5ರಿಂದ ರೈಲ್ವೆ ಮ್ಯೂಸಿಯಂಸಾರ್ವಜನಿಕ ವೀಕ್ಷಣೆಗೆ ಲಭ್ಯ
Team Udayavani, Aug 3, 2020, 12:07 PM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಇಲ್ಲಿನ ಗದಗ ರಸ್ತೆಯಲ್ಲಿ ರೈಲ್ವೆ ಕೇಂದ್ರ ಆಸ್ಪತ್ರೆ ಎದುರಿಗೆ ನಿರ್ಮಿಸಿರುವ ರೈಲ್ವೆ ಮ್ಯೂಸಿಯಂ ಆ. 5ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
ಉತ್ತರ ಕರ್ನಾಟಕದ ಮೊದಲ ಹಾಗೂ ನೈಋತ್ಯ ರೈಲ್ವೆ ವಲಯದ ಎರಡನೇ ಮ್ಯೂಸಿಯಂ ಇದಾಗಿದೆ. ಜು. 31ರಂದು ಇದು ಲೋಕಾರ್ಪಣೆಗೊಂಡಿದ್ದು, ಆ. 5ರ ನಂತರದಲ್ಲಿ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ. ಮೊದಲ ಐದು ದಿನ ಉಚಿತ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆ. 9ರ ವರೆಗೆ ಸಂಜೆ 4ರಿಂದ 7 ಗಂಟೆವರೆಗೆ ಮ್ಯೂಸಿಯಂ ತೆರೆದಿರುತ್ತದೆ. ಆ. 11ರಿಂದ ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12ರಿಂದ ಸಂಜೆ 7ಗಂಟೆವರೆಗೆ ಶನಿವಾರ, ರವಿವಾರ ಹಾಗೂ ರಜಾ ದಿನಗಳಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8ಗಂಟೆವರೆಗೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಇದ್ದು, ಪ್ರತಿ ಸೋಮವಾರ ರಜಾ ದಿನವಾಗಿದೆ. 12 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೆ 20, 5ರಿಂದ 12 ವರ್ಷದೊಳಗಿನವರಿಗೆ 10 ಹಾಗೂ ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ಟಾಯ್ ರೈಲು ಒಬ್ಬರಿಗೆ 10 ರೂ. ಶುಲ್ಕ ಇದ್ದು, ಮೂರು ಸುತ್ತು ಸುತ್ತಲಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಮ್ಯೂಸಿಯಂ ವೀಕ್ಷಣೆಗೆ ಒಂದು ಬಾರಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ವೀಕ್ಷಣೆಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಹಾಗೂ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. 1907ರಲ್ಲಿ ನಿರ್ಮಾಣಗೊಂಡ ನೈಋತ್ಯ ರೈಲ್ವೆ ವಲಯದ ಎರಡು ಪಾರಂಪರಿಕ ಕಟ್ಟಡಗಳಲ್ಲಿ ಮ್ಯೂಸಿಯಂ ಆರಂಭಿಸಲಾಗಿದ್ದು, ಎರಡು ಕಟ್ಟಡಗಳಲ್ಲಿ ಒಂದಕ್ಕೆ ಮಲಪ್ರಭಾ, ಇನ್ನೊಂದಕ್ಕೆ ಘಟಪ್ರಭಾ ಎಂದು ಹೆಸರಿಡಲಾಗಿದೆ.
ಮ್ಯೂಸಿಯಂನಲ್ಲಿ ಅನೇಕ ಪಾರಂಪರಿಕ ವಸ್ತುಗಳು, ರೈಲ್ವೆಗೆ ಸಂಬಂಧಿಸಿದ ಸಲಕರಣೆಗಳು, ಮಾದರಿ ರೈಲು, ಮಕ್ಕಳಿಗೆ ಆಟಿಕೆ ವಸ್ತುಗಳು, ಹೋಟೆಲ್ ಇನ್ನಿತರ ಸೌಲಭ್ಯಗಳಿವೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.