ಹೊಸೂರು ನಿಲ್ದಾಣದಿಂದ ಉಪ ನಗರ ಸಾರಿಗೆ ಬಸ್ ಸಂಚಾರ
Team Udayavani, Jun 23, 2021, 4:47 PM IST
ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿಲ್ದಾಣ ಕಟ್ಟಡ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಪ ನಗರ ಸಾರಿಗೆ ಬಸ್ ಗಳನ್ನು ಹೊಸೂರು ಪ್ರಾದೇಶಿಕ ಟರ್ಮಿನಲ್ ಗೆ ಸ್ಥಳಾಂತರಗೊಳಿಸಿದ್ದು, ಜೂ.23ರಿಂದ ಎಲ್ಲಾ ಉಪನಗರ ಬಸ್‌ಗಳು ಹೊಸೂರು ಬಸ್ ನಿಲ್ದಾಣದಿಂದ ಸಂಚಾರ ಮಾಡಲಿವೆ.
ಹೊಸೂರು ಬಸ್ ನಿಲ್ದಾಣದಲ್ಲಿ ವಿದ್ಯಾನಗರ ಭಾಗದಲ್ಲಿ ಫೀಡರ್ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ನಿಲ್ದಾಣ ನಿರ್ಮಿಸಲಾಗಿತ್ತು. ಇದೀಗ ಹಳೇ ಬಸ್ ನಿಲ್ದಾಣದಲ್ಲಿ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಸ್ಥಳದಿಂದ ಉಪನಗರ ಸಾರಿಗೆ ಬಸ್‌ಗಳು ಸಂಚರಿಸಲಿವೆ.
ಹಳೇ ಬಸ್ ನಿಲ್ದಾಣದಿಂದ ಕೋವಿಡ್ ಪೂರ್ವದಲ್ಲಿ 45 ಅನುಸೂಚಿಗಳಲ್ಲಿ ಸುಮಾರು 378 ಟ್ರಿಪ್‌ಗ್ಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಈ ಎಲ್ಲಾ ಮಾರ್ಗದ ಬಸ್‌ಗಳು ಹೊಸೂರು ಬಸ್ ಟರ್ಮಿನಲ್‌ನಿಂದ ಸಂಚರಿಸಲಿವೆ.
ಯಾವ್ಯಾವ ಬಸ್‌ಗಳು ಸ್ಥಳಾಂತರ:
ಉಪ ನಗರ ಸಾರಿಗೆಗಳಾದ ಬ್ಯಾಹಟ್ಟಿ, ಸುಳ್ಳ, ಕುಸಗಲ್ಲ, ಮಿಶ್ರಿಕೋಟಿ, ಚವರಗುಡ್ಡ, ರಾಮಾಪುರ, ಕುರವಿನಕೊಪ್ಪ, ದೇವರಗುಡಿಹಾಳ, ಗಿರಿಯಾಲ, ಶಿರಗುಪ್ಪಿ, ತಾರಿಹಾಳ, ಚಾಲನಾ ತರಬೇತಿ ಕೇಂದ್ರ, ಇಟಗಟ್ಟಿ, ದುಮ್ಮವಾಡ, ಜಿ.ಬಸವನಕೊಪ್ಪ, ರಾಮನಗರ, ಮಂಟೂರು, ಛಬ್ಬಿ, ಬೊಮ್ಮಸಮುದ್ರ, ಬೆಟದೂರು, ಕರಡಿಕೊಪ್ಪ, ಅಲ್ಲಾಪುರ ಗ್ರಾಮಗಳಿಗೆ ಸಂಚರಿಸುವ ಬಸ್‌ಗಳು ಹೊಸೂರು ಬಸ್ ನಿಲ್ದಾಣದಿಂದ ಸಂಚರಿಸಲಿವೆ.
ಸಂಪರ್ಕ ಬಸ್‌ಗಳು: ವಿವಿಧ ಗ್ರಾಮಗಳಿಂದ ಬರುವ ಜನರು ಹಳೇ ಬಸ್‌ನಿಲ್ದಾಣದ ಸುತ್ತಲಿನ ಮಾರುಕಟ್ಟೆ ಪ್ರದೇಶಕ್ಕೆ ಹೋಗಲು ಬಿಆರ್‌ಟಿಎಸ್ ಚಿಗರಿ ಬಸ್‌ಗಳ ಮೂಲಕ ಸಂಚರಿಸಬಹುದು. ಇಲ್ಲವೆ ಕಿಮ್ಸ್, ನವನಗರ, ಗಾಮನಗಟ್ಟಿ ಸೇರಿದಂತೆ ಕೆಲ ನಗರ ಸಾರಿಗೆ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಈ ಬಸ್‌ಗಳು ನಿಲ್ದಾಣದೊಳಗೆ ಬಂದು ಹೋಗುವುದರಿಂದ ಈ ಬಸ್‌ಗಳ ಮೂಲಕ ಸಂಚರಿಸಬಹುದಾಗಿದೆ. ಹಳೇ ಬಸ್ ನಿಲ್ದಾಣದಿಂದ ಹುಬ್ಬಳ್ಳಿ-ಧಾರವಾಡ ವಾಯವ್ಯ ಸಾರಿಗೆ ಬಸ್‌ಗಳು ಹಾಗೂ ಹು-ಧಾ (100 ಸಂಖ್ಯೆಯ) ಚಿಗರಿ ಬಸ್‌ಗಳ ಸ್ಥಳಾಂತರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಹಳೇ ಬಸ್ ನಿಲ್ದಾಣದಿಂದ ಹೊಸೂರು ಬಸ್ ನಿಲ್ದಾಣಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ ಬಗ್ಗೆ ನಿರ್ಧರಿಸಲಾಗುವುದು ಎಂದು ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.