾಲವು ಅವರಿಗೆ ಕಡಿಮೆ ದರದಲ್ಲಿ ಜಾಗ ಕೊಡಿಸುತ್ತೇವೆಂದು 10-20 ರೂ. ಬಾಂಡ್ ಪೇಪರ್‌ನಲ್ಲಿ ಬರೆದುಕೊಟ್ಟು ಬಿಡುತ್ತಾರೆ. ಒಂದು ವೇಳೆ ಜಾಗಕ್ಕೆ ನೋಂದಣಿ ಮಾಡಿಸಬೇಕೆಂದರೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಅಲ್ಲದೆ ಬ್ಯಾಂಕ್‌ನಿಂದ ಸಾಲ ಮಾಡಿ ಕಟ್ಟಿಸಬೇಕೆಂದರೂ ಇನ್ನಿತರೆ ಕಾಗದಪತ್ರಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ ಎಂಬುದು ಬಹುತೇಕ ಬಡವರ ಆಲೋಚನೆ. ಹೀಗಾಗಿ ವಂಚಕರು ಇದನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡು ಯಾರದೋ ಜಾಗವನ್ನು ತಮ್ಮದೆಂದು ನಂಬಿಸಿ ಬಡವರನ್ನು ವಂಚಿಸುತ್ತಿರುವುದು ಸಾಮಾನ್ಯವಾಗಿದೆ.
ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿಯ ಮೋಹನ ಮಂಕಣಿ ಎಂಬುವರ ಮಾಲೀಕತ್ವದ ಜಾಗೆಯಲ್ಲೂ ನಡೆದದ್ದು ಇದೇ ರೀತಿ. ಮಂಕಣಿ ಅವರ ಜಾಗವನ್ನು ತಮ್ಮದೆಂದು ನಂಬಿಸಿ ಸುಮಾರು 52 ಕುಟುಂಬವರಿಗೆ ಮಾರಾಟ ಮಾಡಲಾಗಿದೆ. ಜಾಗ ಮಾರಿದವರು ಆರಾಮವಾಗಿದ್ದಾರೆ, ಖರೀದಿಸಿದವರು ಮಾತ್ರ ಬೀದಿಪಾಲಾಗಿ ಮುಂದೇನು ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.