ಭೈರವದಿಂದ ಭೈರವಿವರೆಗಿನ ಸ್ವರಾಂಜಲಿ ಕಾರ್ಯಕ್ರಮ
ಗುರು-ಶಿಷ್ಯ ಪರಂಪರೆ ಉಳಿದಿದ್ದು ಸಂಗೀತ ಕ್ಷೇತ್ರದಲ್ಲಿ ಮಾತ್ರ; ವಿದ್ಯಾರ್ಥಿಗಳಿಗೆ ವಿಶೇಷ ನೈಪುಣ್ಯತೆ ಕಲಿಸುವುದು ಅಗತ್ಯ
Team Udayavani, Jul 5, 2022, 3:08 PM IST
ಧಾರವಾಡ: ಇಂದಿನ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಸಂಗೀತ, ಕಲೆಯನ್ನು ಮಾತ್ರ ನೀಡದೆ ಮುಂದೆ ಜೀವನದಲ್ಲಿ ಶ್ರೇಷ್ಠ ಗಾಯಕ, ವಾದಕರಾಗುವ ವಿಶೇಷ ನೈಪುಣ್ಯತೆಯನ್ನು ಕಲಿಸುವ, ಸಂಸ್ಕಾರಗೊಳಿಸುವುದು ಅಗತ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಖ್ಯಾತ ತಬಲಾ ವಾದಕ ಪಂ| ಎಚ್.ಸೋಮಶೇಖರ ಸ್ಮರಣೆಯಲ್ಲಿ ಅವರ ಶಿಷ್ಯ ಬಳಗವು ರವಿವಾರ ಹಮ್ಮಿಕೊಂಡಿದ್ದ ಭೈರವದಿಂದ ಭೈರವಿವರೆಗಿನ ಸ್ವರಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹಳಷ್ಟು ಗಾಯಕರು, ವಾದಕರು ಇರುತ್ತಾರೆ. ಆದರೆ ಅದರಲ್ಲಿ ಕೆಲವೇ ಕೆಲವರು ಶಿಷ್ಯರನ್ನು ತಯಾರು ಮಾಡುವ ವಿಶೇಷ ಗುಣ ಹೊಂದಿರುತ್ತಾರೆ. ಇಂತಹ ಗುರುಗಳಲ್ಲಿ ಸೋಮಶೇಖರರು ಒಬ್ಬರಾಗಿದ್ದಾರೆ. ಅವರ ಶಿಷ್ಯ ಬಳಗವು ಗುರುಗಳ ಹೆಸರನ್ನು ಉತ್ತುಂಗಕ್ಕೇರಿಸುವ ಕಾರ್ಯವನ್ನು ಕುಮಾರೇಶ್ವರ ಕಲ್ಚರಲ್ ಸೊಸೈಟಿ ಆಶ್ರಯದಲ್ಲಿ ನೆರವೇರಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಗುರು-ಶಿಷ್ಯ ಪರಂಪರೆ, ಸಂಬಂಧವೇನಾದರೂ ಉಳಿದಿದ್ದರೆ ಅದು ಸಂಗೀತ ಕ್ಷೇತ್ರದಲ್ಲಿ ಮಾತ್ರ ಎಂದು ಹೇಳಿದರು.
ಡಾ| ಉದಯ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಿತಾರ ಕಲಾವಿದ ಉಸ್ತಾದ್ ಛೋಟೆರಹಿಮತ್‌ಖಾನ್, ಖ್ಯಾತ ಹಿಂದುಸ್ತಾನಿ ಗಾಯಕ ಪಂ| ಕೈವಲ್ಯಕುಮಾರ ಗುರವ, ಹಿರಿಯ ಸಿತಾರ ವಾದಕರಾದ ಉಸ್ತಾದ್ ಶಫಿಕ್ ಖಾನ್ ಮಾತನಾಡಿದರು.
ಪ್ರಕಾಶ ಬಾಳಿಕಾಯಿ ಇದ್ದರು. ಸ್ವರಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ಹಿಂದುಸ್ತಾನಿ ಗಾಯಕ ಪಂ| ಕೈವಲ್ಯಕುಮಾರ ಗುರವ, ಸುಜೇಂದ್ರ ಕುಲಕರ್ಣಿ, ಡಾ| ಶಕ್ತಿ ಪಾಟೀಲ, ಪಂ| ಅಶೋಕ ನಾಡಗೇರ, ವಿದುಷಿ ರಾಧಾ ದೇಸಾಯಿ, ವಿದುಷಿ ಸುಜಾತಾ ಗುರವ, ಗೋಪಾಲಕೃಷ್ಣ ಭಾಗವತ್, ಡಾ| ವಿಜಯಕುಮಾರ ಪಾಟೀಲ ಗಾಯನ ಪ್ರಸ್ತುತ ಪಡಿಸಿದರು.
ಉಸ್ತಾದ್ ಶಫಿಕ್‌ಖಾನ್ ಸಿತಾರ ವಾದನ, ಪಂ| ಹರೀಶ ಕುಲಕರ್ಣಿ ಬಾಂಸುರಿ ವಾದನ, ಶ್ರೀಧರ ಕುಲಕರ್ಣಿ ಮತ್ತು ಕಾರ್ತಿಕ ಕಾವಟೇಕರ ತಬಲಾ ಸೋಲೋ ನಡೆಸಿಕೊಟ್ಟರು. ತಬಲಾದಲ್ಲಿ ಡಾ| ಉದಯ ಕುಲಕರ್ಣಿ, ಡಾ| ಶ್ರೀಹರಿ ದಿಗ್ಗಾವಿ, ಡಾ| ದುಂಡಯ್ಯ ಪೂಜಾರ, ಜಯತೀರ್ಥ ಪಂಚಮುಖೀ, ಕಾರ್ತಿಕ ಭಟ್ಟ, ಶ್ರೀಧರ ಕುಲಕರ್ಣಿ ಹಾಗೂ ಸಂವಾದಿನಿಯಲ್ಲಿ ಪಂ| ಗುರುಪ್ರಸಾದ ಹೆಗಡೆ, ದತ್ತರಾಜ ಮಹಾಲ್ಸಿ, ಬಸವರಾಜ ಹಿರೇಮಠ ಸಾಥ್ ನೀಡಿದರು.
ಡಾ| ಮಲ್ಲಿಕಾರ್ಜುನ ತರ್ಲಗಟ್ಟಿ, ಪಂ| ವಾದಿರಾಜ ನಿಂಬರಗಿ, ಪಂ| ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಉಸ್ತಾದ್ ನಿಸಾರ ಅಹಮ್ಮದ, ಜಿತೇಂದ್ರ ಕುಲಕರ್ಣಿ, ಡಾ| ಉದಯ ದೇಸಾಯಿ, ನಿಜಗುಣ ರಾಜಗುರು, ಡಾ| ಎ.ಎಲ್.ದೇಸಾಯಿ, ಡಾ| ಶ್ರೀಧರ ಕುಲಕರ್ಣಿ, ವೀರಣ್ಣ ಪತ್ತಾರ, ಹμàಜ್ ಖಾನ್, ಜಿ.ಆರ್. ಭಟ್ಟ, ವೇಣುಗೋಪಾಲ ಜೋಶಿ, ಅಜಿತ ಭಾತಖಾಂಡೆ, ಡಾ| ವಿಜಯ ತ್ರಾಸದ, ವಿದ್ಯಾಭೂಷಣ ಪಂಚಮುಖೀ, ಪ್ರಸನ್ ಕುಲಕರ್ಣಿ ಇದ್ದರು. ಭಾಗ್ಯಶ್ರೀ ಭಟ್ ನಿರೂಪಿಸಿದರು. ಡಾ| ಉದಯ ಕುಲಕರ್ಣಿ ಸ್ವಾಗತಿಸಿದರು. ಡಾ| ರವಿ ಜೋಶಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.