ಜೀತದಾಳು ಋಣಮುಕ್ತಿಗೆ ಶ್ರಮಿಸಿ
Team Udayavani, Jun 25, 2017, 2:25 PM IST
ಹುಬ್ಬಳ್ಳಿ: ತಾಲೂಕಿನಾದ್ಯಂತ ಅತೀ ಸೂಕ್ಷ್ಮವಾಗಿ ಸಮೀಕ್ಷೆ ಮಾಡುವ ಮೂಲಕ ಜೀತದಾಳುಗಳು ಕಂಡುಬಂದಲ್ಲಿ ಅವರನ್ನು ಋಣಮುಕ್ತ ಮಾಡುವಲ್ಲಿ ಎಲ್ಲ ಸಿಬ್ಬಂದಿ ಶ್ರಮಿಸಬೇಕು ಎಂದು ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.
ಇಲ್ಲಿನ ಆದರ್ಶ ನಗರದ ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಶನಿವಾರ ನಡೆದ ಜೀತದಾಳು ಗುರುತಿಸುವ ಕುರಿತಾದ ಸಭೆ ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2013ರಲ್ಲಿ ಜೀತದಾಳು ಕುರಿತು ನಡೆದ ಸಮೀಕ್ಷೆಯಲ್ಲಿ ಯಾವುದೇ ಜೀತದಾಳು ಇಲ್ಲ ಎಂದು ಮಾಹಿತಿ ನೀಡಲಾಗಿತ್ತು.
ಇದೀಗರಾಜ್ಯ ಸರಕಾರದಿಂದ ಮತ್ತೆ ಸಮೀಕ್ಷೆಗೆ ಆದೇಶ ಬಂದಿದ್ದು, ಅದರಂತೆ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮತ್ತೆ ಸಮೀಕ್ಷೆ ನಡೆಸಿ ತಾಲೂಕಾಡಳಿತದಿಂದ ವರದಿನೀಡಬೇಕಾಗಿದೆ. ಆದ್ದರಿಂದ ಅಧಿಕಾರಿಗಳು ನಿರ್ಭಿಡೆಯಿಂದ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದರು.
ತಾಲೂಕಿನ 24 ಗ್ರಾಪಂನ ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ, ಜೀವಿಕ ಸಂಘದ ಪ್ರತಿನಿಧಿ, ಪ್ರಾಥಮಿಕ ಶಾಲೆಯ ಪ್ರಧಾನಗುರುಗಳು ಹಾಗೂ ಕಂದಾಯ ಅಧಿಕಾರಿ ಒಳಗೊಂಡ ತಂಡ ಸಮೀಕ್ಷೆ ನಡೆಸಲಿದೆ ಎಂದು ಹೇಳಿದರು. ಕಾರ್ಮಿಕ ಸಹಾಯಕ ಆಯುಕ್ತ ರೇವಣ್ಣ ಮಾತನಾಡಿ, ಜೀತದಾಳು ಸಮೀಕ್ಷೆ ಮಾಡುವುದು ಹೇಗೆ, ಅವರನ್ನು ಗುರುತಿಸುವುದು ಹೇಗೆ,
-ಯಾವ ಸ್ಥಳಗಳಲ್ಲಿ ಜೀತದಾಳು ಇರುತ್ತಾರೆ, ಅವರನ್ನು ಯಾವ ರೀತಿ ಪ್ರಶ್ನಿಸಬಹುದು ಎಂಬುದರ ಕುರಿತು ಅಗತ್ಯ ಮಾಹಿತಿ ನೀಡಿ ಸಮೀಕ್ಷೆ ನಡೆಸಲು ತರಬೇತಿ ನೀಡಲಾಗುವುದು. ಜೂ. 27ರಿಂದ ಆರಂಭಗೊಳ್ಳಲಿರುವ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಜು. 1ರೊಳಗೆ ತಾಲೂಕಾಡಳಿತಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಗ್ರಾಪಂಗಳಿಗೆ ಸಮನ್ವಯ ಅಧಿಕಾರಿಗಳ ನೇಮಕ:
ಅದರಗುಂಚಿ-ಹಳಾಳ-ನೂಲ್ವಿ: ಗ್ರಾಮೀಣ ಬಿಇಒ ಎಂ.ಎಲ್. ಹಂಚಾಟೆ, ಅಂಚಟಗೇರಿ-ಕಟೂ°ರ-ಚನ್ನಾಪುರ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಎಚ್. ಪಾಟೀಲ, ಬು.ಅರಳಿಕಟ್ಟಿ-ಛಬ್ಬಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಶೋಕ ಮುನಿಯಪ್ಪನವರ,
ಕರಡಿಕೊಪ್ಪ-ವರೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಆರ್., ಬ್ಯಾಹಟ್ಟಿ-ಕುಸುಗಲ್ಲ-ಸುಳ್ಳ: ತಾಲೂಕು ಪಶು ವೈದ್ಯಾಧಿಕಾರಿ ಉಮೇಶ ಕೊಂಡಿ, ಹೆಬಸೂರ-ಕಿರೇಸೂರ: ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಇಂಗಳಹಳ್ಳಿ-ಶಿರಗುಪ್ಪಿ: ತಾಲೂಕು ಹಿಂದುಳಿದ ವಿಸ್ತ್ರರ್ಣಾಧಿಕಾರಿ ಎ.ಎಫ್. ಕಟ್ಟಿಮನಿ,
ಕೋಳಿವಾಡ-ಉಮಚಗಿ: ಯಮಕನಮರಡಿ, ಮಂಟೂರ- ಭಂಡಿವಾಡ: ಎಂ.ಜಿ. ಹಿರೇಮಠ, ರಾಯನಾಳ- ದೇವರಗುಡಿಹಾಳ: ಎಂ.ಬಿ. ಸವದತ್ತಿ, ಅಗಡಿ-ಶೆರೆವಾಡ: ಕೃಷ್ಣಮೂರ್ತಿ ವಾಟೆ ಅವರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆ ನಡೆಸಿದ ನಂತರ ಎಲ್ಲ ಅಧಿಕಾರಿಗಳು ತಮ್ಮ ವರದಿಯನ್ನು ಸಮನ್ವಯಾಧಿಕಾರಿಗಳ ಬಳಿ ಸಲ್ಲಿಸಬೇಕು ಎಂದು ರೇವಣ್ಣ ಸೂಚಿಸಿದರು.
ಜೀವಿಕ ಸಂಸ್ಥೆಯ ಬಸವರಾಜ ಹಂಚಿನಮನಿ ಅವರುಜೀತದಾಳು ಗುರುತಿಸುವಿಕೆ, ಅರ್ಜಿ ಭರ್ತಿ, ಪುನರ್ವಸತಿ ಕಲ್ಪಿಸುವಿಕೆ ಕುರಿತು ಮಾಹಿತಿ ನೀಡಿದರು. ತಾಪಂ ಇಒ ಡಾ| ಆರ್.ವೈ. ಹೊಸಮನಿ, ಎಂ.ಎಲ್. ಹಂಚಾಟೆ, ಎಸ್.ಎಚ್. ಪಾಟೀಲ, ಅಶೋಕ ಮುನಿಯಪ್ಪನವರ, ಉಮೇಶ ಕೊಂಡಿ, ಶಿಲ್ಪಶ್ರೀ, ಎ.ಎಫ್. ಕಟ್ಟಿಮನಿ, ಯಮಕನಮರಡಿ, ಎಂ.ಜಿ. ಹಿರೇಮಠ, ಎಂ.ಬಿ. ಸವದತ್ತಿ, ಕೃಷ್ಣಮೂರ್ತಿ ವಾಟೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
Bengaluru: ರಸ್ತೆಯಲ್ಲೇ ಜಗಳಕ್ಕಿಳಿದಿದ್ದ ಇಬ್ಬರು ಬಸ್‌ಗೆ ಬಲಿ!
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.