ನೆರವಿನ ನೆಪ ಹೇಳಿ ರಸ್ತೆಗಿಳಿದ್ರೆ ವಾಹನಗಳ ಸೀಜ್
Team Udayavani, Apr 16, 2020, 11:30 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಆಹಾರ, ಉಪಹಾರ, ಹಣ್ಣು- ಹಂಪಲು, ಕುಡಿಯುವ ನೀರು ಹಂಚುವುದು, ನೆರವಿನ ನೆಪ ಹೇಳಿ ಓಣಿ ಓಣಿಗಳಲ್ಲಿ ತಿರುಗುವುದು ಇನ್ನು ಬಂದ್. ದೇಶದಲ್ಲೆಡೆ ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿ ಆದೇಶ ಹೊರಬಿದ್ದಾಗಿನಿಂದ ಪ್ರತಿದಿನವೂ ಹಲವಾರು ಯುವಕರ ತಂಡಗಳು ವಿವಿಧ ಸಾಮಗ್ರಿ ಹಂಚುವ ನೆಪದಲ್ಲಿ ಗಲ್ಲಿ ಗಲ್ಲಿ ಸುತ್ತುತ್ತಿದ್ದರು. ಗಾಡಿಗಳಲ್ಲಿ ಆಹಾರದ ಚೀಲ, ಕುಡಿಯುವ ನೀರಿನ ಚೀಲ, ಹಣ್ಣುಗಳನ್ನಿಟ್ಟುಕೊಂಡು ನಗರದಲ್ಲಿ ಸಿಗುವ ನಿರ್ಗತಿಕರಿಗೆ, ಭಿಕ್ಷುಕರಿಗೆ, ವೃದ್ಧರಿಗೆ ವಿತರಿಸುವ ನೆಪದಲ್ಲಿ ತಿರುಗುತ್ತಿದ್ದರು. ಕೆಲವರು ತಮ್ಮ ವಾಹನಗಳಿಗೆ ತುರ್ತು ಸೇವೆ ಎಂದೆಲ್ಲಾ ಬೋರ್ಡ್ ಹಾಕಿಕೊಂಡು ತಿರುಗುತ್ತಿದ್ದರು.
ಸಾರ್ವಜನಿಕರು ಇನ್ನು ಯಾವುದನ್ನೂ ಹಂಚುವ ಹಾಗಿಲ್ಲ. ಏನೇ ನೀಡುವುದಿದ್ದರೂ ಅದನ್ನು ಜಿಲ್ಲಾಡಳಿತ ಆರಂಭಿಸಿರುವ ಕೇಂದ್ರಕ್ಕೆ ತಂದು ನೀಡಬೇಕು. ಅಲ್ಲಿ ನೀವು ಹೇಳಿದ ಸ್ಥಳಗಳಿಗೆ ಇಲ್ಲವೇ ಅವಶ್ಯವಿರುವವರಿಗೆ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಜನರಿಗೆ ವಿತರಿಸಲಾಗುವುದೆಂದು ಆದೇಶ ಹೊರಡಿಸಿದ ನಂತರ ನಗರದಲ್ಲಿ ಆಹಾರ, ಉಪಹಾರ, ಕುಡಿಯುವ ನೀರು ಹಂಚುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಹಂಚಿಕೆ ನೆಪದಲ್ಲಿ ನಗರ ಸುತ್ತುವವರ ಸಂಖ್ಯೆ ಇಲ್ಲವಾಗುತ್ತಿದೆ.
ವಾಹನಗಳು ಸೀಜ್: ಸುಖಾ ಸುಮ್ಮನೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಎಲ್ಲೆಂದರಲ್ಲಿ ತಿರುಗುತ್ತಿದ್ದವರ ಮೇಲೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನೂರಾರು ವಾಹನಗಳನ್ನು ಸೀಜ್ ಮಾಡಿದ್ದಾರೆ. ತುರ್ತು ಸೇವೆಗೆಂದು ಬರುವ ವಿವಿಧ ವಾಹನಗಳನ್ನು ತಪಾಸಿಸಿ ಅವಶ್ಯಕತೆ ಇದ್ದಲ್ಲಿ ಅಂತಹವುಗಳನ್ನು ಬಿಡುತ್ತಿದ್ದು, ಇನ್ನುಳಿದವುಗಳನ್ನು ಬಿಡದೇ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಹೆಚ್ಚಿದ ಆಟೋರಿಕ್ಷಾಗಳ ಸಂಚಾರ:ನಗರದಲ್ಲಿ ಆಟೋರಿಕ್ಷಾಗಳ ಸಂಚಾರ ನಿಧಾನಕ್ಕೆ ಹೆಚ್ಚುತ್ತಿದೆ. ಬೆಳಗಿನ ಹೊತ್ತಿನಲ್ಲಿ ಹೆಚ್ಚಿನ ಆಟೋರಿಕ್ಷಾಗಳು ರಸ್ತೆಗಿಳಿಯುತ್ತಿವೆ. ನಗರದ ವಿಶ್ವೇಶ್ವರ ನಗರ, ವಿಜಯನಗರ, ದೇವಾಂಗಪೇಟೆ, ಗೋಕುಲ ರಸ್ತೆ, ಗಾಂಧಿ ನಗರ, ಕೇಶ್ವಾಪುರ, ಕುಸುಗಲ್ಲ ರಸ್ತೆ, ಗೋಪನಕೊಪ್ಪ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಆಟೋರಿಕ್ಷಾಗಳ ಸಂಚಾರ ನಡೆಯುತ್ತಿವೆ. ಆಟೋರಿಕ್ಷಾಗಳಲ್ಲೂ ಕೂಡಾ ತುರ್ತು ಸೇವೆಗೆಂದು ಸಂಚರಿಸುವವರಿದ್ದು, ಆಸ್ಪತ್ರೆಗೆ, ಬ್ಯಾಂಕ್‌ಗೆ ಹಾಗೂ ಉದ್ಯೋಗಕ್ಕೆ ತೆರಳುವವರು ಸಹ ಆಟೋರಿಕ್ಷಾಗಳನ್ನು ಬುಕ್ ಮಾಡಿಕೊಂಡಿದ್ದು, ಅಂತಹವರನ್ನು ಬಿಡಲುಆಟೋರಿಕ್ಷಾಗಳು ಸಂಚರಿಸುತ್ತಿವೆ.
ಅಲ್ಲಲ್ಲಿ ತರಕಾರಿ ಮಾರಾಟ: ನಗರದ ದೇಶಪಾಂಡೆ ನಗರ, ಕೇಶ್ವಾಪುರ, ವಿಶ್ವೇಶ್ವರನಗರ, ಗೋಕುಲ ರಸ್ತೆ, ಅಪೂರ್ವ ನಗರ, ರಾಧಾಕೃಷ್ಣ ನಗರ, ಗೋಪನಕೊಪ್ಪ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತರಕಾರಿ, ಹಣ್ಣುಗಳಮಾರಾಟಗಾರರು ರಸ್ತೆ ಬದಿ ಕುಳಿತಿದ್ದು,ಸಾರ್ವಜನಿಕರು ಕೂಡಾ ಸಿಕ್ಕಷ್ಟು ತರಕಾರಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು.
ಕಂಟೇನ್ಮೆಂಟ್ ಪ್ರದೇಶದಲ್ಲಿ ಸಂಚಾರ :ಇಲ್ಲಿನ ಮುಲ್ಲಾ ಓಣಿಯಲ್ಲಿ ಕೋವಿಡ್ 19 ವೈರಸ್ ಪಾಜಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ತದ ನಿಮಿತ್ತ ಜಿಲ್ಲಾಡಳಿತಮೂರು ಕಿಮೀ ವ್ಯಾಪ್ತಿ ಪ್ರದೇಶವನ್ನುಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿ ಸಂಪೂರ್ಣ ನಾಕಾ ಬಂದಿ ಹಾಕಿದೆ. ಆದರೂ ಕೂಡಾ ರಸ್ತೆಯಲ್ಲಿಜನರು ಕಾಣಿಸಿಕೊಳ್ಳುತ್ತಿದ್ದು, ಅವಶ್ಯಕ ವಸ್ತುಗಳ ಖರೀದಿಗೆ ಜನರು ಹೊರ ಬರುತ್ತಿರುವುದು ಕಂಡು ಬರುತ್ತಿದೆ.
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.