ಪೊಲೀಸ್ ಇಲಾಖೆಯೇ ನನ್ನ ಸರ್ವಸ್ವ
Team Udayavani, Jan 27, 2019, 12:30 AM IST
ಹುಬ್ಬಳ್ಳಿ: “ಪೊಲೀಸ್ ಇಲಾಖೆಯೇ ನನಗೆ ಸರ್ವಸ್ವ, ಇದರಲ್ಲಿ ಗುಲಗುಂಜಿಯಷ್ಟು ಆಚೆ-ಈಚೆ ಚಿಂತನೆಯೇ ಇಲ್ಲ. ಶಿಕ್ಷಣ, ಶ್ರದೆಟಛಿ ಹಾಗೂ ಶ್ರಮ ದೊಡ್ಡ ಲಾಭ ಕೊಟ್ಟಿದೆ. ಕರ್ತವ್ಯ ನಿರ್ವ ಹಣೆ ನಡುವೆಯೂ ಈ ಲಾಭದ ಪ್ರೇರಣೆಯನ್ನು ನಾಡಿನ ಯುವಕರಿಗೆ ಬಿತ್ತರಿಸುವ ಕಾಯಕಕ್ಕೆ ಮುಂದಾಗಿರುವೆ. ಅದು ಬಿಟ್ಟರೆ ಬೇರೇನೂ ಇಲ್ಲ’ – ಇದು ಐಪಿಎಸ್ ಅಧಿಕಾರಿ ಆಗಿರುವ ಬೆಂಗಳೂರಿನ ಡಿಸಿಪಿ ರವಿ ಚನ್ನಣ್ಣವರ ಸ್ಪಷ್ಟೋಕ್ತಿ.
ಪೊಲೀಸ್ ಇಲಾಖೆ ಬಗೆಗಿನ ಪ್ರೀತಿ,ಯುವಶಕ್ತಿಯನ್ನು ಸಕಾರಾತ್ಮಕ ಹಾಗೂ ಮೌಲ್ಯಯುತ ರಾಷ್ಟ್ರದ ಆಸ್ತಿಯಾಗಿಸುವ, ಕೃಷಿ ಕಾಯಕದ ಮಹತ್ವ…ಹೀಗೆ ವಿವಿಧ ವಿಷಯಗಳ ಕುರಿತಾಗಿ ಉದಯವಾಣಿ’ಯೊಂದಿಗೆ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಪೊಲೀಸ್ ಇಲಾಖೆಯೇ ನನಗೆ ಸರ್ವಸ್ವ. ಠಾಣೆಗೆ ನ್ಯಾಯ ಕೋರಿ ಹಾಗೂ ಸಮಸ್ಯೆ ಹೊತ್ತು ತರುವ ಜನರಿಗೆ ಕಾಯ್ದೆಯಡಿಯಲ್ಲಿ ಪರಿಹಾರ ರೂಪಿಸಿದರೆ ಸಾಕು ಜನರು ನಮ್ಮನ್ನು ದೇವರಂತೆ ನೋಡುತ್ತಾರೆ.
ನನಗೆ ಆ ಸೌಲಭ್ಯವಿಲ್ಲ, ಈ ಅವಕಾಶವಿಲ್ಲ, ಪಾಲಕರ ಪ್ರೋತ್ಸಾಹವಿಲ್ಲ ಎಂದು ದೂಷಿಸುವ ಮನೋಭಾವಗಳೇ ಹೆಚ್ಚುತ್ತಿದೆ. ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬಹುದು ಎಂಬ ಪ್ರೇರಣೆ ನೀಡುವ ಕಾರಣಕ್ಕಾಗಿಯೇ ನಾನು ಅನೇಕ ಕಡೆ ಹೋಗಿ ಯುವಕರನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ. ನನ್ನ ವೈಯಕ್ತಿಕ ಪ್ರಚಾರಕ್ಕಾಗಿ ಅಥವಾ ಇನ್ನಾವುದೋ ಉದ್ದೇಶಕ್ಕಾಗಿಯಂತೂ ಖಂಡಿತವಾಗಿ ಅಲ್ಲ. ಪ್ರಾಥಮಿಕದಿಂದ ಪಿಯುಸಿ ಹಂತದವರೆಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾಗಿದೆ. ಇದಕ್ಕೆ ಪೂರಕ ವಾತಾವರಣಕ್ಕೆ ಪಾಲಕರು, ಶಿಕ್ಷಣ ಸಂಸ್ಥೆ, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.
ಕೇವಲ ಪಠ್ಯಾಧಾರಿತ ವ್ಯಾಸಂಗದ ಬದಲು ಉತ್ತಮ ಮಾರ್ಗದರ್ಶನ, ಸಕಾರಾತ್ಮಕ ಚಿಂತನೆ, ಮಾನವೀಯ ಕಳಕಳಿ ಮನಸ್ಸಿನ ಮನುಷ್ಯನನ್ನು ರೂಪಿಸುವ ಕಾರ್ಯಕ್ಕೂ ಒತ್ತು ನೀಡಬೇಕಾಗಿದೆ. ಶಿಕ್ಷಣ ಕೇವಲ ಅಂಕಪಟ್ಟಿಯ ಉದ್ದೇಶದ್ದಲ್ಲ. ಜ್ಞಾನಾರ್ಜನೆ ಬದುಕು
ಕಟ್ಟಿಕೊಡುವುದಾಗಬೇಕಾಗಿದೆ. ಕೃಷಿ ಲಾಭದಾಯಕ ವಲಯ ಎಂಬುದನ್ನು ಮನವರಿಕೆ ಮಾಡಿದರೆ ಯುವಕರು ಖಂಡಿತವಾಗಿಯೂ ಕೃಷಿಗೆ ಆಕರ್ಷಿತರಾಗಲಿದ್ದಾರೆ. ಹಿಂದಿನ ಸಾಧಕರ ಸಾಧನೆ, ಪರಿಶ್ರಮದ ಮನನ, ಉತ್ತಮ ಪುಸ್ತಕಗಳ ಓದಿನ ಅಭಿರುಚಿ, ಸಾಹಿತ್ಯದ ಚಿಂತನೆ ಯುವಕರ ಮನದಲ್ಲಿ ಮೂಡಬೇಕಾಗಿದೆ. ಇದು ಸಾಧ್ಯವಾದರೆ ಯುವಕರು ಕೃಷಿ, ನೌಕರಿ,ಉದ್ಯಮ, ವ್ಯಾಪಾರ ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸಾಧನೆ ಮಾಡಬಲ್ಲವರಾಗಲಿದ್ದಾರೆ ಎಂಬ ಅಚಲ ನಂಬಿಕೆ ಹಾಗೂ ಅನುಭವ ನನ್ನದು.
ಸಾಮಾಜಿಕ ಜಾಲತಾಣದ ಹುಚ್ಚು ಬೇಡ: ಸಾಮಾಜಿಕ ಜಾಲತಾಣ ವರವೂ ಹೌದು, ಶಾಪವೂ ಹೌದು. ಸಾಮಾಜಿಕ ಜಾಲತಾಣದಲ್ಲಿ ನೋಡಬಾರದ್ದನ್ನು ನೋಡಬಹುದು. ಜ್ಞಾನವೃದ್ಧಿಯನ್ನು ಮಾಡಿಕೊಳ್ಳಬಹುದು. ನಿಜ ಹೇಳುತ್ತೇನೆ. ನಾನು ಫೇಸ್‌ಬುಕ್ ಖಾತೆ ಹೊಂದಿಲ್ಲ. ಇದ್ದ ಖಾತೆಯನ್ನು ರದ್ದುಪಡಿಸಿದ್ದೇನೆ. ಯುವ ಸ್ನೇಹಿತರಿಗೆ ನನ್ನ ಸಲಹೆ ಇಷ್ಟೆ. ಕಲಿಯುವ ವಯಸ್ಸಿನಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಗಳಿಂದ ದೂರ ಇರುವುದು ಒಳ್ಳೆಯದು.
ಸಾಮಾಜಿಕ ಜಾಲತಾಣದಿಂದ ಏಕಾಗ್ರತೆಗೆ ಧಕ್ಕೆಯಾಗಲಿದೆ. ಗೊತ್ತಿಲ್ಲದ, ಎಲ್ಲಿಂದಲೋ ಬಂದ ವಿಷಯ-ಮಾಹಿತಿಯನ್ನು ಎಡಿಟ್ ಮಾಡುವ, ವಿಕೃತಗೊಳಿಸಿ ಇನ್ನೊಬ್ಬರಿಗೆ ಕಳುಹಿಸುವುದರಿಂದ ಮಾನಸಿಕ ಮಾಲಿನ್ಯ ಸೃಷ್ಟಿ ಮಾಡಲಿದೆ. ಏಕಾಗ್ರತೆ ಕುಗ್ಗಿ ಓದು ಹಾಗೂ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ. ಅಂತರ್ಜಾಲ, ಸಾಮಾಜಿಕ ಜಾಲತಾಣದಿಂದ ಜ್ಞಾನ ಪಡೆಯುವ ಕೆಲಸ ಮಾಡಿದರೆ ಒಳಿತು. ಇಲ್ಲವಾದರೆ ಅದರಿಂದ ದೂರವಿರುವುದು ಇನ್ನೂ ಒಳಿತು. ಒಳ್ಳೆಯ ಪುಸ್ತಕ ಓದುವ, ಅದ್ಭುತ ಕನಸು ಕಾಣುವ ಕಾರ್ಯಕ್ಕೆ ಮುಂದಾಗಲಿ. ಪಾಲಕರು ಸಹ ಮಕ್ಕಳ ಹವ್ಯಾಸ, ವರ್ತನೆಗಳ ಬಗ್ಗೆ ಗಮನ ಹರಿಸುವುದು ಸೂಕ್ತ.
ಕೀಳರಿಮೆ, ಹಿಂಜರಿಕೆ ತೊರೆಯಲಿ
ಯುವಕರು, ಅದರಲ್ಲೂ ಉತ್ತರ ಕರ್ನಾಟಕದ ಯುವಕರು ಮೊದಲು ಕೀಳರಿಮೆ, ಹಿಂಜರಿಕೆ, ನನಗೆ ಇಂಗ್ಲಿಷ್ ಬಾರದು ಎಂಬ ಭಾವನೆ ತೊರೆಯಲಿ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಅತ್ಯುತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕರ ಉದಾಹರಣೆ ಇದೆ.ಮಾತೃಭಾಷೆಯಲ್ಲಿನ ಕಲಿಕೆ ಜ್ಞಾನಾರ್ಜನೆ, ಸುಲಭ ಅರ್ಥೈಸಿಕೊಳ್ಳುವಿಕೆ,ವ್ಯಾಖ್ಯಾನಕ್ಕೆ ಸುಲಭವಾಗಲಿದೆ. ಉತ್ತರ ಕರ್ನಾಟಕದಲ್ಲಿ ಉತ್ತಮ ಸಂಪತ್ತಿದೆ, ಪ್ರತಿಭೆ ಇದೆ. ಆದರೆ, ಕೀಳರಿಮೆ, ಹಿಂಜರಿಕೆ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಬೇಕಾಗಿದೆ. ನಾನೊಬ್ಬ ಬೆಳೆದರೆ ಸಾಲದು, ನನ್ನ ಭಾಗವೂ ಅಭಿವೃದ್ಧಿ ಹೊಂದಬೇಕೆಂಬ ಭಾವನೆ ತೋರಬೇಕಾಗಿದೆ. ಜನ್ಮತಳೆದ ಊರನ್ನು ನಾವ್ಯಾರು ಮರೆಯಬಾರದು.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.