ಪರಿಸರ ಉಳಿವಿಗೆ ಒಂದಾಗಿ ಶ್ರಮಿಸಿ
Team Udayavani, Sep 21, 2018, 5:01 PM IST
ಧಾರವಾಡ: ಸಂಗೀತದ ಮಧುರ ನಾದವು ಗೊಂದಲವನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸುವಂತಹ ದೈವೀಕಲೆಯಾಗಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಜೆ.ಎಚ್. ಕುಲಕರ್ಣಿ ಹೇಳಿದರು. ಇಲ್ಲಿನ ಶ್ರೀನಗರದಲ್ಲಿರುವ ಪರಿಸರ ಭವನದಲ್ಲಿ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಹು-ಧಾ ನಾಗರಿಕ ಪರಿಸರ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದ್ಮಭೂಷಣ ಡಾ| ಪುಟ್ಟರಾಜ ಗವಾಯಿಗಳ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ, ಸಂಗೀತೋತ್ಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರದ ಉಳಿವಿಗೂ ನಾವೆಲ್ಲ ಜೊತೆಗೂಡಿ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಡಾ| ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ ವಿದ್ಯಾರ್ಥಿಗಳಿಗೆ ಬದುಕಲು ತೋರಿಸಿಕೊಟ್ಟಿದಲ್ಲದೆ, ಸಂಗೀತದ ಜ್ಞಾನ ಅವರಲ್ಲಿ ಬರುವಂತೆ ಪ್ರೇರಣೆ ನೀಡಿದ ಮಹಾನ್ ವ್ಯಕ್ತಿ. ಅಲ್ಲದೆ ಈಗ ಅವರ ಅನೇಕ ಶಿಷ್ಯರು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ ಎಂದರು. ಕಲಾವಿದ ಸದಾಶಿವ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ| ಸಾತಲಿಂಗಪ್ಪ ದೇಸಾಯಿ ಸಾಥ್ ನೀಡಿದರು. ಬಸವರಾಜ ಹಿರೇಮಠ ಸಂವಾದಿನಿ ಪ್ರಸ್ತುತಪಡಿಸಿದರೆ, ಅಕ್ಕಮಹಾದೇವಿ ಮಠ ಅವರ ವಯಲಿನ್ ಜುಗಲ್‌ಬಂದಿ ಗಮನ ಸೆಳೆಯಿತು.
ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು. ಪಂ| ಎಂ. ವೆಂಕಟೇಶಕುಮಾರ, ಡಾ| ವಿಲಾಸ ಕುಲಕರ್ಣಿ, ಪಂ|ಡಾ| ಶಾಂತಾರಾಮ ಹೆಗಡೆ, ಪಂ| ಶಿವಾನಂದ ತರರ್ಲ ಘಟ್ಟ, ಪಂ| ರಘುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ್, ಉದಯಕುಮಾರ್ ದೇಸಾಯಿ, ನಿಜಗುಣಿ ರಾಜಗುರು, ಶಾಂತವೀರ ಬೆಟಗೇರಿ, ಅನಿಲ ಅಂಗಡಿ, ಆರತಿ ಪಾಟೀಲ, ಡಾ| ಎ.ಎಲ್. ದೇಸಾಯಿ, ಗಂಗಾವತಿಯ ನಾಗನಗೌಡ ಪಾಟೀಲ, ಪ್ರತಿಷ್ಠಾನ ಸದಸ್ಯ ಬಸವರಾಜ ಹಿರೇಮಠ, ರಮೇಶ ಕೋಲಕುಂದ, ಅಯ್ಯಪ್ಪಯ್ಯ ಹಲಗಲಿಮಠ, ಡಾ| ಗುರುಬಸವ ಹಿರೇಮಠ, ಪಂ| ಬಸವರಾಜ ಎಡಿಗೊಂಡ ಇದ್ದರು. ಕಲಾವಿದರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಡಾ| ಅರ್ಜುನ ವಠಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.