ಠಾಣೆ ಮೆಟ್ಟಿಲೇರಿದ ಕುರ್ಚಿ ಕಿತ್ತಾಟ!
Team Udayavani, Jul 14, 2018, 5:27 PM IST
ಹಾವೇರಿ: ನಗರಸಭೆ ಅಧ್ಯಕ್ಷ ಸ್ಥಾನದ ಕುರ್ಚಿಗಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಸದಸ್ಯರ ನಡುವೆ ಕಚ್ಚಾಟ ಶುರುವಾಗಿದ್ದು ಶುಕ್ರವಾರ ಹಂಗಾಮಿ ಅಧ್ಯಕ್ಷ ತಾನು ಎಂದು ಬಿಜೆಪಿಯ ಇರ್ಫಾನ್‌ಖಾನ್ ಪಠಾಣ ಅಧ್ಯಕ್ಷರ ಕುರ್ಚಿಯಲ್ಲಿ ಆಸೀನರಾದರು.
ಬುಧವಾರ ಬಿಜೆಪಿ ಸದಸ್ಯರು ಅವಿಶ್ವಾಸಮಂಡನೆ ನಿರ್ಣಯ ಕೈಗೊಂಡಿದ್ದರು. ಬಳಿಕ ಗುರುವಾರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ತಾವೇ ನಗರಸಭೆ ಅಧ್ಯಕ್ಷೆ; ಬಿಜೆಪಿಯವರು ಮಂಡಿಸಿರುವ ಅವಿಶ್ವಾಸ ಮಂಡನೆ ಸಭೆಯೇ ಅಸಿಂಧು ಎಂದು ಅಧ್ಯಕ್ಷ ಕುರ್ಚಿಯಲ್ಲಿ ಆಸೀನರಾಗಿದ್ದರು. ಶುಕ್ರವಾರ ಮಧ್ಯಾಹ್ನ ದಿಢೀರನೇ ಬಿಜೆಪಿಯವರು ನಿರ್ಣಯ ಕೈಗೊಂಡು ಆಯ್ಕೆಯಾಗಿದ್ದ ಹಂಗಾಮಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ನಗರಸಭೆ ಅಧ್ಯಕ್ಷರ ಕಚೇರಿಗೆ ಬಂದು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಬಂದ ಪಾರ್ವತಮ್ಮ ಹಲಗಣ್ಣನವರ ಕುರ್ಚಿ ಬಿಟ್ಟು ಕೊಡುವಂತೆ ವಾಗ್ವಾದ ನಡೆಸಿದರು.
‘ಇಲ್ಲಿ ನಾನು ಅಧ್ಯಕ್ಷೆಯಾಗಿದ್ದೇನೆ. ಕೋರಂ ಇಲ್ಲದೇ ಮಾಡಿರುವ ಸಭೆ, ತೆಗೆದುಕೊಂಡಿರುವ ತೀರ್ಮಾನ ಯಾವುದೂ ಕಾನೂನಾತ್ಮಕವಾಗಿಲ್ಲ. ನಾನು ಕುಳಿತುಕೊಳ್ಳಬೇಕಾದ ಅಧ್ಯಕ್ಷರ ಕುರ್ಚಿ ಬಿಟ್ಟು ಮೇಲೇಳಿ’ ಎಂದು ಪಾರ್ವತಮ್ಮ ಹಲಗಣ್ಣನವರ ಹೇಳಿದರು. ಇದಕ್ಕೆ ಪಠಾಣ ಉತ್ತರಿಸಿ, ಅವರು ‘ನಾನೇ ಹಂಗಾಮಿ ಅಧ್ಯಕ್ಷ’ ಎಂದು ಕುರ್ಚಿ ಬಿಟ್ಟು ಮೇಲೇಳಲಿಲ್ಲ. ಕೊನೆಗೆ ಈ ವಿಷಯವನ್ನು ಜಿಲ್ಲಾಧಿ ಕಾರಿ ಗಮನಕ್ಕೆ ತರುವುದಾಗಿ ಪಾರ್ವತಮ್ಮ ಹಲಗಣ್ಣನವರ ಕಚೇರಿಯಿಂದ ಹೊರನಡೆದರು. ಇವರ ಈ ಕಿತ್ತಾಟದಿಂದಾಗಿ ಜನರಿಗೆ ನಗರಸಭೆಯ ಅಧಿಕೃತ ಅಧ್ಯಕ್ಷರು ಯಾರು ಎಂಬುದು ತಿಳಿಯದಂತಾಗಿದೆ. ನಗರಸಭೆ ಕಾನೂನಿನ ಪ್ರಕಾರ ನಗರಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳಿಗೆ ಜಿಲ್ಲಾಧಿಕಾರಿಯವರ ಅಂಕಿತ ಬಿದ್ದ ನಂತರವೇ ಅದು ಅಧಿಕೃತಗೊಳ್ಳುತ್ತದೆ. ಜಿಲ್ಲಾಧಿಕಾರಿಯವರು ಈವರೆಗೂ ಅವಿಶ್ವಾಸ ನಿರ್ಣಯದ ಬಗ್ಗೆ ಅಂಕಿತ ಹಾಕದೆ ಇರುವುದರಿಂದ ಅಧ್ಯಕ್ಷರ ಕುರ್ಚಿಗಾಗಿ ಈಗ ಕಿತ್ತಾಟ ನಡೆದಿದೆ.
ತಾರಕಕ್ಕೇರಿದ ಕಿತ್ತಾಟ
ಅಧ್ಯಕ್ಷ ಕುರ್ಚಿ ಕಚ್ಚಾಟ ಶುಕ್ರವಾರ ಸಂಜೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಾರ್ವತಮ್ಮ ಹಲಗಣ್ಣನವರ ನಾನು ಕಚೇರಿಗೆ ಹೋದಾಗ ಇರ್ಫಾನ್‌ಖಾನ್ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ಇದ್ದನ್ನು ಪ್ರಶ್ನಿಸಿದಾಗ ತಮ್ಮ ಸೊಂಟಕ್ಕೆ ಕೈ ಹಾಕಿ ದೂಡಿ ಅವಮಾನ ಮಾಡಿದ್ದಾರೆ. ಸದಸ್ಯ ನಿರಂಜನ ಹೇರೂರು ಹಾಗೂ ಲಲಿತಾ ಗುಂಡೇನಹಳ್ಳಿ ನಗರಸಭೆಯಲ್ಲಿ ಕೆಲಸ ಮಾಡಬಾರದು. ಇತ್ತ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರ್ಫಾನ್‌ಖಾನ್ ಪಾರ್ವತಮ್ಮನವರು ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಯಿಂದ ಹೊರಹೋಗದಿದ್ದರೆ ಹೆಣ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಹಿಳಾ ಸದಸ್ಯೆಗೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದು, ಅಧ್ಯಕ್ಷ ಕುರ್ಚಿ ಕಚ್ಚಾಟ ಅತಿರೇಕಕ್ಕೆ ತಿರುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.