ಕುಂದಗೋಳದ ಅಭಿವೃದ್ಧಿ ಕಾಂಗ್ರೆಸ್‌ನಿಂದಷ್ಟೇ ಸಾಧ್ಯ
Team Udayavani, May 13, 2019, 11:34 AM IST
ಹುಬ್ಬಳ್ಳಿ: ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕ್ಷೇತ್ರದ ಜನತೆ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಲು ನಿಶ್ಚಯಿಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷಎಚ್.ಕೆ. ಪಾಟೀಲ ಹೇಳಿದರು.
ಪಶುಪತಿಹಾಳದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಮಾಡಿದ ರಕ್ತ ರಹಿತ ಮೌನಕ್ರಾಂತಿಯನ್ನು ಶಿವಳ್ಳಿ ತಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ಬಡವರ ಹಾಗೂ ಸಾಮಾನ್ಯ ಜನರ ಶಾಸಕರಾಗಿ ಆಡಳಿತ ಮಾಡಿದ್ದಾರೆ. ಕ್ಷೇತ್ರದ ಜನತೆಯ ಸಣ್ಣ ಸಮಸ್ಯೆಗೂ ಸ್ಪಂದಿಸಿದ್ದಾರೆ. ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರಿಂದ ಜನರು ಅವರ ಋಣ ತೀರಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಪಣ ತೊಟ್ಟಿದ್ದಾರೆ ಎಂದರು.
ನ್ಯಾಯ ಯೋಜನೆ: ರಾಹುಲ್ ಗಾಂಧಿಯವರು ನ್ಯಾಯ ಯೋಜನೆ ಮೂಲಕ ಬಡತನಕ್ಕಿಂತ ಕೆಳಗಿನ ರೇಖೆಯೊಳಗಿರುವ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಿದ್ದಾರೆ. ಇಂತಹ ಯೋಜನೆಯನ್ನು ಬಿಜೆಪಿಯರು ಟೀಕೆ ಮಾಡುವ ಮೂಲಕ ಬಡ ಕುಟುಂಬಗಳನ್ನು ಅಗೌರವಿಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ 8 ಸಾವಿರ ಕೋಟಿ ರೂ. ಹಾಗೂ ಇಂದಿನ ಮೈತ್ರಿ ಸರಕಾರ 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಇಂತಹ ಒಂದಾದರೂ ಯೋಜನೆ ಬಿಜೆಪಿಯವರು ತಮ್ಮ ಅವಧಿಯಲ್ಲಿ ಜನಸಾಮಾನ್ಯರಿಗೆ ನೀಡಿದ್ದಾರೆಯೇ ಎಂಬುದವುದರ ಕುರಿತು ಜನರು ಯೋಚಿಸಬೇಕು ಎಂದು ಹೇಳಿದರು. ಬಸವರಾಜ ಮಳೀಮಠ, ಎ.ಬಿ. ಗಣೇಶ ಇನ್ನಿತರರಿದ್ದರು.
ಮುಖಂಡರೊಂದಿಗೆ ಸಭೆ
ಹುಬ್ಬಳ್ಳಿ: ಕುಂದಗೋಳ ಚುನಾವಣೆಗೆ ಸಂಬಂಧಿಸಿ ಅಲ್ಪಸಂಖ್ಯಾತ ಹಾಗೂ ಇನ್ನಿತರೆ ಸಮುದಾಯದ ಮುಖಂಡರು ಹಾಗೂ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮುಖಂಡರೊಂದಿಗೆ ಸಚಿವ ಜಮೀರಅಹ್ಮದ್ ಖಾನ್ ಮಾತುಕತೆ ನಡೆಸಿದರು. ಗೋಕುಲ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಕುಂದಗೋಳ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಹಜರತ್‌ಅಲಿ ಜೋಡಮನಿ, ನದಾಫ, ಕುತಬುದ್ದೀನ ಬೆಳಗಲಿ ಅವರನ್ನು ಕರೆಯಿಸಿ ಮಾತುಕತೆ ನಡೆಸಿದರು. ಸಮಾಜದಲ್ಲಿನ ಮತಗಳು ಹಂಚಿಕೆಯಾಗಿ ಹೋದರೆ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗುತ್ತದೆ. ಸಮಾಜದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರು ಪರವಾಗಿಲ್ಲ. ಆದರೆ ಮತಗಳು ಹರಿದು ಹಂಚಿಕೆ ಆಗದಂತೆ ನೋಡಿಕೊಳ್ಳಬೇಕು. ಸಮಾಜದ ಮತದಾರರಿಗೆ ಮನವರಿಕೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಮತಗಳನ್ನು ಹಾಕಿಸಿ. ಬಹುಮತದಿಂದ ಆರಿಸಿ ತನ್ನಿ ಎಂದು ಸೂಚಿಸಿದರು ಎನ್ನಲಾಗಿದೆ.
ಬಿಜೆಪಿಯಿಂದ ಗೊಂದಲ ಸೃಷ್ಟಿ
ಹುಬ್ಬಳ್ಳಿ: ಮೈತ್ರಿ ಅಭ್ಯರ್ಥಿ ಕುಸುಮಾವತಿ ಗೆಲ್ಲುವುದು ಖಚಿತ. ಶಾಸಕರಾಗಿ ಉತ್ತಮ ಆಡಳಿತದ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ಪಶುಪತಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮೈತ್ರಿ ಅಭ್ಯರ್ಥಿ ವಿರುದ್ಧ ಮಾತನಾಡುವುದಕ್ಕೆ ಯಾವುದೇ ಅಂಶಗಳಿಲ್ಲ. ಹೀಗಾಗಿ ಕುಸುಮಾವತಿ ಗೆದ್ದರೆ, ಕುಂದಗೋಳದಲ್ಲಿ ಐವರು ಶಾಸಕರಾಗುತ್ತಾರೆ ಎನ್ನುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕುಸುಮಾವತಿ ಶಾಸಕರಾದರೆ ಇಡೀ ಕ್ಷೇತ್ರದ ಬಡವರು ಶಾಸಕರಾಗುತ್ತಾರೆ. ಕ್ಷೇತ್ರದಲ್ಲಿ ಯಾವುದೇ ದುರಾಡಳಿತಕ್ಕೆ ಆಸ್ಪದ ಕೊಡುವುದಿಲ್ಲ. ಈ ಬಗ್ಗೆ ಜನರು ಆತಂಕಪಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿ.ಎಸ್. ಶಿವಳ್ಳಿ ಅವನ್ನು ಸಚಿವರನ್ನಾಗಿ ಮಾಡದಿದ್ದರೂ ಪಕ್ಷಬಿಡುತ್ತಿರಲಿಲ್ಲ. ಜನರಲ್ಲಿ ಗೊಂದಲ ಮೂಡಿಸುವುದೇ ಬಿಜೆಪಿ ನಾಯಕರ ಕೆಲಸ. ಮೈತ್ರಿ ಸರಕಾರದಲ್ಲಿ ಒಬ್ಬ ಸಚಿವರನ್ನು ಕೈಬಿಟ್ಟು ಅವರಿಗೆ ಸಚಿವ ಸ್ಥಾನ ನೀಡಲಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.