ಪರೀಕ್ಷಾರ್ಥಿಗಳಿಗೆ ತೊಂದರೆ
Team Udayavani, Mar 14, 2017, 3:03 PM IST
ಧಾರವಾಡ: ನಗರದಲ್ಲಿ ಹೋಳಿ ಹಬ್ಬದ ನಿಮಿತ್ತ ಒಂದೆಡೆ ಬಣ್ಣದಾಟ ಇದ್ದರೆ, ಇನ್ನೊಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆ ಉಂಟಾಯಿತು. ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಬೆಳಿಗ್ಗೆ ಪರೀಕ್ಷೆಗೆ ತೆರಳಲು ಬಸ್‌ಗಾಗಿ ಪರದಾಡಿದರೆ, ಪರೀಕ್ಷೆ ಮುಗಿದ ಬಳಿಕ ಮನೆಗಳಿಗೆ ತೆರಳಲು ಸಂಜೆವರೆಗೂ ಬಸ್‌ಗಳಿಗಾಗಿ ಕಾದು ನಿಂತ ದೃಶ್ಯಗಳು ಕಂಡು ಬಂದವು.
ಸೋಮವಾರ ಬೆಳಿಗ್ಗೆ10:30 ರಿಂದ 1:30 ಗಂಟೆವರೆಗೆ ಪಿಯುಸಿ ಕಲಾ ವಿಭಾಗದ ಸಮಾಜಶಾಸ್ತ್ರ ಮತ್ತು ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ಪರೀಕ್ಷೆ ನಿಗದಿ ಮಾಡಲಾಗಿತ್ತು. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ಮತ್ತು ಅವರ ಪರೀûಾ ಸ್ಥಳಗಳು ದೂರ ಇದ್ದರೂ ಜಿಲ್ಲಾಡಳಿತದಿಂದ ಮುಂಚಿತವಾಗಿಯೇ ಬಸ್ ಸೌಲಭ್ಯ ಅಥವಾ ಇನ್ನಿತರ ಸೌಲಭ್ಯ ಮಾಡಿರಲಿಲ್ಲ.
ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಪರದಾಡಿದರು. ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪೋಲಿ ಹುಡುಗರು ಬಣ್ಣ ಎರಚಿದರೂ ಅದರಲ್ಲಿಯೇ ಪರೀಕ್ಷೆಗೆ ತೆರಳಿದ ಘಟನೆಗಳು ಕಂಡು ಬಂದವು. ಪರೀಕ್ಷೆ ಮುಗಿಸಿದ ನಂತರವೂ ಎಲ್ಲೆಡೆ ಬಣ್ಣ ಜೋರಾಗಿಯೇ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಣ್ಣದಲ್ಲಿಯೇ ಮನೆಗೆ ಮರಳಿದಸನ್ನಿವೇಶಗಳು ಜರುಗಿದವು.
ಸೋಮವಾರ ನಡೆದ ಸಮಾಜಶಾಸ್ತ್ರ ವಿಷಯಕ್ಕೆ ಒಟ್ಟು 4636 ವಿದ್ಯಾರ್ಥಿಗಳ ಪೈಕಿ 4324 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 312 ವಿದ್ಯಾರ್ಥಿಗಳು ಗೈರು ಉಳಿದಿದ್ದರು. ಇದಲ್ಲದೇ ವಾಣಿಜ್ಯ ವಿಷಯಕ್ಕೆ 7784ರ ಪೈಕಿ 306 ಗೈರು ಉಳಿಯುವ ಮೂಲಕ 7468 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ