ಜನಪದ ಶೈಲಿ ಹಾಡಿಗೆ ಹೆಜ್ಜೆ ಹಾಕಿದ ಶಿಕ್ಷಕರು
Team Udayavani, Apr 7, 2019, 6:00 AM IST
ಧಾರವಾಡ: ಸ್ವೀಪ್ ಸಮಿತಿ, ಜಿಪಂ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮತದಾರರ ಜಾಗೃತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ|ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ನಗರದ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಜರುಗಿತು.
ಜನಪದ ಶೈಲಿಯ ಹಾಡಿಗೆ ಶಿಕ್ಷಕರು ಕೋಲಾಟದೊಂದಿಗೆ ಹೆಜ್ಜೆ ಹಾಕಿದರೆ, ದೃಷ್ಟಿ ವಿಕಲಚೇತನೆ ಕೃತ್ತಿಕಾ ಜಂಗಲಿಮಠ ಅವರು ಧಾರವಾಡ ಗ್ರಾಮೀಣ ಬಿಇಒ ವಿದ್ಯಾ ನಾಡಿಗೇರ ರಚಿಸಿದ ಚುನಾವಣಾ ಜಾಗೃತಿ ಗೀತೆ ಹಾಡಿದರಲ್ಲದೇ ಬಾನ್ಸುರಿ ವಾದನ ಮೂಲಕ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ನುಡಿಸಿದರು.
ಅಳ್ನಾವರದ ಎಇಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ರಮ್ಯಾ ಕುಬಸದ ವೃಕ್ಷಮಾತೆ ಪೋಷಾಕು ಧರಿಸಿ ಗಮನ ಸೆಳೆದಳು. ಹೊನ್ನಾಪುರ ಪ್ರಭುದೇವ ಪ್ರೌಢಶಾಲೆಯ ಮಹಾಂತೇಶ ಹುಬ್ಬಳ್ಳಿ ಅವರು ರಚಿಸಿದ, ಬಾಬಾಜಾನ್ ಮುಲ್ಲಾ ಅವರು ರಾಗ
ಸಂಯೋಜಿಸಿದ್ದ ಗೀತೆಗೆ ಶಿಕ್ಷಕಿಯರು ಹೆಜ್ಜೆ ಹಾಕಿದರು. ಮಾದರಿ ಇವಿಎಂ, ವಿವಿಪ್ಯಾಟ್ ಯಂತ್ರಗಳಲ್ಲಿ ಅಣಕು ಮತ ಚಲಾಯಿಸಿದರು.
ಮಹದೇವ ಸತ್ತಿಗೇರಿ ನಗೆಹನಿಗಳೊಂದಿಗೆಮತದಾರರನ್ನು ಜಾಗೃತಿ ಗೊಳಿಸಿದರು. ಎಫ್ .ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರು ಕೋಲಾಟ, ಕಿರು ನಾಟಕ ಪ್ರದರ್ಶಿಸಿದರು. ಶಿಕ್ಷಕ ಸಂಜೀವ್ ಕಾಳೆ ರಚಿಸಿರುವ ಮತದಾರ ಜಾಗೃತಿ ವ್ಯಂಗ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಡಿಡಿಪಿಐ ಗಜಾನನ ಮನ್ನಿಕೇರಿ, ತಾಪಂ ಇಒ ಎಸ್.ಎಸ್. ಕಾದೊಳ್ಳಿ, ತಹಶೀಲ್ದಾರ್ ಪ್ರಕಾಶ ಕುದರಿ, ಎ.ಎ.ಖಾಜಿ, ವಿದ್ಯಾ ನಾಡಿಗೇರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.