ಭಯೋತ್ಪಾದನೆ ಬೇರು ಸಹಿತ ಕೀಳಬೇಕು: ಜೋಶಿ
Team Udayavani, May 22, 2019, 12:20 PM IST
ಧಾರವಾಡ: ಡಿಸಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದ ಬಳಿ ಭಯೋತ್ಪಾದನಾ ವಿರೋಧಿ ದಿನ ಆಚರಿಸಲಾಯಿತು.
ಧಾರವಾಡ: ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿದ ಕ್ಯಾನ್ಸರ್ ರೋಗವಾಗಿದೆ. ಭಯೋತ್ಪಾದನೆ ಕಾರ್ಯವನ್ನು ವಿರೋಧಿಸದೇ ಅದನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಸಮಸ್ತ ಭಾರತೀಯರು ಸಿದ್ಧವಾಗಬೇಕು ಎಂದು ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಹೇಳಿದರು.
ಡಿಸಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದ ಬಳಿ ಭಯೋತ್ಪಾದನಾ ವಿರೋಧಿ ದಿನಾಚರಣೆ ಅಂಗವಾಗಿ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆ ಒಂದು ಅಸಾಂಪ್ರದಾಯಿಕ ಯುದ್ಧ. ಭಾರತ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಎಂದಿಗೂ ನಾವು ಇನ್ನೊಂದು ರಾಷ್ಟ್ರದ ಭೂಪ್ರದೇಶವನ್ನು ಕಬಳಿಸುವ, ಆಕ್ರಮಿಸುವ ಕೃತ್ಯವನ್ನು ಎಸಗಿಲ್ಲ. ಆದರೆ ಭಾರತವನ್ನು ಕೆಣಕಿದರೆ ನಮಗಿನ್ನು ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು ಭಾರತ ಪಾಕಿಸ್ತಾನಕ್ಕೆ ನೀಡಿದೆ. ಪ್ರಾಣತೆತ್ತ ನಮ್ಮ ವೀರಸೈನಿಕರನ್ನು ಸದಾ ಸ್ಮರಿಸಬೇಕಾದದ್ದು ಆದ್ಯ ಕರ್ತವ್ಯ. ಭಯೋತ್ಪಾದನೆ ನಿಗ್ರಹಿಸುವಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ ಮಾತನಾಡಿ, ಭಯೋತ್ಪಾದಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಕ ಶಿಕ್ಷೆಯನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಹಕಾರ ನೀಡಬೇಕು ಎಂದರು.
2001 ಸೆ. 18ರಂದು ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ವೀರಯೋಧ ರಾಘವೇಂದ್ರ ಬಡಿಗೇರ ಅವರ ಪೋಷಕರಾದ ಮಹಾದೇವಪ್ಪ ಮತ್ತು ಇಂದಿರಾ ಅವರನ್ನು ಗೌರವಿಸಲಾಯಿತು.
ವೀರಣ್ಣ ಒಡ್ಡೀನ, ಪಂಡಿತ ಮುಂಜಿ, ಎಸ್.ಬಿ. ಗುತ್ತಲ, ಪ್ರಾಣೇಶ ಪಾಶ್ಚಾಪುರ, ಭೀಮಪ್ಪ ಜಾಧವ, ಈರಪ್ಪಣ್ಣ ಅಮೀನಗಡ, ಬಾಬುರಾವ್ ರಾಠೊಡ, ನಜೀರ ಗೊರವನಕೊಳ್ಳ, ನಾಗರತ್ನಾ ಅಮೀನಗಡ, ಪ್ರಕಾಶ ಕುಲಕರ್ಣಿ, ಎ.ಆರ್. ಜೋಶಿ, ಪಿ.ಎನ್. ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.