ಕೋವಿಡ್ ನೆರಳಲ್ಲಿ ಸಾಂಕ್ರಾಮಿಕಗಳ ಕಾಟ
Team Udayavani, Jun 30, 2021, 2:12 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಜಿಲ್ಲೆಯಲ್ಲಿ ಕೋವಿಡ್-19ನ ಎರಡನೇ ಅಲೆ ಅಬ್ಬರ ಕೊಂಚ ಇಳಿಮುಖವಾಗಿರುವ ಬೆನ್ನಲ್ಲೇ ಮಳೆಗಾಲದಲ್ಲಿ ಜನರನ್ನು ತೀವ್ರ ಪೀಡಿಸುತ್ತಿದ್ದ ಸಾಂಕ್ರಾಮಿಕ ರೋಗಗಳು ತೆರೆಮರೆಯಲ್ಲೇ ಹಾವಳಿ ನಡೆಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಾಂಕ್ರಾಮಿಕಗಳ ಪ್ರಭಾವ ಕಡಿಮೆಯಾಗಿದ್ದರೂ ಕೊರೊನಾ ಅಲೆಯಲ್ಲಿಯೇ ಒಂದಿಷ್ಟು ಪ್ರಕರಣಗಳು ಲೆಕ್ಕಕ್ಕೆ ಸಿಕ್ಕದಂತಾಗಿವೆ.
ಪ್ರಸಕ್ತ ವರ್ಷದ ಆರಂಭದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಪತ್ತೆಯಾಗಿದ್ದವು. ಬಳಿಕ ಬೇಸಿಗೆಯಲ್ಲಿ ಅಷ್ಟೊಂದು ಹಾವಳಿ ಇರಲಿಲ್ಲ. ಸದ್ಯ ಜ.1 ರಿಂದ 29ರವರೆಗೆಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕೀಟಜನ್ಯಸಾಂಕ್ರಾಮಿಕ ರೋಗಗಳ ಹಾವಳಿಕಡಿಮೆ ಆಗಿದೆ. 2019ರಲ್ಲಿ 250 ಜನರಲ್ಲಿಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾಹಾಗೂ 2020ರಲ್ಲಿ 36 ಜನರಲ್ಲಿ ಡೆಂಘೀ, 17 ಜನರಲ್ಲಿ ಚಿಕೂನ್‌ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಈವರ್ಷದ ಆರು ತಿಂಗಳಲ್ಲಿ 29 ಜನರಲ್ಲಿ ಡೆಂಘೀ, 5 ಜನರಲ್ಲಿ ಚಿಕೂನ್‌ಗುನ್ಯಾ, ಒಬ್ಬರಲ್ಲಿ ಮೆದುಳು ಜ್ವರ ಪತ್ತೆಯಾಗಿದೆ.
ಡೆಂಘೀ ಇಳಿಯಿತೆ?: 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ಪೈಕಿ ಕೊರೊನಾ ಲಾಕ್ ಡೌನ್ ಸಮಯದಲ್ಲಿಯೇ 2020ರಲ್ಲಿ ಡೆಂಘೀಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಸದ್ಯ ಈ ವರ್ಷದಆರು ತಿಂಗಳಲ್ಲಿ 29 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 8, ಕುಂದಗೋಳದಲ್ಲಿ 7, ನವಲಗುಂದದಲ್ಲಿ 2, ಧಾರವಾಡದಶಹರದಲ್ಲಿ 6 ಹಾಗೂ ಹುಬ್ಬಳ್ಳಿಯಶಹರದಲ್ಲಿ 6 ಜನರಲ್ಲಿ ಡೆಂಘೀ ಖಚಿತವಾಗಿದೆ.
2015ರಲ್ಲಿ 17, 2016 ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿಚಿಕೂನ್‌ಗುನ್ಯಾ ಕಾಣಿಸಿಕೊಂಡಿತ್ತು.ಈ ವರ್ಷ 5 ಜನರಲ್ಲಿ ಅಷ್ಟೇ ಚಿಕೂನ್‌ಗುನ್ಯಾ ದೃಢಪಟ್ಟಿದೆ. ಈ ಪೈಕಿ ಧಾರವಾಡಗ್ರಾಮೀಣದಲ್ಲಿ ಇಬ್ಬರು, ಹುಬ್ಬಳ್ಳಿಗ್ರಾಮೀಣ, ಕಲಘಟಗಿ ಹಾಗೂಹುಬ್ಬಳ್ಳಿ ಶಹರದಲ್ಲಿ ತಲಾ ಒಬ್ಬರಲ್ಲಿಅಷ್ಟೇ ಪತ್ತೆಯಾಗಿದೆ. ಮೆದುಳು ಜ್ವರವು 2016, 2017, 2019, 2020 ರಲ್ಲಿ ಕಂಡುಬಂದಿಲ್ಲ. ಆದರೆ ಈವರ್ಷ ಮೆದುಳು ಜ್ವರದ ಲಕ್ಷಣಗಳುಕಂಡುಬಂದ 10 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬರಲ್ಲಿ ದೃಢಪಟ್ಟಿದೆ.
ಗುಣಲಕ್ಷಣ ಸಾಮ್ಯತೆ : ಕೊರೊನಾ 2ನೇ ಅಲೆ ಹೊಡೆತದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಮೇಲ್ನೋಟಕ್ಕೆ ತಗ್ಗಿದಂತೆ ಕಂಡುಬಂದರೂ ಸದ್ದಿಲ್ಲದೇ ಹೊಡೆತ ನೀಡಿವೆ. ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾದ ಕೆಲ ಗುಣಲಕ್ಷಣಗಳು ಮತ್ತು ಕೊರೊನಾ ಗುಣಲಕ್ಷಣಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಜ್ವರ, ಮೈ-ಕೈ ನೋವುಸೇರಿದಂತೆ ಇನ್ನಿತರ ಗುಣಲಕ್ಷಣಗಳು ಕಂಡು ಬಂದಾಗ ಕೋವಿಡ್ ಆತಂಕದಿಂದ ಪರೀಕ್ಷೆಗೆ ಹಿಂದೇಟು ಹಾಕುವಂತಾಗಿದೆ. ಇದಲ್ಲದೇ ಕೆಲವರು ಈ ಗುಣಲಕ್ಷಣ ಬಂದಾಗ ಕೋವಿಡ್ ತಪಾಸಣೆ ಮಾಡಿ, ನೆಗೆಟಿವ್ ಬಂದಾಕ್ಷಣ ಅಷ್ಟಕ್ಕೆ ಸುಮ್ಮನಾಗಿ ಬಿಡುತ್ತಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪತ್ತೆಗೆ ಹಿನ್ನಡೆ ಆಗಿದ್ದು, ಆರೋಗ್ಯ ಇಲಾಖೆ ನಿರ್ಲಕ್ಷéದಿಂದಲೂ ಸಾಂಕ್ರಾಮಿಕ ರೋಗಗಳ ಅಂಕಿ-ಅಂಶಗಳಲ್ಲಿ ಇಳಿಕೆ ಕಾಣುತ್ತಿದೆ ಎನ್ನಲಾಗಿದೆ.
ಮೂರು ವರ್ಷದಿಂದ ಶೂನ್ಯ ಸಾಧನೆ : ಜಿಲ್ಲೆಯಲ್ಲಿ 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ನೆರೆ ರಾಜ್ಯಗಳಿಂದ ಜಿಲ್ಲೆಗೆಆಗಮಿಸಿದವರಲ್ಲಿ 2019ರಲ್ಲಿ 17, 2020ರಲ್ಲಿ 8 ಹಾಗೂ2021ರಲ್ಲಿ ಒಬ್ಬರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ 2019ರಿಂದಜಿಲ್ಲೆಯಲ್ಲಿ ಮಲೇರಿಯಾ ಶೂನ್ಯ ಸಾಧನೆಯಾಗಿದ್ದು, ಸತತವಾಗಿಕಳೆದ ಮೂರು ವರ್ಷಗಳಿಂದ ಮಲೇರಿಯಾ ಮುಕ್ತ ಜಿಲ್ಲೆಯಾಗಿ ಧಾರವಾಡ ಹೊರ ಹೊಮ್ಮಿದೆ.
ಮಕ್ಕಳಲ್ಲಿಯೇ ಹೆಚ್ಚಿದ ಡೆಂಘೀ! : ಕೋವಿಡ್‌ನ 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕದ ಮಧ್ಯೆ ಜಿಲ್ಲೆಯಲ್ಲಿ ಜ್ವರ, ಹೊಟ್ಟೆನೋವಿನಂತಹ ಲಕ್ಷಣಗಳಿಂದ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಇದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಧಾರವಾಡ ಮಾತ್ರವಲ್ಲ, ಪಕ್ಕದ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿಮತ್ತು ಹಾವೇರಿ ಜಿಲ್ಲೆಯಲ್ಲಿಯೂ ಮಕ್ಕಳಲ್ಲಿ ಡೆಂಘೀ ಜ್ವರ ಹೆಚ್ಚಾಗಿಕಂಡುಬರುತ್ತಿದೆ. ಆದರೆ ಒಂದು ವಾರದಲ್ಲಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ಲಭಿಸಿದರೆ ಕೂಡಲೇ ಗುಣಮುಖರಾಗಿ ಆಸ್ಪತ್ರೆಯಿಂದ ಮರಳುತ್ತಿದ್ದಾರೆ.
ಹೈಟೆಕ್ ಸೊಳ್ಳೆ ಪರದೆ ಪರಿಚಯ! : ಕೀಟಜನ್ಯ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಕೀಟನಾಶಕ ಅಂತರ್ಗತ ಸೊಳ್ಳೆ ಪರದೆಪರಿಚಯಿಸಿದೆ. ಈ ಪರದೆಗೆ ಬಳಸಿರುವ ದಾರದಲ್ಲಿಯೇ ಕೀಟಜನ್ಯಗಳನ್ನು ನಾಶಮಾಡುವ, ದೂರವಿಡುವ ಔಷಧಿ ಗುಣವಿದೆ. ಈ ಸೊಳ್ಳೆ ಪರದೆಗಳು ಜಿಲ್ಲೆಗೆ 1800 ಬಂದಿದ್ದು, ಈಗಾಗಲೇ 982ವಿತರಿಸಲಾಗಿದೆ. ಧಾರವಾಡ ತಾಲೂಕಿನಮಂಡಿಹಾಳ ಹಾಗೂ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿಪ್ರತಿ ಮನೆಗೆ ಈ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಉಳಿದಿರುವ ಹೈಟೆಕ್ ಸೊಳ್ಳೆ ಪರದೆಗಳನ್ನು ಹೊರ ರಾಜ್ಯಗಳಿಂದ ವಲಸೆ ಬಂದವರಿಗೆನೀಡಲಾಗುತ್ತಿದೆ. ಹುಬ್ಬಳ್ಳಿಯ ಗೋಕುಲ್‌ರಸ್ತೆಯ ಕೈಗಾರಿಕಾ ಪ್ರದೇಶ, ಧಾರವಾಡದಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿನಅನ್ಯ ರಾಜ್ಯ ವಲಸಿಗರಿಗೆ ಹಾಗೂ ನವಲಗುಂದ ತಾಲೂಕಿನ ಕಾಲುವೆ ಕೆಲಸಕ್ಕೆಬಂದಿರುವ ಅನ್ಯ ರಾಜ್ಯ ಹಾಗೂ ಅಂತರಜಿಲ್ಲೆಯ ಕಾರ್ಮಿಕರಿಗೆ ಈ ಹೈಟೆಕ್ ಸೊಳ್ಳೆಪರದೆ ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪಶ್ಚಿಮಘಟ್ಟದ ಸೆರೆಗು ಹೊಂದಿರುವ ಜಿಲ್ಲೆಯ ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಮಂಗಗಳ ಉಣ್ಣೆಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆ ನೆಗೆಟಿವ್ ಬಂದಿರುವ ಕಾರಣ ಕ್ಯಾಸನೂರು ಅರಣ್ಯ ಕಾಯಿಲೆಯ(ಮಂಗನ ಕಾಯಿಲೆ) ಆತಂಕವಿಲ್ಲ. ಇದಲ್ಲದೇ ಫೈಲೇರಿಯಾ(ಆನೆಕಾಲು) ರೋಗವೂ ಕಂಡು ಬಂದಿಲ್ಲ. –ಡಾ| ಟಿ.ಪಿ. ಮಂಜುನಾಥ, ಜಿಲ್ಲಾ ಕೀಟಶಾಸ್ತ್ರಜ್ಞ
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.