ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಕರ ಸಂಘದಿಂದ ಒತ್ತಾಯ
Team Udayavani, Aug 19, 2018, 5:01 PM IST
ಬೀಳಗಿ: ರಾಜ್ಯ ಸರಕಾರಿ ನೌಕರರ ಕಲ್ಯಾಣ ದೃಷ್ಟಿಯಿಂದ ಈಗಾಗಲೇ ಆರನೇ ವೇತನ ಆಯೋಗದ ಶಿಫಾರಸಿನಂತೆ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗಳಿಗೆ ಬಡ್ತಿ ಪಡೆದ ಸಹ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಯಥಾವತ್ತಾಗಿ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಸ್.ಟಿ.ಬೆಳಕೊಪ್ಪ ಮಾತನಾಡಿ, ಸೇವಾ ಜ್ಯೇಷ್ಠತೆ ಮತ್ತು ನಿಗ ದಿತ ವಿದ್ಯಾರ್ಹತೆಯ ಆಧಾರದ ಮೇಲೆ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ಮತ್ತು ಪ್ರೌಢಶಾಲೆಗಳಿಂದ ಪಪೂ ಕಾಲೇಜುಗಳಿಗೆ ಪದೋನ್ನತಿ ಪಡೆದ ಪ್ರೌಢಶಾಲಾ ಬಡ್ತಿ ಶಿಕ್ಷಕರಿಗೆ ಕಾಲಬದ್ಧ ವೇತನ ಬಡ್ತಿಗಳು ಪದೋನ್ನತಿ ಪಡೆದ ನೌಕರರಿಗೆ ಸಿಗದಿರುವುದು ವಿಷಾದನೀಯ. ಸಂಘದ ಮನವಿಗಳನ್ನು ಹಾಗೂ ಇಲಾಖಾ ಶಿಫಾರಸಿನ ಪ್ರಸ್ತಾವನೆ ಪರಿಶೀಲಿಸಿ ಎರಡನೇ ಸಂಪುಟದ ವರದಿಯಲ್ಲಿ ಪದೋನ್ನತಿ ಪಡೆದ ನೌಕರರು, ಪದೋನ್ನತಿ ಪಡೆಯದೆ 10,15,20,25,30 ಸೇವಾ ವರ್ಷಗಳ ಕಾಲಬದ್ದ ವೇತನ ಬಡ್ತಿಗಳು ಪಡೆಯಬಹುದಾದ ವೇತನಕ್ಕೆ ಕಡಿಮೆಯಿಲ್ಲದಂತೆ ವೇತನವನ್ನು ವಿವಿಧ ಹಂತಗಳಲ್ಲಿ ಪರಿಷ್ಕರಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ. ಆಯೋಗದ ಶಿಫಾರಸನ್ನು ರಾಜ್ಯ ಸರಕಾರ ಕೂಡಲೇ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಮೂರು ಪ್ರಮುಖ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಆರ್.ಎಂ.ಬಾಗವಾನ್,ವಿಠ್ಠಲ ಹಿರೇನಿಂಗಪ್ಪನವರ, ಎಂ.ವೈ. ವಡವಾಣಿ, ಆರ್. ಎಸ್.ಪಾಟೀಲ, ಗುರುರಾಜ ಲೂತಿ, ಬಿ.ಆರ್. ಮದಕಟ್ಟಿ, ಮಹಾಂತೇಶ ಲಮಾಣಿ, ಎಸ್.ಎಸ್. ರಾಠೊಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.