ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ
ಡಾ| ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸಿದರು
Team Udayavani, Feb 5, 2022, 5:24 PM IST
ಧಾರವಾಡ: ಆತ್ಮಜ್ಞಾನಿಯಾದ ಗುರುವು ಶಿಷ್ಯಂದಿರ ಹೃದಯದೊಳಗಿನ ತಾಪಗಳನ್ನೆಲ್ಲ ಪರಿಹರಿಸುತ್ತಾ ಅವರಿಗೆ ಆತ್ಮಜ್ಞಾನ ಪಡೆಯಲು ಸಹಾಯ ಮಾಡುತ್ತಾನೆ ಎಂದು ವೈದ್ಯ ಡಾ| ಎಸ್. ಆರ್. ರಾಮನಗೌಡರ ಹೇಳಿದರು.
ಕವಿಸಂನಲ್ಲಿ ಪ್ರೊ| ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ಶ್ರೀ ಗುರುಗೀತಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ವೇದವ್ಯಾಸ ರಚಿತ “ಶ್ರೀ ಗುರುಗೀತಾ’ ಎಂಬ ಗ್ರಂಥದ ಎಲ್ಲ ವಿವರಗಳನ್ನು, ಹತ್ತು ಹಲವು ಶ್ಲೋಕಗಳನ್ನು ಅರ್ಥಸಹಿತವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮನೋವೈದ್ಯ ಡಾ| ಆನಂದ ಪಾಂಡುರಂಗಿ ಮಾತನಾಡಿ, ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯ ವ್ಯಕ್ತಿ ಎಂದರು. ದತ್ತಿದಾನಿಗಳಾದ ಪ್ರೊ| ಬಿ.ಎಸ್. ಶಿರೋಳ ಅವರು ಡಾ| ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸಿದರು. ಡಾ| ಎಸ್.ಆರ್. ರಾಮನಗೌಡರ ಹಾಗೂ ಅವರ ಪತ್ನಿ ಅವರನ್ನು ಸನ್ಮಾನಿಸಲಾಯಿತು. ಶಂಕರ ಹಲಗತ್ತಿ, ಗುರು ಹಿರೇಮಠ, ಡಾ| ಶ್ರೀಶೈಲ ಹುದ್ದಾರ, ನಿಂಗಣ್ಣ ಕುಂಟಿ, ಪ್ರೊ| ಐ.ಜಿ. ಸನದಿ, ಡಾ| ಡಿ.ಎಂ. ಹಿರೇಮಠ, ಡಾ|ಸಂಗಮನಾಥ ಲೋಕಾಪುರ, ಜಿ.ಬಿ. ಹೊಂಬಳ, ಡಾ| ಆನಂದ ಪಾಟೀಲ, ಡಾ| ಲಿಂಗರಾಜ ಅಂಗಡಿ, ಶಶಿಧರ ತೋಡಕರ, ಐ.ಕೆ. ಬಳ್ಳೂರ, ಎಸ್.ಬಿ. ಗುತ್ತಲ, ಸಿ.ಎಸ್. ಪಾಟೀಲ, ರಾಮಚಂದ್ರ ಧೋಂಗಡೆ ಇನ್ನಿತರರಿದ್ದರು. ಬಾಲಬಳಗ ಶಾಲೆಯ ಶೃತಿ ಮತ್ತು ತನ್ಮಯಿ ಸ್ವಾಗತಗೀತೆ ಹಾಡಿದರು. ಡಾ| ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.