ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಸರಕಾರದ ಗುರಿ
Team Udayavani, Feb 28, 2017, 3:09 PM IST
ಹುಬ್ಬಳ್ಳಿ: ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಸರಕಾರದ ಗುರಿಯಾಗಿದೆ. ಸೂರಿಲ್ಲದವರಿಗೆ ಈಗಾಗಲೇ ಸುಮಾರು 12 ಲಕ್ಷ ಮನೆ ನಿರ್ಮಿಸಲಾಗಿದೆ. ಇನ್ನು 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಹೇಳಿದರು. ಇಲ್ಲಿನ ವಿದ್ಯಾನಗರದ ಮಹಿಳಾ ವಿದ್ಯಾಪೀಠ ಎದುರಿನ ರಾಯ್ಕರ ಮೈದಾನದಲ್ಲಿ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರ ವಸತಿ ಹೀನರಿಗೆ ವಸತಿ ಅಲ್ಲದೆ, ಸಾಮಾಜಿಕ ಆರ್ಥಿಕ ಜಾತಿ ಸೆನ್ ಸೆಕ್Ò ಸಮೀಕ್ಷೆ (ಸೊಸಿಯೋ ಎಕಾನಾಮಿಕ್ ಕಾಸ್ಟ್ ಸರ್ವೇ) ಮಾಡಲಾಯಿತು. ಬಡವರ ನಿವೇಶನಕ್ಕಾಗಿ 10,500 ಕೋಟಿ ರೂ. ಖರ್ಚು ಮಾಡಿದೆ. ಈ ವರ್ಷ 3 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಕೊಳಗೇರಿ ನಿವಾಸಿಗಳಿಗೆ 45 ಸಾವಿರ ಮನೆ ನೀಡಲಾಗಿದೆ. ಈ ವರ್ಷ ಇನ್ನು 45 ಸಾವಿರ ಮನೆ ನೀಡಲಾಗುವುದು.
ಗೃಹ ಮಂಡಳಿಯಿಂದ 25ಸಾವಿರ ನಿವೇಶನ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ30/40 ಅಡಿ ಅಳತೆಯ ನಿವೇಶನ ನೀಡುವ ಯೋಜನೆ ಇದೆ. ನಗರ ಪ್ರದೇಶಗಳಲ್ಲಿ ಜಿ+3 ಮಾದರಿಯಲ್ಲಿ ವಸತಿ ಸಮುತ್ಛಯ ನಿರ್ಮಿಸಿ ಹಂಚಿಕೆ ಮಾಡಲಾಗುವುದು. ಒಟ್ಟಾರೆ ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದರು. ಆಶ್ರಯ, ವಾಂಬೆ, ಹುಡ್ಕೊàದಿಂದ ಸಾಲ ಪಡೆದವರ 25 ಸಾವಿರ ಕೋಟಿ ರೂ. ಮನ್ನಾ ಮಾಡಲಾಗಿದೆ.
ಸಾಲಋಣ ಮುಕ್ತರಾದವರಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹಕ್ಕುಪತ್ರವಲ್ಲದೆ ಕ್ರಯಪತ್ರ ಕೊಡಲಾಗುತ್ತಿದೆ. ಪ್ಲಾಟ್ ಇದ್ದವರಿಗೆ ಮನೆ ಕಟ್ಟಲು ಸಾಲ ವ್ಯವಸ್ಥೆ ಮಾಡಲಾಗುವುದು. ವಸತಿ ರಹಿತರಿಗೆ ನಿವೇಶನ, ಮನೆ ಸಿಗಲೇಬೇಕು. ಸರಕಾರಿ ಜಮೀನು ಲಭ್ಯವಿಲ್ಲದೆಡೆ ಖಾಸಗಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ಕೆಲಸ ಮಾಡೋದರಲ್ಲಿ ಮುಂದಿದೆ. ಪ್ರಚಾರ ಕೈಗೊಳ್ಳುವಲ್ಲಿ ಹಿಂದಿದೆ ಎಂದರು.
ಸಮಾಜವಾದಿ ಹಿರಿಯ ಹೋರಾಟಗಾರ ಪ. ಮಲ್ಲೇಶ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕ ಕಳೆದರೂ ಕೆಲವರು ತಮ್ಮ ಮಾನ ಮುಚ್ಚಿಕೊಳ್ಳಲು ತುಂಡು ಬಟ್ಟೆ ಇಲ್ಲದಂತಹ ಕಡು ಬಡತನ ಸ್ಥಿತಿಯಲ್ಲಿರುವುದು ಹಾಗೂ 100ಕ್ಕೆ 40ರಷ್ಟು ಮಕ್ಕಳು ಆಹಾರವಿಲ್ಲದೆ ಬಳಲುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕಾರಣಿ, ಸರಕಾರಕ್ಕೆ ಏನು ಅನಿಸುತ್ತಿಲ್ಲದಿರುವುದು ಖೇದಕರ ಎಂದರು.
ಗಣಿ, ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಅವಳಿ ನಗರದ 10 ಕಿಮೀ ವ್ಯಾಪ್ತಿಯೊಳಗೆ ಭೂಮಿ ಖರೀದಿಸುವುದು ಕಷ್ಟಕರ. ರೈತರಿಂದಲೂ ಭೂಮಿ ಖರೀದಿಸುವುದು ಕಷ್ಟ. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಇನ್ನು 10 ದಿನಗಳಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಎಲ್ಲೆಲ್ಲಿ ಜಾಗವಿದೆ ಅದನ್ನು ಗುರುತಿಸಲಾಗುವುದು. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಂದಾಯ, ನಗರಾಭಿವೃದ್ಧಿ, ವಸತಿ, ಅರಣ್ಯ ಸಚಿವರು ಒಂದೆಡೆ ಕುಳಿತು ಬ ಹಾಗೂ ಕರಾಬ ಭೂಮಿ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದರು. ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯೆ ಕೆ. ಉಮಾ, ಕೆಎಂಎಫ್ ಅಧ್ಯಕ್ಷ ನೀಲಕಂಠ ಅಸೂಟಿ ತನಾಡಿದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಇಮ್ರಾನ್ ಯಲಿಗಾರ, ಅಲ್ತಾಫ ಹಳ್ಳೂರ ಮೊದಲಾದವರಿದ್ದರು.
ಹೋರಾಟ ಸಮಿತಿ ರಾಜ್ಯ ಸಂಚಾಲಕ ನಾಗರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಆಶಯ ಭಾಷಣ ಮಾಡಿದರು. ರಾಜು ಹಿರೇಒಡೆಯರ ನಿರೂಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಆಗಮಿಸಿದ್ದರು. ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಸದಸ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಚಿವರು, ಗಣ್ಯರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.