ಏಕೀಕರಣ ಸಾಕಾರ ಮಾಡಿದ ಆಲೂರರು
Team Udayavani, Feb 26, 2017, 1:19 PM IST
ಧಾರವಾಡ: ನಾಡಿನ ಎಲ್ಲ ಕನ್ನಡಿಗರನ್ನು ಕರ್ನಾಟಕ ಏಕೀಕರಣಕ್ಕೆ ಪ್ರೇರೇಪಿಸಿ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಕನ್ನಡಿಗರ ಅಖಂಡತ್ವದ ಬೀಜ ಮಂತ್ರದಿಂದ ಏಕೀಕರಣ ಸಾಕಾರ ಮಾಡಿದ ಮಹಾನ್ ವ್ಯಕ್ತಿ ಆಲೂರರು ಎಂದು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ನಿರ್ದೇಶಕ ಡಾ| ಗುರುರಾಜ ಕರ್ಜಗಿ ಹೇಳಿದರು.
ಆಲೂರರ 53ನೇ ಪುಣ್ಯತಿಥಿ ಅಂಗವಾಗಿ ನಗರದ ಆಲೂರು ವೆಂಕಟರಾಯರ ಭವನದಲ್ಲಿ ಹಮ್ಮಿಕೊಂಡಿದ್ದ ಆಲೂರ ವೆಂಕಟರಾಯರ ಮೇರು ಕೃತಿ ಕರ್ನಾಟಕ ಗತ ವೈಭವ ಗ್ರಂಥ ಪ್ರಕಾಶನದ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕತ್ವದ ಅಖಂಡತೆಯೇ ಜೀವನದ ಧ್ಯೇಯ ವಾಕ್ಯವಾಗಿ ದುಡಿದ ಸಿದ್ಧಪುರುಷ ಆಲೂರು ವೆಂಕಟರಾಯರು ಎಂದರು.
ಏಕೀಕರಣದ ಮೊದಲು ಕರ್ನಾಟಕ ರಾಜ್ಯವು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಹೆಚ್ಚಾಗಿ ಇಲ್ಲಿನ ಎಲ್ಲ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದಕ್ಕಾಗಿ ಕರ್ನಾಟಕದ ಸಂಸ್ಕೃತಿ ಇದನ್ನು ಮನಗಂಡು ಆಲೂರರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಂಗ-ಭಂಗ ಚಳವಳಿಯಿಂದ ಪ್ರೇರಿತಗೊಂಡು ಸಂಪೂರ್ಣವಾಗಿ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ವೆಂಕಟರಾಯರ ಕರ್ನಾಟಕ ಗತ ವೈಭವ 1917ರಲ್ಲಿ ಪ್ರಕಾಶಿಸಿ 187 ಪುಟಗಳ ಕಿರು ಗ್ರಂಥ ಏಕೀಕರಣಕ್ಕೆ ಸಮಯದಲ್ಲಿ ನಾಡಿನ ಜನರನ್ನು ಹೆಚ್ಚಾಗಿ ಜಾಗೃತರಾಗಿ ಮಾಡಿದ ಮೇರು ಕೃತಿಯಾಗಿದೆ ಎಂದರು. ಆಲೂರರ “ಕರ್ನಾಟಕ ಏಕೀಕರಣ’ ಕುರಿತ ಹೋರಾಟಗಳು ಮತ್ತು ಅವರು ಏಕಕಾಲಕ್ಕೆ ಹತ್ತಾರು ಕ್ಷೇತ್ರಗಳಲ್ಲಿ ಮಾಡಿದ ಅದ್ಭುತ ಸಾಧನೆಗಳು ಈ ನಾಡ ಇತಿಹಾಸದಲ್ಲಿ ಮರೆಯಲಾಗದ ಹೆಜ್ಜೆ ಮೂಡಿಸಿವೆ.
ಆಲೂರರು ಬರೆದ “ಕರ್ನಾಟಕ ಗತವೈಭವ’ ಪುಸ್ತಕವನ್ನೋದಿದಾಗ ಒಂದು ಕೃತಿಯು ಹೇಗೆ ಶತಮಾನೋತ್ಸವವನ್ನು ಆಚರಿಸಬಹುದಾದ ನಾಡಿನ ಸಾರಸತ್ವವನ್ನೆಲ್ಲ ತುಂಬಿಕೊಂಡಿದೆ ಎಂಬುದರ ಅರಿವಾಗುತ್ತದೆ ಎಂದರು. ಕಾದಂಬರಿಕಾರ ಪ್ರೊ|ರಾಘವೇಂದ್ರ ಪಾಟೀಲ, ಏಕೀಕರಣದ ಪೂರ್ವ ರಂಗ ಹಾಗೂ ಏಕೀಕರಣದ ಪ್ರಜ್ಞಾ ಪೂರ್ವ ಕ್ರಿಯಾರಂಗದ ಅನೇಕ ಮಹತ್ವದ ಘಟನಾವಳಿ ಮತ್ತು ಆ ಕಾಲದ ನಿಸ್ವಾರ್ಥ ಹೋರಾಟಗಾರರ ಸಾಧನೆಗಳನ್ನು ತೆರೆದಿಟ್ಟರು.
ಡಾ|ಬಸವರಾಜ ಅಕ್ಕಿ ಮಾತನಾಡಿ, ಆಲೂರರು ರಚಿಸಿದ ಕರ್ನಾಟಕ ಗತವೈಭವ ಕೃತಿಯ ಚಾರಿತ್ರಿಕ ಹಿನ್ನೆಲೆ, ಮೂಲ ಸಂಶೋಧನೆಗಳಿಗೆ ಆಕರವಾಗಬಲ್ಲ ಅದರಲ್ಲಿಯ ಮಹತ್ವದ ಸಾಮಗ್ರಿಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಎನ್‌ಎಸ್ ಎಸ್ ಯೋಜನಾಧಿಕಾರಿಗಳಿಗೆ ಆಲೂರರ ಭಾವಚಿತ್ರ ವಿತರಿಸಲಾಯಿತು.
ನಾಡೋಜ ಚನ್ನವೀರ ಕಣವಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪ್ರೊ| ಎ.ಜಿ.ಸಬರದ, ಡಾ|ಬಾಳಣ್ಣ ಶೀಗಿಹಳ್ಳಿ, ಡಾ|ಆರ್.ಬಿ. ಚಿಲುಮಿ, ಡಾ|ಎಸ್.ಕೆ.ಜೋಶಿ, ಡಾ|ಎ.ಕೆ.ಶಾಸ್ತ್ರೀ, ಡಾ|ಆರ್. ಕೆ.ಮುಳಗುಂದ ಡಾ|ಜಿ.ಎಮ್.ಹೆಗಡೆ, ಶ್ರೀನಿವಾಸ ವಾಡಪ್ಪಿ, ವಸಂತ ವಾಯಿ, ಡಾ|ಮಾನಸಾ ಸಿ.ಟಿ., ಶೋಭಾ ದೇಶಪಾಂಡೆ, ಜಯಶ್ರೀ ಜೋಶಿ, ಪುಷ್ಪಾಗೋಡಖೀಂಡಿ, ಅನಿಲ ಕಾಖಂಡಿಕಿ, ಎಸ್.ಎಮ್ ದೇಶಪಾಂಡೆ, ರಮೇಶ ಪರ್ವತಿಕರ ಇದ್ದರು. ಶ್ರೀಹರಿ ಅಂಬೇಕರ ಪ್ರಾರ್ಥಿಸಿದರು.
ಸಿದ್ಧಲಿಂಗೇಶ ರಂಗಣ್ಣವರ ಸ್ವಾಗತಿಸಿದರು. ದೀಪಕ ಆಲೂರ ಪರಿಚಯಿಸಿದರು. ವೆಂಕಟೇಶ ದೇಸಾಯಿ ಟ್ರಸ್ಟ್ ಕುರಿತು ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಪರಾಂಜಪೆ ನಿರೂಪಿಸಿದರು. ಡಾ|ಎಲ್.ಟಿ.ಕಾಯಕ ವಂದಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಜರುಗಿದ ಕರ್ನಾಟಕ ಗತವೈಭವದ ಗ್ರಂಥದ ಸಾರ್ವಜನಿಕ ಮೆರವಣಿಗೆಯನ್ನು ಕವಿವಿ ಕುಲಪತಿ ಡಾ|ಪ್ರಮೋದ ಗಾಯಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ|ಎಸ್.ಬಿ. ಬೊಮ್ಮನಹಳ್ಳಿ ಆಲೂರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.