ವಿರಕ್ತ ಮಠಾಧೀಶರು ಸ್ಪಷ್ಟ ನಿಲುವು ತೋರಲಿ
Team Udayavani, Oct 23, 2017, 1:09 PM IST
ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಬಸವ ತತ್ವದಡಿಯಲ್ಲಿಯೇ ಅಸ್ತಿತ್ವ ಕಂಡುಕೊಂಡಿರುವ ವಿರಕ್ತ ಮಠಗಳ ಮಠಾಧೀಶರು ತಮ್ಮ ದ್ವಂದ್ವತೆ ಹಾಗೂ ಎರಡು ಕಡೆಗೂ ನಮ್ಮ ಸಹಮತ ಇದೆ ಎಂಬ ನಿಲುವು ಬಿಟ್ಟು ಸ್ಪಷ್ಟತೆ ವ್ಯಕ್ತಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಅಂಗವಾಗಿ ನವೆಂಬರ್ 5ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಂಚಪೀಠಾಧೀಶ್ವರರು ತಾವು ವೀರಶೈವ ಧರ್ಮದ ಪರವಾಗಿದ್ದೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದು, ಅವರ ಬಗ್ಗೆ ನಾವು ಹೆಚ್ಚು ಗಮನ ನೀಡುವುದಿಲ್ಲ.
ಲಿಂಗಾಯತ ಸ್ವತಂತ್ರ ಧರ್ಮದ ಒತ್ತಾಯಕ್ಕೆ ನೀವು ಕೈ ಜೋಡಿಸಿ ಎಂದು ಅವರಿಗೆ ಮನವಿ ಮಾಡುತ್ತೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು. ರಾಜ್ಯದಲ್ಲಿ ಬಸವಣ್ಣನವರ ಹೆಸರಿನಲ್ಲಿ ಅವರ ತತ್ವಾಧಾರದಲ್ಲಿ ಅಸ್ತಿತ್ವ ಕಂಡುಕೊಂಡಿರುವ ವಿರಕ್ತ ಮಠಗಳ ಮಠಾಧೀಶರು ತಾವು ಮಾತ್ರ ಹೋರಾಟ ವಿಚಾರದಲ್ಲಿ ದ್ವಂದ್ವ ನಿಲುವು ಮುಂದುವರಿಸದೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು.
ವಿರಕ್ತ ಮಠಗಳ ಮಠಾಧೀಶರು ಲಿಂಗಾಯತ ಧರ್ಮ ಹೋರಾಟಕ್ಕೆ ಸ್ಪಂದನೆ ನೀಡಬೇಕಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಸಮಾಜದ ಬದುಕಿನ ಹೋರಾಟವಾಗಿದೆ. ಮಠಾಧೀಶರು ಭಕ್ತರ ನಿಲುವಿಗೆ ಸ್ಪಂದಿಸಬೇಕಾಗಿದೆ ಎಂದರು. ಶಿವಯೋಗ ಮಂದಿರದ ಅಧ್ಯಕ್ಷರಾಗಿ ಡಾ| ಸಂಗನಬಸವ ಸ್ವಾಮೀಜಿಯವರು 2003ರಿಂದ ಇದ್ದರೂ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ.
ಲಿಂಗಾಯತ ಹೋರಾಟಕ್ಕೆ ಜನಬೆಂಬಲವಿಲ್ಲ. ಈ ಬಗ್ಗೆ ಮತದಾನ ನಡೆದರೆ ಶೇ.75ರಷ್ಟು ಜನರು ನಮ್ಮ ಕಡೆ ಇದ್ದಾರೆಂದು ಸಂಗನಬಸವ ಸ್ವಾಮೀಜಿ ಹೇಳಿದ್ದು ಸರಿಯಲ್ಲ. ಎಲ್ಲರನ್ನು ಒಗ್ಗೂಡಿಸಬೇಕಾದ ಮಠಾಧೀಶರೇ ರಾಜಕಾರಣಿಗಳಂತೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು. 25ರಂದು ಸ್ಪಷ್ಟ ನಿರ್ಧಾರ: ಈ ಹಿಂದೆ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಪ್ರಸ್ತಾಪ ಎರಡು ಬಾರಿ ತಿರಸ್ಕೃತಗೊಂಡಿದೆ.
ಸಮಾಜಕ್ಕೆ ಸೌಲಭ್ಯ ಪಡೆಯಲು ಲಿಂಗಾಯತ ಸ್ವತಂತ್ರ ಧರ್ಮವೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅ.25ರಂದು ವೀರಶೈವ ಮಹಾಸಭಾದವರೊಂದಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದೇವೆ. ಅವರು ಒಪ್ಪಿದರೆ ಸರಿ ಇಲ್ಲವಾದರೆ ಅವರು ವೀರಶೈವ-ಲಿಂಗಾಯತ ಎಂದು ಕೊಡಲಿ, ನಾವು ಲಿಂಗಾಯತ ಸ್ವತಂತ್ರ ಧರ್ಮವೆಂದು ಮನವಿ ಸಲ್ಲಿಸುತ್ತೇವೆ ಎಂದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣವರಿಂದ ಲಿಂಗಾಯತ ಶಬ್ದ ಬಂದಿದೆ. ಅಲ್ಪಸಂಖ್ಯಾತ ಧರ್ಮದೊಂದಿಗೆ ಸಮಾಜಕ್ಕೆ ಸರಕಾರಿ ಸೌಲಭ್ಯ ಪಡೆಯಲು ಇನ್ನಾದರೂ ಸಂಘಟಿತ ಹೋರಾಟ ನಡೆಸೋಣ ಎಂದರು.
ಮುಖಂಡರಾದ ರಾಜಣ್ಣಾ ಕೊರವಿ, ಸಿದ್ರಾಮಣ್ಣ ನಡಕಟ್ಟಿ, ಪ್ರೊ| ಬಿ.ವಿ. ಶಿರೂರು, ತಾರಾದೇವಿ ವಾಲಿ, ಚಿಂತಾಮಣಿ ಸಿಂದಗಿ, ಗೊಂಗಣ ಶೆಟ್ಟರ, ಅಕ್ಕಮ್ಮ ನವಲಗುಂದ, ರಾಜಶೇಖರ ಮೆಣಸಿನಕಾಯಿ, ವಿ.ಎಸ್. ಅಳಗುಂಡಗಿ ಮಾತನಾಡಿದರು. ಪ್ರೊ| ಎಸ್.ವಿ. ಪಟ್ಟಣಶೆಟ್ಟಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.