ವಿದೇಶಿ ಪ್ರವಾಸಿಗರಿಗೆ ಕಡಿಮೆ ದರಕ್ಕೆ ಟ್ಯಾಕ್ಸಿ ವ್ಯವಸ್ಥೆ
Team Udayavani, Feb 26, 2017, 1:14 PM IST
ಹುಬ್ಬಳ್ಳಿ: ನಗರದಿಂದ ಹಂಪಿಗೆ ಪ್ರವಾಸಕ್ಕೆಂದು ತೆರಳಲು ವಿದೇಶಿ ದಂಪತಿಯು ಟ್ಯಾಕ್ಸಿ ಮಾಡಲು ಹೋದಾಗ ಬಾಡಿಗೆ ದರ ಹೊಂದಾಣಿಕೆಯಾಗದೆ ಪರದಾಡುತ್ತಿದ್ದಾಗ ಉಪನಗರ ಠಾಣೆಯ ಗಸ್ತು ವಾಹನದ ಪೊಲೀಸರು ಮಧ್ಯಪ್ರವೇಶಿಸಿ, ಕಡಿಮೆ ದರಕ್ಕೆ ಟ್ಯಾಕ್ಸಿ ವ್ಯವಸ್ಥೆ ಮಾಡಿ ಔದಾರ್ಯ ತೋರಿದರು.
ಇಸ್ರೇಲ್ ಮೂಲದ ಲಿವನ್ ಬಾರ್ಕ್ ಮತ್ತು ಪರ್ನಸ್ಸಾ ದಂಪತಿಯು ಮಗಳೊಂದಿಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಇವರು ಹಂಪಿಗೆ ಪ್ರವಾಸ ಮಾಡಲೆಂದು ಬಸ್‌ನಲ್ಲಿ ಗೋವಾದಿಂದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಂತರ ಇಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಹಂಪಿಗೆ ಹೊರಡಲು ಮುಂದಾಗಿದ್ದಾರೆ.
ಅದಕ್ಕಾಗಿ ಈದ್ಗಾ ಮೈದಾನದಲ್ಲಿರುವ ಟ್ಯಾಕ್ಸಿದವರ ಬಳಿ ಬಾಡಿಗೆ ವಿಚಾರಿಸಿದ್ದಾರೆ. ಆದರೆ ಅಲ್ಲಿನ ಟ್ಯಾಕ್ಸಿಯವರು ಹೆಚ್ಚಿನ ದರ ಹೇಳುತ್ತಿದ್ದರಿಂದ ಅತ್ತಿಂದಿತ್ತ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಉಪನಗರ ಠಾಣೆಯ ಗಸ್ತು ವಾಹನದ ಸಿಬ್ಬಂದಿಯು ಕಡಿಮೆ ದರಕ್ಕೆ ಟ್ಯಾಕ್ಸಿಯೊಂದರ ವ್ಯವಸ್ಥೆ ಮಾಡಿ ಅವರನ್ನು ಹಂಪಿಗೆ ಕಳುಹಿಸಿ ಔದಾರ್ಯ ಮೆರೆದರು.
ಕಳೆದ ಬಾರಿಯೂ ಈ ಠಾಣೆಯ ಸಿಬ್ಬಂದಿಯು ಹಣವಿಲ್ಲದೆ ಪರದಾಡುತ್ತಿದ್ದ ವಿದೇಶಿ ಮಹಿಳೆಗೆ ಆಗ್ರಾಕ್ಕೆ ತೆರಳಲು ರೈಲಿನ ವ್ಯವಸ್ಥೆ ಮಾಡಿ ಕಳುಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.