ತಹಶೀಲ್ ಕಚೇರಿ ಡಿಜಿಟಲ್
Team Udayavani, Oct 9, 2017, 12:30 PM IST
ಹುಬ್ಬಳ್ಳಿ: ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕರಿಗೆ ಕಾಲ ಮಿತಿಯಲ್ಲಿ ಸೇವೆ ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಸಂಪೂರ್ಣ ಡಿಜಿಟಲೀಕರಣ ಗೊಂಡಿದ್ದು, ಜನಸಾಮಾನ್ಯರಿಗೆ ಅವಶ್ಯವಿರುವ ಸಂಪೂರ್ಣ ಕಂದಾಯ ದಾಖಲೆಗಳು ಗಣಕೀಕರಣಗೊಂಡ ಕಚೇರಿ ಎಂಬ ಹೆಗ್ಗಳಿಕೆ ಗಳಿಸಿದೆ.
ದಾಖಲೆಗಳನ್ನು ತಿರುಚುವುದು, ಹಳೆಯ ದಾಖಲೆ ಹುಡುಕಲು ವಿಳಂಬ, ದಾಖಲೆಗಳ ನಾಶ, ನಕಲಿ ದಾಖಲೆಗಳ ಸೃಷ್ಟಿ ಸೇರಿದಂತೆ ಇತರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರಾತ್ಮಾಕವಾಗಿ ಜನಸಾಮಾನ್ಯರಿಗೆ ಅವಶ್ಯರುವ ಸಂಪೂರ್ಣ ಭೂ ದಾಖಲೆಗಳನ್ನು ಗಣಕೀರಣಗೊಳಿಸಿದ ಖ್ಯಾತಿಯನ್ನು ಹುಬ್ಬಳ್ಳಿ ತಹಶೀಲ್ದಾರ ಕಚೇರಿ ಗಳಿಸಿದೆ.
ಶಶಿಧರ ಮಾಡ್ಯಾಳ ಮುತುವರ್ಜಿಯಿಂದ ಖಾಸಗಿಯವರಿಂದ ನೆರವು ಪಡೆದು ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಜನರಿಗೆ ಅಗತ್ಯವಿರುವ ಸುಮಾರು 9.80 ಲಕ್ಷ ಪ್ರತಿಗಳು ಡಿಜಿಟಲೀಕರಣಗೊಂಡಿವೆ. 1930 ರಿಂದ 2001ರ ವರೆಗಿನ ಪಹಣಿ, ಜನನ-ಮರಣ ಪ್ರಮಾಣ ಪತ್ರ ಸೇರಿದಂತೆ ಹಳೇ ದಾಖಲೆಗಳು ಇದೀಗ ಕ್ಷಣಾರ್ಧದಲ್ಲೇ ಅರ್ಜಿದಾರರಿಗೆ ದೊರೆಯಲಿವೆ.
ಒಂದೇ ದಿನಕ್ಕೆ ದಾಖಲೆ: ಬ್ಯಾಂಕ್ ಸಾಲ, ಭೂ ಪರಿವರ್ತನೆ, ಕೃಷಿ ಸಾಲ, ಹಕ್ಕು ಪ್ರಾಪ್ತಿ ಸೇರಿದಂತೆ ಹಲವು ಕೆಲಸಗಳಿಗೆ ಬೇಕಾದ ಅಗತ್ಯದಾಖಲೆಗಳನ್ನು ಪಡೆಯುವುದು ತೀರ ಸುಲಭವಾಗಿದೆ. ಅರ್ಜಿ ಸಲ್ಲಿಸಿ ಒಂದು ದಾಖಲೆಗಾಗಿ ನಾಲ್ಕೈದು ಬಾರಿ ಕಚೇರಿಗೆ ಅಲೆಯುವುದು ತಪ್ಪಿದಂತಾಗಿದೆ.
ದಾಖಲೆ ನೀಡಲು ವಿಳಂಬ ಮಾಡುತ್ತಿದ್ದ ಸಿಬ್ಬಂದಿ ಇನ್ನು ಮುಂದೆ ಯಾವುದೇ ಸಬೂಬು ನೀಡಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಡಿಜಿಟಲೀಕರಣ ಆಗಿರುವುದರಿಂದ ಅರ್ಜಿ ಸಲ್ಲಿಸಿದ ದಿನವೇ ಬೇಕಾದ ದಾಖಲಾತಿಗಳು ಅರ್ಜಿದಾರನಿಗೆ ದೊರೆಯುವಂತಾಗಿದೆ.
ಆಡಳಿತ ಸರಳ: ಡಿಜಿಟಲೀಕರಣ ಗೊಂಡಿರುವುದರಿಂದ ಆಡಳಿತದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿದೆ. ಹಳೆ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದಾಗ ತಿಂಗಳು ಕಾಲ ದಾಖಲೆ ಹುಡುಕಾಟಕ್ಕೆ ಬೇಕಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಕೆಲ ಸಿಬ್ಬಂದಿ ಸಮಯಾವಕಾಶ ಬೇಕಾಗುತ್ತದೆ ಎಂದು ಜಾರಿಗೊಳ್ಳುತ್ತಿದ್ದರು. ಇದೀಗ ಬೆರಳ ತುದಿಯಲ್ಲೇ ಮಾಹಿತಿ ದೊರೆಯುವುದರಿಂದ ಹಳೆಯ ದಾಖಲೆಗಳನ್ನು ಹುಡುಕುವ ಕಾರ್ಯದಿಂದ ಸಿಬ್ಬಂದಿ ಮುಕ್ತರಾಗಿದ್ದಾರೆ. ಸಿಬ್ಬಂದಿಗೆ ಸಾಕಷ್ಟು ಕಾರ್ಯಭಾರ ಕೂಡ ಕಡಿಮೆಯಾಗಿದೆ.
ದಾಖಲೆಗಳ ನಾಶ: 1930ನೇ ಇಸ್ವಿಯ ದಾಖಲೆಗಳನ್ನು ಕಾಪಾಡಿಕೊಳ್ಳುವುದು ಸುಲಭದ ಕಾರ್ಯವಲ್ಲ. ಅಗತ್ಯ ದಾಖಲೆಗಳು ನಾಶವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮೂಲ ದಾಖಲೆಗಳನ್ನು ಹಾಳಾಗಾದಂತೆ ಇಡುವುದು ಅಧಿಕಾರಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು.
ಬೆಂಕಿ ಅವಘಡದಿಂದ ದಾಖಲೆಗಳು ನಾಶವಾಗಿರುವ ಅನೇಕ ಉದಾಹರಣೆಗಳಿವೆ. ಇದೀಗ ಡಿಜಿಟಲೀಕರಣ ಆಗಿರುವುದರಿಂದ ಯಾವುದೇ ಕಾರಣಕ್ಕೂ ದಾಖಲೆಗಳನ್ನು ನಾಶ ಪಡಿಸಲು ಸಾಧ್ಯವಿಲ್ಲ. ಗಣಕೀಕೃತಗೊಂಡ ದಾಖಲೆಗಳನ್ನು ನೀಡಲು ಓರ್ವ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹೀಗಾಗಿ ದಾಖಲೆಗಳನ್ನು ತಿರುಚುವುದು ಅಥವಾ ನಾಶಪಡಿಸಲು ಸಾಧ್ಯವಿಲ್ಲ. ಸಲ್ಲಿಸಿದ ಅರ್ಜಿಗೆ ಪೂರಕವಾದ ದಾಖಲೆಗಳನ್ನು ನೀಡುವುದನ್ನು ಬಿಟ್ಟು ಹೆಚ್ಚುವರಿ ಕೆಲಸ ಮಾಡಲು ಇಲ್ಲಿ ಸಾಧ್ಯವಿಲ್ಲ. ತಹಶೀಲ್ದಾರ್ ಅಡ್ಮಿನ್ ಆಗಿದ್ದು, ತಾಂತ್ರಿಕ ಕಾರಣಗಳು ಉಂಟಾದಾಗ ಮಾತ್ರ ದಾಖಲೆಗಳನ್ನು ಪರಿಶೀಲನೆ ಮಾಡುವುದಾಗಿದೆ.
* ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.