ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ !
Team Udayavani, Oct 22, 2020, 12:47 PM IST
ಧಾರವಾಡ: ಗಂಭೀರ ಹೃದಯರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆಯನ್ನು ಎಸ್‌ಡಿಎಮ್ ನಾರಾಯಣ ಹೃದಯಾಲಯ ನಡೆಸಿದೆ.
ನವಜಾತ ಶಿಶುವಿಗೆ ಸಂಕೀರ್ಣ ಹೃದ್ರೋಗ ಹಸ್ತಕ್ಷೇಪ ಎನಿಸಿದ ಎಡ ಶೀರ್ಷಧಮನಿ ಅಪಧಮನಿ ಕತ್ತರಿಸುವಿಕೆ (ಲೆಫ್ಟ್ಕರೋಟಿಡ್ ಆರ್ಟರಿ) ಮತ್ತು ಬಲೂನ್ ಮೂಲಕ ಹಿಗ್ಗಿಸುವಿಕೆ (ಬಲೂನ್ ಡೈಲೇಷನ್ ಆಫ್ ಕೋಆರ್ಕಟೇಶನ್ ಸೆಗ್‌ಮೆಂಟ್) ಮಾಡಿ ಆ ಭಾಗವನ್ನು ಒಂದುಗೂಡಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಹುಬ್ಬಳ್ಳಿ ಮೂಲದ 20 ದಿನದ ಮಗು ಕೇವಲ 2.3 ಕೆ.ಜಿ. ತೂಕವಿತ್ತು. ಮಗುವಿಗೆ ಹೃದಯದಲ್ಲಿ ರಕ್ತ ಪರಿಚಲನೆಯ ಸಮಸ್ಯೆಯ ಕಾರಣದಿಂದ ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ಗೆ ಕರೆತರಲಾಗಿತ್ತು. ಮಗುವಿನ ಹೃದಯದ ಮಹಾಪಧಮನಿಯಲ್ಲಿ ದೊಡ್ಡ ಪ್ರಮಾಣದ ದೋಷ ಇದ್ದ ಕಾರಣ, ರಕ್ತ ಪರಿಚಲನೆಯ ಸಮಸ್ಯೆ ಇರುವುದು ದೃಢಪಟ್ಟಿತು. 2ಡಿ ಎಕೋ ಕಾರ್ಡಿಯೋಗ್ರಫಿಯ ಮೂಲಕ ಪರಿಶೀಲಿಸಿದಾಗ ಮಗುವಿನ ಮಹಾಪಧಮನಿಯಲ್ಲಿ ಶೇಕಡ 95ರಷ್ಟು ತಡೆ ಇರುವುದು ಕಂಡುಬಂತು. ಇದರ ಜತೆಗೆ ಎಡಬಾಗದ ಕುಕ್ಷಿ ನಿಷ್ಕಿಯವಾಗಿರುವುದು ಸಹ ತಿಳಿದುಬಂದಿದೆ.
ಇದನ್ನೂ ಓದಿ: BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ
ಚಿಕ್ಕಮಕ್ಕಳ ಹೃದಯ ರೋಗ ತಜ್ಞರಾದ ಡಾ. ಅರುಣ್ ಕೆ. ಬಬ್ಲೇಶ್ವರ್, ಮಕ್ಕಳ ಹಾಗೂ ವಯಸ್ಕರ ಹಿರಿಯ ಮತ್ತು ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರವಿವರ್ಮ ಪಾಟೀಲ್ ಮತ್ತು ಹೃದಯ ಅರಿವಳಿಕೆ ತಜ್ಞರ ತಂಡ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ನಂತರ ಮಾತನಾಡಿದ ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಮಕ್ಕಳ ಹೃದಯ ರೋಗ ತಜ್ಞರಾದ ಡಾ. ಅರುಣ್ ಕೆ. ಬಬಲೇಶ್ವರ, “ಮಹಾಪಧಮನಿ ಒಗ್ಗೂಡುವಿಕೆ ಎನ್ನುವುದು ಜನ್ಮಜಾತ ದೋಷವಾಗಿದ್ದು, ಇದರಲ್ಲಿ ಮಹಾಪಧಮನಿಯ ಗಾತ್ರವು ಸಾಮಾನ್ಯಕ್ಕಿಂತ ಕಿರಿದಾಗಿರುತ್ತದೆ. ಈ ಇಕ್ಕಟ್ಟಿನ ಸ್ಥಿತಿಯು ತೀವ್ರವಾಗಿದ್ದು, ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು ಹಾಗೂ ಇದಕ್ಕೆ ಹುಟ್ಟಿದ ತಕ್ಷಣ ಶಸ್ತ್ರಚಿಕಿತ್ಸೆ ಅಥವಾ ಇತರ ವೈದ್ಯಕೀಯ ನೆರವು ಅಗತ್ಯವಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ
ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರವಿವರ್ಮ ಪಾಟೀಲ್ ಮಾತನಾಡಿ, “ಈ ಪ್ರಕರಣದಲ್ಲಿ ವೈದ್ಯಕೀಯ ತಂಡಕ್ಕೆ ಇದ್ದ ದೊಡ್ಡ ಸವಾಲು ಎಂದರೆ ಮಗುವಿನ ವಯಸ್ಸು. ಈ ಮಗು ಕೇವಲ 20 ದಿನದ ಮಗುವಾಗಿದ್ದು, ಅಷ್ಟೊಂದು ಎಳೆಯ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯ. ಮಗು ತೀರಾ ಕಡಿಮೆ ತೂಕ ಅಂದರೆ ಕೇವಲ 2.3 ಕೆ.ಜಿ. ಇದ್ದ ಹಿನ್ನೆಲೆಯಲ್ಲಿ ಕತ್ತಿನ ಭಾಗದ ಅಪಧಮನಿಯು 3 ರಿಂದ 4 ಮಿಲಿ ಮೀಟರ್ ಮಾತ್ರ ವ್ಯಾಸವನ್ನು ಹೊಂದಿದ್ದು, ಇದನ್ನು ಪ್ರವೇಶಿಸುವುದು ತೀರಾ ಕಷ್ಟಕರವಾಗಿತ್ತು. ಆದರೆ ಇದನ್ನು ಕತ್ತರಿಸಿ, ವೈದ್ಯಕೀಯ ಪ್ರಕ್ರಿಯೆ ಮುಗಿಸಿದ ಬಳಿಕ ಹೊಲಿಗೆ ಹಾಕುವುದು ತೀರಾ ಸವಾಲುದಾಯಕವಾಗಿತ್ತು. ಈ ಸಂಕೀರ್ಣತೆಯ ಪರಿಣಾಮವಾಗಿ ಮಗುವಿಗೆ ಮೆದುಳಿನ ಸ್ರಾವದ ಸಾಧ್ಯತೆಯೂ ಇತ್ತು. ಇಂಥ ಸಂಕೀರ್ಣ ಪ್ರಕ್ರಿಯೆ ನಡೆಸಲು ತೀರಾ ಸಮರ್ಪಣಾ ಮನೋಭಾವದ ಮತ್ತು ಅನುಭವಿ ವೈದ್ಯರ ತಂಡ ಅಗತ್ಯವಾಗಿತ್ತು. ಇವೆಲ್ಲದರ ನಡುವೆಯೂ ಮಗುವಿನ ಜೀವರಕ್ಷಣೆ ಮಾಡಿದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ವಿವರಿಸಿದರು.
ಇದನ್ನೂ ಓದಿ: ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು
ಈ ಕುರಿರು ಪ್ರತಿಕ್ರಿಯೆ ನೀಡಿದ ಮಗುವಿನ ತಂದೆ ಮೊಹ್ಮದ್ ಫಾರೂಕ್, ನಾವು ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರನ್ನು ಭೇಟಿ ಮಾಡಿ ಚರ್ಚಿಸುವವರೆಗೂ ಬಹುತೇಕ ಎಲ್ಲ ಆಸೆ ಕೈಬಿಟ್ಟಿದ್ದೆವು. ಮಗುವಿನ ಜೀವರಕ್ಷಣೆ ಮಾಡಿದ್ದಕ್ಕಾಗಿ ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯಕೀಯ ತಂಡಕ್ಕೆ ನಾವು ಆಭಾರಿಗಳಾಗಿದ್ದೇವೆ. ವೈದ್ಯರು ಪುಟ್ಟ ಮಗುವಿಗೆ ಅತ್ಯುತ್ತಮ ದರ್ಜೆಯ ಚಿಕಿತ್ಸೆಯನ್ನು ಖಾತರಿಪಡಿಸಿದರು ಹಾಗೂ ಈ ಕಾರಣದಿಂದ ಮಗು ಅಷ್ಟು ಬೇಗನೇ ಗುಣಮುಖವಾಗುವುದು ಸಾಧ್ಯವಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.