ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಅನಿವಾರ್ಯ
ಧಾರವಾಡ: ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮಾಜಿ ಮೇಯರ್ ಪೂರ್ಣಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
Team Udayavani, May 17, 2019, 12:03 PM IST
ಧಾರವಾಡ: ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಮಕ್ಕಳಾಗದ ದಂಪತಿಗಳಿಗೆ ತಮ್ಮದೇ ಮಕ್ಕಳನ್ನು ಪಡೆಯುವಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು. ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಪ್ರನಾಳ ಶಿಶು ಕುರಿತ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರೂ ಕೂಡ ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಆಗಿರುವುದರಿಂದ ಬಂಡವಾಳದ ಅವಶ್ಯಕತೆ ಅವರಿಗೆ ಹಿಂದೆಂದಿಗಿಂತ ಹೆಚ್ಚಿದೆ. ಇದನ್ನು ಅನುಲಕ್ಷಿಸಿ ನಮ್ಮ ಬ್ಯಾಂಕ್ ವೈದ್ಯರ ತಕ್ಷಣದ ಅವಶ್ಯಕತೆ ಪೂರೈಸಲು ಗರಿಷ್ಠ 25 ಲಕ್ಷ ಸಾಲ ಒದಗಿಸುವ ಓಡಿ ಸೌಲಭ್ಯ ಜಾರಿಗೆ ತಂದಿದೆ. ಪ್ರನಾಳ ಶಿಶು ಮತ್ತು ಬಂಜೆತನ ನಿವಾರಣೆಗೆ ಧಾರವಾಡದಲ್ಲೇ ಅವಕಾಶ ದೊರೆತಿರುವುದಿಂದ ಜನಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು. ಜ್ಯೋತಿ ಪ್ರಹ್ಲಾದ ಜೋಶಿ ಮಾತನಾಡಿ, ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆ ಮಾನಸಿಕವಾಗಿ ತುಂಬಾ ತೊಳಲಾಡುತ್ತಾಳೆ. ಬಂಜೆತನ ನಿವಾರಣೆಗೆ ಸಂಬಂಧಿಸಿ ಧಾರವಾಡದಲ್ಲಿ ಆಸ್ಪತ್ರೆ ತೆರೆದ ಡಾ| ಸೌಭಾಗ್ಯ ಕುಲಕರ್ಣಿ ಅವರ ಕಾರ್ಯ ಶ್ಲಾಘನೀಯ ಎಂದರು. ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಸೌಭಾಗ್ಯ ಕುಲಕರ್ಣಿ ಮಾತನಾಡಿ, ಆಧುನಿಕ ಜೀವನ ಶೈಲಿ ಪುರುಷ ಮತ್ತು ಮಹಿಳೆಯರನ್ನು ಬಂಜೆತನಕ್ಕೆ ದೂಡುತ್ತಿದ್ದು, ಸೂಕ್ತ ಔಷಧೋಪಚಾರ ಮತ್ತು ಜೀವನ ಶೈಲಿ ಬದಲಾವಣೆಯೊಂದಿಗೆ ಮಕ್ಕಳನ್ನು ಫಲಿಸುವಂತೆ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಪ್ರನಾಳ ಶಿಶು ಪ್ರಯೋಗದ ಮೂಲಕ ಮೂಲಕ ಸಾಫಲ್ಯ ಕಾಣಬಹುದು ಎಂದು ತಿಳಿಸಿದರು. ಆಸ್ಪತ್ರೆ ಮುಖ್ಯ ವೈದ್ಯೆ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಪ್ರನಾಳ ಶಿಶು ವ್ಯವಸ್ಥೆ ಅತ್ಯಂತ ಸರಳಗೊಂಡಿದ್ದು ಜನಸಾಮಾನ್ಯರಿಗೂ ಲಭ್ಯವಾಗಬಲ್ಲ ತಂತ್ರಜ್ಞಾನವಾಗಿದೆ ಎಂದರು. ಮಾಜಿ ಮೇಯರ್ ಪೂರ್ಣಾ ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರು, ಬರಹಗಾರ್ತಿ ಮಾಲತಿ ಮುದಕವಿ, ರೋಟರಿ ಕ್ಲಬ್ ಉಪ ಗವರ್ನರ್ ಗೌರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. 150ಕ್ಕೂ ಅಧಿಕ ದಂಪತಿಗಳು ಉಚಿತ ಶಿಬಿರದ ಪ್ರಯೋಜನ ಪಡೆದರು.
ಧಾರವಾಡ: ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಮಕ್ಕಳಾಗದ ದಂಪತಿಗಳಿಗೆ ತಮ್ಮದೇ ಮಕ್ಕಳನ್ನು ಪಡೆಯುವಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು.
ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಪ್ರನಾಳ ಶಿಶು ಕುರಿತ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರೂ ಕೂಡ ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಆಗಿರುವುದರಿಂದ ಬಂಡವಾಳದ ಅವಶ್ಯಕತೆ ಅವರಿಗೆ ಹಿಂದೆಂದಿಗಿಂತ ಹೆಚ್ಚಿದೆ. ಇದನ್ನು ಅನುಲಕ್ಷಿಸಿ ನಮ್ಮ ಬ್ಯಾಂಕ್ ವೈದ್ಯರ ತಕ್ಷಣದ ಅವಶ್ಯಕತೆ ಪೂರೈಸಲು ಗರಿಷ್ಠ 25 ಲಕ್ಷ ಸಾಲ ಒದಗಿಸುವ ಓಡಿ ಸೌಲಭ್ಯ ಜಾರಿಗೆ ತಂದಿದೆ. ಪ್ರನಾಳ ಶಿಶು ಮತ್ತು ಬಂಜೆತನ ನಿವಾರಣೆಗೆ ಧಾರವಾಡದಲ್ಲೇ ಅವಕಾಶ ದೊರೆತಿರುವುದಿಂದ ಜನಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜ್ಯೋತಿ ಪ್ರಹ್ಲಾದ ಜೋಶಿ ಮಾತನಾಡಿ, ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆ ಮಾನಸಿಕವಾಗಿ ತುಂಬಾ ತೊಳಲಾಡುತ್ತಾಳೆ. ಬಂಜೆತನ ನಿವಾರಣೆಗೆ ಸಂಬಂಧಿಸಿ ಧಾರವಾಡದಲ್ಲಿ ಆಸ್ಪತ್ರೆ ತೆರೆದ ಡಾ| ಸೌಭಾಗ್ಯ ಕುಲಕರ್ಣಿ ಅವರ ಕಾರ್ಯ ಶ್ಲಾಘನೀಯ ಎಂದರು.
ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಸೌಭಾಗ್ಯ ಕುಲಕರ್ಣಿ ಮಾತನಾಡಿ, ಆಧುನಿಕ ಜೀವನ ಶೈಲಿ ಪುರುಷ ಮತ್ತು ಮಹಿಳೆಯರನ್ನು ಬಂಜೆತನಕ್ಕೆ ದೂಡುತ್ತಿದ್ದು, ಸೂಕ್ತ ಔಷಧೋಪಚಾರ ಮತ್ತು ಜೀವನ ಶೈಲಿ ಬದಲಾವಣೆಯೊಂದಿಗೆ ಮಕ್ಕಳನ್ನು ಫಲಿಸುವಂತೆ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಪ್ರನಾಳ ಶಿಶು ಪ್ರಯೋಗದ ಮೂಲಕ ಮೂಲಕ ಸಾಫಲ್ಯ ಕಾಣಬಹುದು ಎಂದು ತಿಳಿಸಿದರು.
ಆಸ್ಪತ್ರೆ ಮುಖ್ಯ ವೈದ್ಯೆ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಪ್ರನಾಳ ಶಿಶು ವ್ಯವಸ್ಥೆ ಅತ್ಯಂತ ಸರಳಗೊಂಡಿದ್ದು ಜನಸಾಮಾನ್ಯರಿಗೂ ಲಭ್ಯವಾಗಬಲ್ಲ ತಂತ್ರಜ್ಞಾನವಾಗಿದೆ ಎಂದರು.
ಮಾಜಿ ಮೇಯರ್ ಪೂರ್ಣಾ ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರು, ಬರಹಗಾರ್ತಿ ಮಾಲತಿ ಮುದಕವಿ, ರೋಟರಿ ಕ್ಲಬ್ ಉಪ ಗವರ್ನರ್ ಗೌರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. 150ಕ್ಕೂ ಅಧಿಕ ದಂಪತಿಗಳು ಉಚಿತ ಶಿಬಿರದ ಪ್ರಯೋಜನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.