ಧಾರವಾಡದ ಮಣ್ಣಿನಲ್ಲಿದೆ ಕಲೆಯ ಸತ್ವ: ಕುಂಬಿ

ಸರ್ವ ಮಂಗಳ ವಾದ್ಯಗಳಲ್ಲಿ ಶಹನಾಯಿ ವಾದ್ಯವು ಅಗ್ರಸ್ಥಾನ ಪಡೆಯುತ್ತದೆ.

Team Udayavani, Oct 25, 2021, 8:57 PM IST

ಧಾರವಾಡದ ಮಣ್ಣಿನಲ್ಲಿದೆ ಕಲೆಯ ಸತ್ವ: ಕುಂಬಿ

ಧಾರವಾಡ: ಇಲ್ಲಿನ ಮಣ್ಣಿನಲ್ಲಿಯೇ ಸಂಗೀತ, ಸಾಹಿತ್ಯ ಹಾಗೂ ಕಲೆಯ ಸತ್ವ ಅಡಗಿದೆ ಎಂದು ಹಿರಿಯ ಪರಿಸರವಾದಿ ಶಂಕರ ಕುಂಬಿ ಹೇಳಿದರು. ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುತ್ಛಯದಲ್ಲಿ ಕಸ್ತೂರಿ ಕನ್ನಡ ಜಾನಪದ ಕಲಾ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧಾರವಾಡದಲ್ಲಿ ಕಲಾ ಪ್ರದರ್ಶನ ಮಾಡಿದರೆ ಜೀವನ ಸಾರ್ಥಕವಾಗುವುದು ಎಂಬ ಭಾವ ರಾಷ್ಟ್ರ-ಅಂತಾರಾಷ್ಟ್ರೀಯ ಕಲಾವಿದರ ಮನದಲ್ಲಿ ಅಭಿವ್ಯಕ್ತವಾಗುತ್ತದೆ. ಅನ್ನುವಷ್ಟರ ಮಟ್ಟಿಗೆ ಸಂಗೀತ ಪರಂಪರೆಯಲ್ಲಿ ಧಾರವಾಡ ಜಿಲ್ಲೆ ತನ್ನದೇ ಆದ ಮೇಲ್ಪಂಕ್ತಿಯ ಸ್ಥಾನ ಹೊಂದಿದೆ.

ಧಾರವಾಡದ ಮನೆ ಮನೆಗಳಲ್ಲೂ ಸಂಗೀತ ಹಾಗೂ ಕಲೆಯ ಪರಿಮಳ ಪಸರಿಸುತ್ತಿರುವುದು ಹೆಮ್ಮಯ ಸಂಗತಿ ಎಂದರು. ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ ಮಾತನಾಡಿ, ಸರ್ವ ಮಂಗಳ ವಾದ್ಯಗಳಲ್ಲಿ ಶಹನಾಯಿ ವಾದ್ಯವು ಅಗ್ರಸ್ಥಾನ ಪಡೆಯುತ್ತದೆ.

ಈ ಶಹನಾಯಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಭಜಂತ್ರಿ ಪರಿವಾರದವರ ಕೊಡುಗೆ ಅನನ್ಯವಾದುದು. ನಾವಿಂದು ಇಂತಹ ವಿಶಿಷ್ಟ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು. ಗಾಯಕ ಬಸವರಾಜ ಹೂಗಾರ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಂಜೀವ ದುಮ್ಮಕನಾಳ, ಕನ್ನಡ ಕಸ್ತೂರಿ ಜಾನಪದ ಕಲಾತಂಡದ ಅಧ್ಯಕ್ಷೆ ಮಾಹಾದೇವಿ ಅಮರಣ್ಣವರ, ಉದಯೋನ್ಮುಖ ಶಹನಾಯಿ ಕಲಾವಿದ ಶ್ರೀಧರ ಭಜಂತ್ರಿ ಇದ್ದರು. ಕಲಾಪೋಷಕರಾದ ಶಂಕರ ಕುಂಬಿ, ಪ್ರಕಾಶ ಬಾಳಿಕಾಯಿ, ಸಂಜೀವ ದುಮ್ಮಕನಾಳ, ಬಸವರಾಜ ಹೂಗಾರ ಅವರನ್ನು ಸನ್ಮಾನಿಸಲಾಯಿತು. ವೈಷ್ಣವಿ ದೇಶಪಾಂಡೆ ನಿರೂಪಿಸಿದರು. ಶ್ರೀಧರ ಭಜಂತ್ರಿ ಸ್ವಾಗತಿಸಿದರು. ಕೀರ್ತಿ ಪೂಜಾರಿ ವಂದಿಸಿದರು.

ನಂತರ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಶ್ರೀಧರ ಭಜಂತ್ರಿಯವರ ಶಹನಾಯಿ ವಾದನ, ಪ್ರಿಯಾಂಕಾ ಭಜಂತ್ರಿ ಅವರ ಸುಗಮ ಸಂಗೀತ, ವನಿತಾ ಕೆ. ಅವರ ಜಾನಪದ ಸಂಗೀತ, ಮಂಜುನಾಥ ಭಜಂತ್ರಿಯವರ ಕ್ಲಾರಿಯೋನೆಟ್‌ ವಾದನಕ್ಕೆ ತಬಲಾದಲ್ಲಿ ಮಣಿಕಂಠ ಸುಣಗಾರ, ರಾಹುಲ್‌ ಪಾಟೀಲ, ವಿಠuಲ ಭಜಂತ್ರಿ ಮತ್ತು ಸಹ ಶಹನಾಯಿ ವಾದನದಲ್ಲಿ ಕಿರಣ ಕಮ್ಮಾರ ಸಾಥ್‌ ನೀಡಿದರು. ಮಲೆಮಲ್ಲೇಶ ಹೂಗಾರ, ವಿನಾಯಕ ಇನಾಂದಾರ, ಸತೀಶ್‌ ಪಾಟೀಲ ದೇವೇಂದ್ರ ಭಜಂತ್ರಿ, ವಿನಿತ್‌, ಅಕ್ಷತಾ, ದೀಪಾ ಅಮರಣ್ಣವರ, ವಿಜಯಲಕ್ಷ್ಮೀ, ಪ್ರೇಮಾ ಭಜಂತ್ರಿ ಇದ್ದರು.

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯತ್ನಾಳ್‌

Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್‌ ಆರೋಪ

Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ

Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ

BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ

BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ

BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್‌ ನಿರ್ಧಾರ: ಅರವಿಂದ ಬೆಲ್ಲದ

BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್‌ ನಿರ್ಧಾರ: ಅರವಿಂದ ಬೆಲ್ಲದ

Hubli: ಮೀಟರ್‌ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ

Hubli: ಮೀಟರ್‌ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.