ಅಂಗವಿಕಲರಿಗೆ ಸೌಲಭ್ಯ ನೀಡುವಲ್ಲಿ ಸರಕಾರ ನಿರ್ಲಕ್ಷ್ಯ
Team Udayavani, Jul 24, 2017, 12:21 PM IST
ಹುಬ್ಬಳ್ಳಿ: ರಾಜ್ಯದಲ್ಲಿ ಅಂಗವಿಕಲರಿಗೆ ಹಲವು ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ರಾಜ್ಯ ಸರಕಾರ ಸ್ಪಂದಿಸದಿರುವುದು ಖೇದಕರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರವಿವಾರ ಧಾರವಾಡದಲ್ಲಿ ಆಯೋಜಿಸಿದ್ದ ಕುಮಾರಪಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿನ ಕೋರ್ಟ್ ವೃತ್ತದ ಸಾಯಿಬಾಬಾ ಮಂದಿರದಿಂದ 30ಕ್ಕೂ ಹೆಚ್ಚು ಅಂಗವಿಕಲರೊಂದಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಗವಿಕಲರಿಗೆ ಮುಖ್ಯವಾಗಿ ಉದ್ಯೋಗ, ಪಡಿತರ ಚೀಟಿ, ಮನೆ ಇನ್ನಿತರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಅಂಗವಿಕಲರಲ್ಲಿ ಉತ್ತಮ ಶಿಕ್ಷಣ ಪಡೆದವರಿದ್ದರೂ ಉದ್ಯೋಗ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದರು.
ತಾವು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅಂಗವಿಕಲರಿಗಾಗಿ ಸಾವಿರ ಹುದ್ದೆಗಳನ್ನು ಸೃಷ್ಟಿಸಿ ಅವಕಾಶ ಕಲ್ಪಿಸಿದ್ದಾಗಿ ತಿಳಿಸಿದರಲ್ಲದೆ, ಮುಖ್ಯಮಂತ್ರಿ ಕಚೇರಿಯಲ್ಲೇ ಅಂಗವಿಕಲ ಮಹಿಳೆಯೊಬ್ಬರಿಗೆ ಉದ್ಯೋಗ ನೀಡಿದ್ದೆ. ಆ ಮಹಿಳೆ ಇದೀಗ ಅಂಗವಿಕಲ ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾಳೆ.
ಇದು ಮಾನವೀಯತೆಗೆ ಹಿಡಿದ ಕೈಗನ್ನಡಿ ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಂಗವಿಕಲರ ಶಿಕ್ಷಣಕ್ಕೆ ಸರಕಾರದಿಂದಲೇ ಎಲ್ಲ ವೆಚ್ಚ ಭರಿಸುವ, ಉದ್ಯೋಗ, ವಸತಿ ಇನ್ನಿತರ ಸೌಲಭ್ಯ ಕಲ್ಪಿಸಲಿದ್ದು, ಪಕ್ಷದಿಂದ ಒಬ್ಬ ಅಂಗವಿಕಲ ಅಭ್ಯರ್ಥಿಯನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗುವುದು ಎಂದರು.
50 ಜನರಿಗೆ ಟಿಕೆಟ್: ಕುಮಾರಸ್ವಾಮಿ ಹುಬ್ಬಳ್ಳಿಯಿಂದ ಧಾರವಾಡ ಜೆಎಸ್ಸೆಸ್ ವರೆಗೆ ವಾಕರಸಾ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು. ಬಸ್‌ನಲ್ಲಿ ಒಟ್ಟು 65 ಪ್ರಯಾಣಿಕರಿದ್ದು ಅವರಲ್ಲಿ 15 ಜನರ ಬಳಿ ಪಾಸ್‌ಗಳು ಇದ್ದು, ಇನ್ನುಳಿದ 50 ಜನರ ಟಿಕೆಟ್‌ನ್ನು ಒಬ್ಬರಿಗೆ 18ರೂ.ನಂತೆ ಒಟ್ಟು 1,000ರೂ. ನೀಡಿ ಪಡೆದರು.
ಜೆಡಿಎಸ್ ಮುಖಂಡರಾದ ಬಸವರಾಜ ಹೊರಟ್ಟಿ, ಎನ್.ಎಚ್. ಕೋನರಡ್ಡಿ, ಹನುಮಂತಪ್ಪ ಅಲ್ಕೋಡ, ರಾಜಣ್ಣ ಕೊರವಿ, ಫಮೀದಾ ಕಿಲ್ಲೆದಾರ, ಸಂತೋಷ ಹಿರೇಕೆರೂರ, ವಿಜಯ ಅಳಗುಂಡಗಿ, ಶ್ರೀಕಾಂತ ಮಗಜಿಕೊಂಡಿ, ಅಂಗವಿಕಲರಾದ ರಮಾಂಜನಿ, ರೇಣುಕಾ ಗಡ್ಡೇನವರ, ಮಲ್ಲಮ್ಮ ಗಡಿಯವರ, ರಾಯಪ್ಪ ಅರಕೇರಿ, ತಬಸುಮ್ ಶೇಖ್, ವಿಠಲ ಕೆಲಗೇರಿ, ಶಕುಂತಲಾ ಪೂಜಾರಿ, ವಿಜಯಲಕ್ಷ್ಮೀ, ಗೀತಾ ಬಡಿಗೇರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.