ಬೇಂದ್ರೆಗೆ ತಾತ್ಕಾಲಿಕ ರಿಲೀಫ್
| 15 ದಿನ ಯಥಾಸ್ಥಿತಿ ಕಾಪಾಡಲು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ ಆದೇಶ
Team Udayavani, Jul 16, 2019, 8:44 AM IST
ಹುಬ್ಬಳ್ಳಿ: ಬೇಂದ್ರೆ ಸಾರಿಗೆಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 15 ದಿನಗಳ ಕಾಲ ಯಥಾಸ್ಥಿತಿ (ಸ್ಟೆಟೆಸ್ಕೋ ) ಕಾಪಾಡುವಂತೆ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಸೋಮವಾರ ಆದೇಶ ನೀಡಿದೆ.
ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ ರಹದಾರಿ ಪರವಾನಗಿ ನೀಡಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿರಾಕರಿಸಿತ್ತು. ಹೀಗಾಗಿ ಬೇಂದ್ರೆ ಸಾರಿಗೆ ಮಾಲೀಕರು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮನವಿ ಮಾಡಿದ್ದರು.
ಕಳೆದ 15 ವರ್ಷಗಳಿಂದ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿದ್ದು, ಇದೀಗ ಏಕಾಏಕಿ ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ ಪರವಾನಗಿ ನೀಡಲು ಆರ್‌ಟಿಎ ನಿರಾಕರಿಸಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಲೀಕರು ಮನವಿ ಮಾಡಿದ್ದರು.
ಅರ್ಜಿದಾರರ ಮನವಿ ಆಲಿಸಿದ ಮೇಲ್ಮನವಿ ನ್ಯಾಯಾಧೀಕರಣ ಸಾರ್ವಜನಿಕ ಹಿತದೃಷ್ಟಿಯಿಂದ ಜೂ. 26ರ ಸ್ಥಿತಿಯನ್ನು ಜು. 31ರ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.
ಜೂ. 26ರಂದು 41 ಬಸ್‌ಗಳು ಅವಳಿ ನಗರದ ನಡುವೆ ಸಂಚಾರ ಮಾಡುತ್ತಿದ್ದು, ಅಂದಿನ ಸ್ಥಿತಿ ಕಾಪಾಡಬೇಕು ಎನ್ನುವ ಆದೇಶವಿರುವ ಹಿನ್ನೆಲೆಯಲ್ಲಿ ಜು. 16ರಿಂದ ಪೂರ್ಣ ಪ್ರಮಾಣದಲ್ಲಿ ಮೊದಲಿನಂತೆ ಎಲ್ಲ ಬಸ್‌ಗಳು ಸಂಚಾರ ಮಾಡಲಿವೆ. ಸೋಮವಾರ ಆದೇಶ ಹೊರಬೀಳುತ್ತಿದ್ದಂತೆ ರಹದಾರಿ ಪರವಾನಗಿ ಹೊಂದಿದ ಮೂರು ಬಸ್‌ಗಳೊಂದಿಗೆ ಹೆಚ್ಚುವರಿಯಾಗಿ 5 ಬಸ್ ಸಂಚಾರ ಮಾಡಿದ್ದು, ಜು. 16ರಿಂದ 41 ಬಸ್‌ಗಳು ರಸ್ತೆಗಳಿಯಲಿವೆ.
ಬೇಂದ್ರೆ ಸಾರಿಗೆ ಬಸ್‌ಗಳ ಪರವಾನಗಿ ಹಂತ ಹಂತವಾಗಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಪರವಾನಗಿ ನವೀಕರಣ ಮಾಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಐದು ವರ್ಷಗಳ ಕಾಲ ನೀಡಿದ್ದ ಪರವಾನಗಿ ಮುಗಿದಿದ್ದು, ಅವಳಿ ನಗರದ ಬಿಆರ್‌ಟಿಎಸ್ ಸಾರಿಗೆ ವ್ಯವಸ್ಥೆ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ನವೀಕರಣಕ್ಕೆ ಪ್ರಾಧಿಕಾರ ಒಪ್ಪಿರಲಿಲ್ಲ. ನಂತರ ತಾತ್ಕಾಲಿಕ ಪರವಾನಗಿ ನೀಡುವಂತೆಯೂ ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಾಧಿಕಾರ ತಳ್ಳಿಹಾಕಿತ್ತು.
ಅವಳಿ ನಗರದ ನಡುವೆ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿದ ಪರಿಣಾಮ ಮೇಲ್ಮನವಿ ನ್ಯಾಯಾಧೀಕರಣ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿದ್ದು, ನೌಕರರು ಹಾಗೂ ಜನರಲ್ಲಿ ಸಂತಸ ಮೂಡಿದೆ. ಪ್ರಾಮಾಣಿಕ ಕಾನೂನು ಹೋರಾಟದಿಂದ ನಮಗೆ ಒಂದಿಷ್ಟು ಯಶಸ್ಸು ದೊರಕಿದೆ. ಜು. 16ರಿಂದ 41 ಬಸ್‌ಗಳ ಸಂಚಾರ ಆರಂಭವಾಗಲಿದೆ.• ಸುಧಾಕರ ಶೆಟ್ಟಿ, ವ್ಯವಸ್ಥಾಪಕ, ಬೇಂದ್ರೆ ಸಾರಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.