ಭಗಿನಿ ನಿವೇದಿತಾ ಕಾರ್ಯ ಸ್ತುತ್ಯರ್ಹ
Team Udayavani, Jul 14, 2017, 12:15 PM IST
ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಅನುಷ್ಠಾನಗೊಳಿಸಿದ ಭಗಿನಿ ನಿವೇದಿತಾ ಕಾರ್ಯ ಸ್ತುತ್ಯಾರ್ಹ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಎಸ್‌ಜೆಎಂವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ನಡೆದ “ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಅಕ್ಷರಶಃ ಪಾಲಿಸಿದವರು ನಿವೇದಿತಾ. ವಿವೇಕಾನಂದರು ಗರ್ಭಗುಡಿಯ ಮೂರ್ತಿಯಾದರೆ, ನಿವೇದಿತಾ ಉತ್ಸವ ಮೂರ್ತಿ. ಗುರುವಿನ ಅಣತಿಯಂತೆ ತಮ್ಮ ದೇಶ ಬಿಟ್ಟು ಭಾರತಕ್ಕೆ ಸೇವೆ ಮಾಡಲು ಬಂದ ನಿವೇದಿತಾ ಕಾರ್ಯವನ್ನು ಸ್ಮರಿಸುವುದು ಭಾರತೀಯರೆಲ್ಲರ ಆದ್ಯ ಕರ್ತವ್ಯ ಎಂದರು.
ತ್ಯಾಗಕ್ಕೆ ಇನ್ನೊಂದು ಹೆಸರೇ ನಿವೇದಿತಾ. ಅವರು ಭಾರತೀಯ ಸಂಸ್ಕೃತಿಯನ್ನು ಅರಿತು ಮಹಿಳೆಯರಿಗೆ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ದೀನ ದುರ್ಬಲರ ಸೇವೆ ಮಾಡುತ್ತ ಭಾರತದ ಏಳ್ಗೆಗೆ ಜೀವನವನ್ನು ಮುಡಿಪಾಗಿಟ್ಟರು ಎಂದರು. ಕೇವಲ ತನ್ನ ಮಕ್ಕಳನ್ನು ಸಲಹುವುದು, ಪೋಷಿಸುವುದು ಮಾತೃತ್ವವಲ್ಲ.
ಎಲ್ಲ ಮಕ್ಕಳು ತಮ್ಮ ಮಕ್ಕಳೆಂದು ಭಾವಿಸಿ ಸೇವೆ ಮಾಡುವುದು ಮಾತೃತ್ವ. ತಾನು ತಾಯಿಯಾಗದಿದ್ದರೂ ಬಡ ಮಕ್ಕಳ, ರೋಗಪೀಡಿತರ ಸೇವೆಗೆ ತಮ್ಮನ್ನು ನಿವೇದಿತಾ ಸಮರ್ಪಿಸಿಕೊಂಡರು. ಯುವತಿಯರು ಭಗಿನಿ ನಿವೇದಿತಾರ ಜೀವನ ಚರಿತ್ರೆ ಓದಿ ಅರ್ಥ ಮಾಡಿಕೊಳ್ಳಬೇಕು. ಅವರು ತೋರಿದ ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಹೃದಯ ದೇವರು ವಾಸಿಸುವ ಸ್ಥಳ. ಅದನ್ನು ವಿವೇಕಾನಂದರ, ಭಗಿನಿ ನಿವೇದಿತಾರ ವಿಚಾರಗಳಿಂದ ಶುದ್ಧೀಕರಿಸಿಕೊಳ್ಳಬೇಕು. ಹೃದಯ ಶುದ್ಧವಾಗಿದ್ದರೆ ದೇಶವನ್ನೇ ಆಳಬಹುದು. ವಿದ್ಯಾರ್ಥಿನಿಯರು ಅಂಕಸಾಧನೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು. ಉತ್ತಮ ಕೃತಿಗಳನ್ನು ಓದಿ ಜ್ಞಾನ ವಿಸ್ತರಿಸಿಕೊಳ್ಳಬೇಕು ಎಂದರು.
ನಮ್ಮ ದೇಶದ ಹಿರಿಮೆ, ಸಂಸ್ಕೃತಿ ಸಂಪತ್ತನ್ನು ಅರಿತುಕೊಳ್ಳಲು ಸ್ವಾಮಿ ವಿವೇಕಾನಂದರ ಜೀವನ-ಸಾಧನೆ-ಚಿಂತನೆಗಳನ್ನು ಓದಬೇಕು ಎಂದು ಶ್ರೀ ಮಾತಾ ಆಶ್ರಮದ ಪೂಜ್ಯ ಮಾತಾಜಿ ತೇಜೋಮಯಿ ಹೇಳಿದರು. ವಿವೇಕಾನಂದರ ಸಾಹಿತ್ಯ ಓದಿದರೆ ಯಾವುದೇ ಕ್ಷೇತ್ರವಿರಲಿ ಅದ್ಭುತ ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದು.
ಅವರ ಸಾಹಿತ್ಯ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಯುವ ಜನತೆಯಲ್ಲಿ ಸಿಂಹಸದೃಶ ಶಕ್ತಿಯಿದೆ ಎಂದರು. ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾಶಿವಮೊಗ್ಗ ಮಾತನಾಡಿ, ಅಹಂಕಾರದ ನಾಶವಾದಾಗಲೇ ನಾವು ಜ್ಞಾನ ಪಡೆಯಲು ಸಾಧ್ಯ ಎಂಬುದನ್ನು ಅರಿಯಬೇಕು.
ಐರ್ಲೆಂಡ್‌ನ ಮಾರ್ಗರೇಟ್ ನೋಬೆಲ್ ಭಾರತಕ್ಕೆ ಬಂದು ನಿವೇದಿತಾ ಆಗಿ ಸಾಮಾಜಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದರು. ಭಾರತಕ್ಕೆ ಬಂದ ನಿವೇದಿತಾ ಭಗವದ್ಗೀತೆ, ವೇದ, ಪುರಾಣ ಬಗ್ಗೆ ತಿಳಿದು ಸರಳ ಜೀವನ ನಡೆಸಿ ಮಾದರಿಯಾದರು ಎಂದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಪರ್ಕ ಪ್ರಮುಖ ಸ್ವಾತಿ ಮಂಗಳೂರು ಮಾತನಾಡಿ, ಭಾರತೀಯ ಮಹಿಳೆಯರಿಗೆ ನಿರ್ಭಯತೆ ಹಾಗೂ ದೇಶಭಕ್ತಿ ಮೂಡಿಸುವಲ್ಲಿ ನಿವೇದಿತಾ ಪ್ರಮುಖ ಪಾತ್ರ ವಹಿಸಿದರು. ಅವರು ಮಾಡಿದ ಕಾರ್ಯ ಅಸಾಮಾನ್ಯವಾದುದು ಎಂದರು.
ನಂತರ ನಡೆದ ಸಂವಾದದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರಿಸಿದರು. ಮಹಿಳಾ ಪದವಿ ವಿದ್ಯಾಲಯದ ಪ್ರಾಚಾರ್ಯ ಡಾ| ಅಕ್ಕಮಹಾದೇವಿ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಮಾತಾಜಿ ಅಮೂಲ್ಯಮಯಿ ಇದ್ದರು. ಡಾ| ಎಲ್.ಆರ್. ಅಂಗಡಿ ಸ್ವಾಗತಿಸಿದರು. ಸಾವಿತ್ರಿ ಚನ್ನೋಜಿ ನಿರೂಪಿಸಿದರು. ಪ್ರೊ| ಜಿ.ಎಸ್.ಗುಡಾರದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.