![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 10, 2021, 6:30 AM IST
ಧಾರವಾಡ: ಕಿತ್ತೂರು ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಾಣ ಮುಡಿಪಿಟ್ಟ ಇತಿಹಾಸ ಸುವರ್ಣಾಕ್ಷರಗಳದು. ಆಕೆ ಸೋತ ಬಳಿಕ ಬ್ರಿಟಿಷರು ಅರಮನೆಯನ್ನು ಕೊಳ್ಳೆ ಹೊಡೆದು, ಅಂದಗೆಡಿಸಿದ್ದು ಅವರ ವಿಕೃತಿಗೆ ಸಾಕ್ಷಿಯಾಗಿ ನಿಂತಿದೆ.
ಈಗ ಸ್ವಾತಂತ್ರ್ಯಚಳವಳಿಯ ಸ್ಫೂರ್ತಿಯ ಚಿಲುಮೆ ರಾಣಿ ಚೆನ್ನಮ್ಮಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಕಿತ್ತೂರನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಸಲುವಾಗಿ ಅಲ್ಲಿ ಭವ್ಯವಾದ ಮರದ ಮಾದರಿ ಅರಮನೆ ತಲೆ ಎತ್ತಲಿದೆ.
ಸಿದ್ಧಗೊಂಡಿದೆ ನೀಲನಕ್ಷೆ
ಕಿತ್ತೂರು ಅರಮನೆ ದ. ಭಾರತದಲ್ಲಿಯೇ ಅತೀ ದೊಡ್ಡ, ಸಾಗುವಾನಿ ಮರದ ಭವ್ಯ ಕೆತ್ತನೆಗಳುಳ್ಳ ಅರಮನೆಯಾಗಿತ್ತು. ಹುಬ್ಬಳ್ಳಿಯ ಮೂರುಸಾವಿರ ಮಠ ಇದೇ ಮಾದರಿಯಲ್ಲಿದೆ. ಈ ಸಂಬಂಧ ಇತಿಹಾಸ ತಜ್ಞರು ಅಧ್ಯಯನ ನಡೆಸಿ ಅರಮನೆ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿದ್ದಾರೆ.
ಎಲ್ಲಿ ನಿರ್ಮಾಣ?
ಕಿತ್ತೂರು ಕೋಟೆಗೆ ಹೊಂದಿಕೊಂಡಂತೆ ಪೂರ್ವ ಭಾಗದಲ್ಲಿ ಮಾದರಿ ಅರಮನೆ ನಿರ್ಮಾಣವಾಗಲಿದೆ. ಇಲ್ಲಿ 15 ಎಕರೆ ಜಾಗ ಪಡೆದು ನೂತನ ಕೋಟೆ, ನಡುವೆ ಅರಮನೆ ತಲೆ ಎತ್ತಲಿದೆ. ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಕೋಟೆ ಮತ್ತು ಅರಮನೆಗೆ ತೆರಳಲು ಪ್ರತ್ಯೇಕ ಸುಂದರ ರಸ್ತೆ ನಿರ್ಮಾಣಗೊಳ್ಳಲಿದೆ.
3 ಅಂಶಗಳಿಗೆ ಒತ್ತು
ಇತಿಹಾಸ, ವಾಸ್ತುಶಿಲ್ಪ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಪ್ರವಾಸೋದ್ಯಮಕ್ಕೆ ಪೂರಕ ವ್ಯವಸ್ಥೆ- ಈ 3 ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಇತಿಹಾಸ ತಜ್ಞರು, ಸಲಹೆ ಮಂಡಳಿ ಸರಕಾರದ ಗಮನ ಸೆಳೆದಿದ್ದಾರೆ.
15ನೇ ಶತಮಾನ ದಿಂದ 18ನೇ ಶತಮಾನದ ವರೆಗೆ ವಿಭಿನ್ನ ಹಂತಗಳಲ್ಲಿ ಕಿತ್ತೂರು ಅರಮನೆ ನಿರ್ಮಾಣಗೊಂಡಿದೆ. ಆ ಕಾಲದ ವಾಸ್ತುಶಿಲ್ಪ ವಿಸ್ಮಯಕಾರಿ. ಅಂದಿನ ಅರಮನೆಯಂತೆಯೇ ನಿರ್ಮಾಣಕ್ಕೆ ಸಲಹೆ ನೀಡಿದ್ದೇವೆ.
-ಡಾ| ಷಡಕ್ಷರಯ್ಯ,
ಇತಿಹಾಸ ತಜ್ಞರು, ಧಾರವಾಡ
-ಬಸವರಾಜ ಹೊಂಗಲ್
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.