ದೀಪಾವಳಿ ಪ್ರಯುಕ್ತ ತತ್ಕಾಲ್ ವಿಶೇಷ ರೈಲು
Team Udayavani, Nov 8, 2018, 6:10 AM IST
ಹುಬ್ಬಳ್ಳಿ: ದೀಪಾವಳಿ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸಲಿದೆ. ಯಶವಂತಪುರ-ಹುಬ್ಬಳ್ಳಿ ತತ್ಕಾಲ್ ಎಕ್ಸ್‌ಪ್ರೆಸ್ (06583) ರೈಲು ನ.11ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 2:35ಕ್ಕೆ ಹುಬ್ಬಳ್ಳಿಗೆ ಬರಲಿದೆ.
ಒಂದು ಟ್ರಿಪ್ ಮಾತ್ರ ಸಂಚರಿಸುವ ರೈಲು ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರ, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಸಂಚರಿಸಲದೆ.
ತತ್ಕಾಲ್ ಎಕ್ಸ್‌ಪ್ರೆಸ್:ಹುಬ್ಬಳ್ಳಿ-ಯಲಹಂಕ ಮಧ್ಯೆ (ಹೊಸಪೇಟೆ ಮಾರ್ಗವಾಗಿ) ವಿಶೇಷ ತತ್ಕಾಲ್( 06584) ರೈಲು ಸೇವೆ ಕಲ್ಪಿಸಲಾಗುವುದು. ರೈಲು ನ.11ರಂದು ಸಂಜೆ 4:45ಕ್ಕೆ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಲಿದ್ದು, ಯಲಹಂಕ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 8 ಗಂಟೆಗೆ ಬಂದು ಸೇರಲಿದೆ. ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ, ಚಿಕ್ಕಜಾಜೂರ, ಕಡೂರ, ಅರಸಿಕೆರೆ, ತುಮಕೂರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಬೋಗಿಗಳ ಸೇರ್ಪಡೆ: ದೀಪಾವಳಿ ಪ್ರಯುಕ್ತ ಕೆಲವು ರೈಲುಗಳಿಗೆ ತಾತ್ಕಾಲಿಕವಾಗಿ ಬೋಗಿ ಜೋಡಿಸಲಾಗುವುದು. ಬೆಂಗಳೂರು ನಗರ-ಹುಬ್ಬಳ್ಳಿ ಜನಶತಾಬ್ದಿ (1207912080) ರೈಲಿಗೆ ನ.11ರವರೆಗೆ ಒಂದು ಚೇರ್ ಕಾರ್ ಜೋಡಿಸಲಾಗುವುದು. ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ (22697/22698) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಾಗುವುದು. ಬೆಂಗಳೂರು ನಗರ-ಕೊಲ್ಹಾಪುರ (16589/16590) ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿಗೆ ನ.11ರವರೆಗೆ ಒಂದು 3 ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಅಳವಡಿಸಲಾಗುವುದು. ಮೈಸೂರು-ತಾಳಗುಪ್ಪ (16227/16228) ರೈಲಿಗೆ ನ.9ರಿಂದ ನ.12ವರೆಗೆ ಒಂದು 3-ಟೈರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಿದೆ.
ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ (17301/17302)ರೈಲಿಗೆ ನ.10ರವರೆಗೆ ಒಂದು 3-ಟೀರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಅಳವಡಿಸಲಾಗುವುದು. ಮೈಸೂರು-ಸೊಲ್ಲಾಪುರ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲಿಗೆ ನ.12ರವರೆಗೆ ಒಂದು 3-ಟೀರ್ ದ್ವಿತೀಯ ದರ್ಜೆ ಸ್ಲಿàಪರ್ ಕೋಚ್ ಜೋಡಿಸಲಾಗುವುದು. ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೀರ್ ಎಸಿ ಕೋಚ್ ಜೋಡಿಸಲು ನಿರ್ಧರಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು