ಪತ್ರಿಕಾ ವಿತರಕರ ಒಕ್ಕೂಟ ಬಲಪಡಿಸಿ
ಸರ್ಕಾರದ ಮಟ್ಟದಲ್ಲಿ ಬೇಡಿಕೆಗಳ ಈಡೇರಿಕೆಗೆ, ಯೋಜನೆಗಳು ತಲುಪಲು ಸಂಘಟನೆ ಮುಖ್ಯ
Team Udayavani, Jun 14, 2022, 12:46 PM IST
ಧಾರವಾಡ: ಪತ್ರಿಕಾ ವಿತರಕರು ಸ್ಥಳೀಯವಾಗಿ ಪತ್ರಿಕೆಗಳ ವಿತರಣೆ ಮಾಡುವಾಗ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳಲು ಸಂಘಟನೆ ಅವಶ್ಯವಾಗಿದೆ ಎಂದು ಜಿಲ್ಲಾ ವಿತರಕರ ಸಂಘದ ಕಾರ್ಯದರ್ಶಿ ನಾಗರಾಜ ಕುಲಕರ್ಣಿ ಹೇಳಿದರು.
ನಗರದ ಉಳಿವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದ ಜಿಲ್ಲಾ ವಿತರಕರ ಸಂಘದಿಂದ ಕರೆದ ಸಭೆಯಲ್ಲಿ ಮಾತನಾಡಿದರು.
ನಗರ, ತಾಲೂಕು, ಗ್ರಾಮೀಣ ಮಟ್ಟದಲ್ಲಿ ವಿತರಕರ ಸದಸ್ಯತ್ವ ಪಡೆಯಬೇಕು. ವಿತರಕರನ್ನು ಅಸಂಘಟಿತ ಕಾರ್ಮಿಕರಲ್ಲಿ ಸೇರ್ಪಡೆ ಮಾಡಿ ಸರಕಾರದ ಯೋಜನೆಗಳು ಸಿಗುವಂತಾಗಲು ಪತ್ರಿಕಾ ವಿತರಕರ ಒಕ್ಕೂಟದ ಬಲಪಡಿಸಬೇಕೆಂದರು.
ಬೆಳಗಾವಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಪ್ರತಾಪ ಬೋಸ್ಲೆ ಮಾತನಾಡಿ, ಮಹಾರಾಷ್ಟ್ರದದಲ್ಲಿ ಪತ್ರಿಕೆ ವಿತರಕರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದರಂತೆ ರಾಜ್ಯ ಸರಕಾರ ಪತ್ರಿಕಾ ವಿತರಕರ ಕಷ್ಟಗಳಿಗೆ ಸ್ಪಂದಿಸಿದರೆ ಅವರ ಕುಟುಂಬಗಳಿಗೆ ಆಸರೆಯಾಗುತ್ತದೆ. ಗ್ರಾಮೀಣ ವಿತರಕರು ಸೇರಿದಂತೆ ನಗರದ ಎಲ್ಲ ವಿತರಕರು ಸದಸ್ಯತ್ವವನ್ನು ಮಾಡಿ ಸಂಘಟನೆ ಬಲಪಡಿಸಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಕೇಳಿ ನಾವು ಆರ್ಥಿಕವಾಗಿ ಸದೃಢರಾಗೋಣ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಶಿವು ಹಲಗಿ ಮಾತನಾಡಿ, ತಾಲೂಕಿನ ಪತ್ರಿಕಾ ವಿತರಕರನ್ನು ಹಲವಾರು ಬಾರಿ ಭೇಟಿಯಾಗಿ ಸದಸ್ಯತ್ವ ಪಡೆಯಲು ಒತ್ತಾಯಿಸಿದ್ದೇನೆ. ರಾಜ್ಯಮಟ್ಟದಲ್ಲಿ ನಾವು ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸದಸ್ಯತ್ವ ಮುಖ್ಯವಾಗಿದೆ ಎಂದರು.
ತಾಲೂಕು ಪತ್ರಿಕಾ ವಿತರಕರಾದ ಪುಂಡಲೀಕ ಮುಧೋಳೆ, ಶೇಖರ ಬೇಲೂರ, ಗಂಗಾಧರ ಡಾಂಗೆ, ಶ್ರೀಧರ ಪಾಸ್ತೆ ಮಾತನಾಡಿ, ಪತ್ರಿಕೆಗಳ ವಿತರಕರು 20ರಿಂದ 30 ವರ್ಷಗಳಿಂದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ವಿತರಕರು ಸಂಘಟನೆ ಕೊರತೆಯಿಂದ ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಕೋವಿಡ್ ಇತರೆ ಸಂದರ್ಭಗಳಲ್ಲಿಯೂ ಪತ್ರಿಕೆ ಸರಬರಾಜು ಮಾಡಿ ಜೀವದ ಹಂಗನ್ನು ತೊರೆದು ಕಾಯಕವನ್ನು ಮಾಡಿದ್ದಾರೆ. ಇದನ್ನೆಲ್ಲ ಸರಕಾರ ಗಮನದಲ್ಲಿಟ್ಟುಕೊಂಡು ಸರಕಾರದ ಯೋಜನೆಗಳು ವಿಶೇಷವಾಗಿ ಪತ್ರಿಕಾ ವಿತರಕರಿಗೂ ಲಭಿಸುವಂತೆ ಮಾಡಬೇಕೆಂದು ಹೇಳಿದರು.
ಕೃಷ್ಣಾ ಕುಲಕರ್ಣಿ, ರಾಮದೇವ ಕಲ್ಲಿಬುಡ್ಡಿ, ಸತೀಶ ಜಿತೂರಿ, ಎ.ಎಂ.ಹಿರೇಮಠ, ರವಿ ಪತ್ರೇಶ, ಗುರು ಹಿರೇಮಠ, ಚಂದ್ರಶೇಖರ ಬೇಲೂರ, ಶಿವರಾಮ ಗೋವಿಂದ ಶಿರಗುಪ್ಪಿ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.