ಬಿಜೆಪಿಯಿಂದ ಪ್ರಚಾರ ಜಾಸ್ತಿ, ಕೆಲಸ ಕಮ್ಮಿ
Team Udayavani, Aug 13, 2017, 11:59 AM IST
ಧಾರವಾಡ: ಕೇವಲ ಭಾಷಣ ಮಾಡಿ ಜನರನ್ನು ಮರಳು ಮಾಡುವ ಬಿಜೆಪಿಯಿಂದ ಕೆಲಸ ಕಡಿಮೆ ಇದ್ದರೂ ಪ್ರಚಾರ ಜಾಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಇಲ್ಲಿನ ಲಕಮನಹಳ್ಳಿಯಲ್ಲಿ ಶನಿವಾರ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ಬಡಾವಣೆಗೆ ಶ್ರೀ ಸಿದ್ಧರಾಮಯ್ಯ ನಗರ ನಾಮಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ಕೆಲಸ ಜಾಸ್ತಿ, ಪ್ರಚಾರ ಕಡಿಮೆ. ಹೀಗಾಗಿ ನಮ್ಮ ಮುಖಂಡರು ಸಹ ಉತ್ತಮ ಭಾಷಣ ಮಾಡುವುದನ್ನು ಕಲಿಯಬೇಕು ಎಂದರು. ಲಕಮನಹಳ್ಳಿಯಲ್ಲಿ ಹುಡಾದಿಂದ ನಿರ್ಮಾಣಗೊಂಡ ಬಡಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಟ್ಟಿದ್ದು ಸ್ವಾಗತಾರ್ಹ. ಆದರೆ ಈ ಬಡಾವಣೆಗೆ ಶೀಘ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ನಾವೆಲ್ಲ ಶ್ರಮಿಸಬೇಕು. ಅಂದಾಗ ಮಾತ್ರ ಈ ಹೆಸರಿಟ್ಟಿದ್ದು ಸಾರ್ಥಕ.
ಈಗಾಗಲೇ ಶೇ. 50ರಷ್ಟು ಬಡಾವಣೆ ಅಭಿವೃದ್ಧಿಯಾಗಿದೆ. ಉಳಿದ ಕಾರ್ಯಗಳನ್ನು ನಡೆಸುವ ಕುರಿತು ಎಲ್ಲರೂ ಚರ್ಚಿಸಿ ಶ್ರಮಿಸಬೇಕು. ಇದರಿಂದ ಇಲ್ಲಿ ಜನರು ಬಂದು ವಾಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮುಖ್ಯಮಂತ್ರಿ ಅವರ ಹೆಸರಿಟ್ಟಿದ್ದು ವ್ಯರ್ಥವಾಗುತ್ತದೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಈ ಬಡಾವಣೆಯಲ್ಲಿ ಮುಖ್ಯವಾಗಿ ರಸ್ತೆ, ವಿದ್ಯುತ್ ಹಾಗೂ ನೀರಿನ ಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಜನರು ವಾಸಿಸಲು ಪ್ರಾರಂಭಿಸುತ್ತಾರೆ. ನಂತರದಲ್ಲಿ ಕನ್ನಡ ಪ್ರಾಥಮಿಕ ಶಾಲೆ, ಬಸ್ ಸೌಕರ್ಯ ಸೇರಿದಂತೆ ಇತರ ಮೂಲಕ ಸೌಕರ್ಯ ಕಲ್ಪಿಸಿದರೆ ಉತ್ತಮ ಬಡಾವಣೆ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿ, ಜನರಿಗೆ ಟೋಪಿ ಹಾಕುತ್ತಿರುವ ಬಿಜೆಪಿ ಉತ್ತರಕುಮಾರನ ಪಾತ್ರ ಮಾಡುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಮಾತನಾಡಿದರು. ಹುಡಾ ಅಧ್ಯಕ್ಷ ಅನ್ವರ್ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಮನಸೂರು ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಕೆಎಂಫ್ ಅಧ್ಯಕ್ಷ ನೀಲಕಂಠ ಅಸೂಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸಮಲ್ ಜೈನ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಮಾಡಳ್ಳಿ, ಪಾಲಿಕೆ ಸದಸ್ಯರಾದ ಯಾಸೀನ ಹಾವೇರಿಪೇಟ್, ಪ್ರಕಾಶ ಕ್ಯಾರಕಟ್ಟಿ, ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಸದಸ್ಯರಾದ ಪ್ರಭು ಪ್ರಭಾಕರ, ಸರೋಜಾ ಪಾಟೀಲ, ಕಿರಣ ಪಾಟೀಲ, ಸಂದೀಪ ರೋಖಡೆ,
-ಮುಖಂಡರಾದ ಮುತ್ತುರಾಜ ಮಾಕಡವಾಲೆ, ಪಿ.ಎಚ್. ನೀರಲಕೇರಿ, ದೇವರಾಜ ಕಂಬಳಿ, ಸಿ.ಬಿ. ಯಲಿಗಾರ, ವಸಂತ ಅರ್ಕಾಚಾರ, ಆನಂದ ಜಾಧವ, ಹೇಮಂತ ಗುರ್ಲಹೊಸೂರ, ಇರ್ಫಾನ್ ಜಾಹಗೀರದಾರ, ಅಶೋಕ ತುರಾಯಿದಾರ, ಲಿಂಗಯ್ಯ ಹಿರೇಮಠ, ರವಿ ಕಬ್ಬೇರ, ಮುಸ್ತಾಕ ಪಟೇಲ್ ಇತರರಿದ್ದರು. ಪಾಲಿಕೆ ಸದಸ್ಯ ಸುಭಾಷ ಶಿಂಧೆ ಸ್ವಾಗತಿಸಿದರು. ಹುಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ ಪ್ರಾಸ್ತಾವಿಕ ಮಾತನಾಡಿದರು. ಹಜರತಅಲಿ ಗೊರವನಕೊಳ್ಳ ನಿರೂಪಿಸಿದರು. ಮೋಹನ ಹೊಸಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.