ಗ್ರಾಮೀಣ ಬದುಕಿಗೆ ದೇಶಪಾಂಡೆ ಪ್ರತಿಷ್ಠಾನದ ಬಲ
|ಕೃಷಿ ಹೊಂಡ ನಿರ್ಮಾಣ, ಕೌಶಲ ತರಬೇತಿ |ಆರ್ಥಿಕ ಸದೃಢತೆಯತ್ತ ದಶಕದ ನಡೆ |ವೃತ್ತಿಪರರ ನೈಪುಣ್ಯತೆಗೆ ತಾಂತ್ರಿಕತೆ ಸ್ಪರ್ಶ
Team Udayavani, Jul 19, 2019, 8:28 AM IST
ಹುಬ್ಬಳ್ಳಿ: ಕೃಷಿ ಹಾಗೂ ಗ್ರಾಮೀಣ ಜನರ ಬದುಕು ಸುಧಾರಣೆ, ಆದಾಯ ವೃದ್ಧಿಯಲ್ಲಿ ತನ್ನದೇ ಯತ್ನ ಕೈಗೊಂಡಿರುವ ದೇಶಪಾಂಡೆ ಪ್ರತಿಷ್ಠಾನ, ಇದುವರೆಗೆ ಒಟ್ಟು 3,500 ಕೃಷಿ ಹೊಂಡ ನಿರ್ಮಿಸಿದ್ದು, 7,000 ಜನರಿಗೆ ಸೂಕ್ಷ್ಮ ಉದ್ಯಮ ತರಬೇತಿ, 1,100 ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸೇರಿದಂತೆ ಕೌಶಲ ಹೆಚ್ಚಳ ಸಾಧನೆ ತೋರಿದೆ.
ದಶಮಾನೋತ್ಸವ ಸಂಭ್ರಮದಲ್ಲಿರುವ ದೇಶಪಾಂಡೆ ಪ್ರತಿಷ್ಠಾನ 2009ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದಾಗ ಇದು ಉದ್ಯಮಕ್ಕೆ ಪೂರಕವಾಗುವ, ನಗರ ಬದುಕಿಗೆ ಹೆಚ್ಚು ಇಂಬು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕಾರ್ಪೊರೇಟ್ ಜಗತ್ತಿನ ಪ್ರತೀಕವಾಗಲಿದೆ ಎಂದು ಭಾವಿಸಿದವರೇ ಅಧಿಕ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ದೇಶಪಾಂಡೆ ಪ್ರತಿಷ್ಠಾನ ಸುಸ್ಥಿರ ಕೃಷಿ ನಿಟ್ಟಿನಲ್ಲಿ ಕಾಳಜಿ ಹಾಗೂ ನೀರಾವರಿ ಸೌಲಭ್ಯ, ಗ್ರಾಮೀಣದಲ್ಲಿ ಅನೇಕ ವೃತ್ತಿಪರರ ನೈಪುಣ್ಯತೆಗೆ ತಾಂತ್ರಿಕತೆ ಸ್ಪರ್ಶ ನೀಡಿ ಮಾರುಕಟ್ಟೆಗೆ ಪರಿಚಯಿಸಿದೆ. ಇಂಗ್ಲಿಷ್ ಎಂದರೇನೆ ಕಬ್ಬಿಣದ ಕಡಲೆ ಎಂದು ಕೀಳರಿಮೆಗೆ ಒಳಗಾಗುತ್ತಿದ್ದ ಗ್ರಾಮೀಣ ಮಕ್ಕಳ ಬಾಯಲ್ಲಿಯೇ ಹರಳು ಹುರಿದಂತೆ ಇಂಗ್ಲಿಷ್‌ನಲ್ಲಿ ಮಾತನಾಡುವ ಕೌಶಲ ಮೂಡಿಸುವ ಕಾರ್ಯ ಮಾಡಿದೆ.
3,500 ಕೃಷಿ ಹೊಂಡ: ಉದ್ಯಮಿ ಡಾ| ಗುರುರಾಜ ದೇಶಪಾಂಡೆ ಅವರು ತಮ್ಮ ತಂದೆ ಶ್ರೀನಿವಾಸ ದೇಶಪಾಂಡೆಯವರ ಪ್ರೇರಣೆಯಂತೆ ದೇಶಪಾಂಡೆ ಪ್ರತಿಷ್ಠಾನದ ಮೂಲಕ ರೈತರ ಬದುಕು ಸುಧಾರಣೆ ಯತ್ನ ಕೈಗೊಂಡಿದ್ದಾರೆ.
ಬರಪೀಡಿತ ಉತ್ತರ ಕರ್ನಾಟಕದ ರೈತರ ಕೃಷಿ ಕಾಯಕಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಹೊಂಡಗಳ ನಿರ್ಮಾಣದ ಅಭಿಯಾನವನ್ನು ರತನ್ ಟಾಟಾ ಟ್ರಸ್ಟ್‌ನೊಂದಿಗೆ ಪ್ರತಿಷ್ಠಾನ ಕೈಗೊಂಡಿತ್ತು. ಸರಕಾರಗಳ ಸಹಕಾರವೂ ಇತ್ತು. 2014ರಲ್ಲಿ ಆರಂಭವಾದ ಈ ಅಭಿಯಾನದಲ್ಲಿ ಇದುವರೆಗೆ ಧಾರವಾಡ, ಹಾವೇರಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 3,500 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ನೀರಿನ ಸೌಲಭ್ಯವೇ ಇಲ್ಲದ ಅನೇಕ ರೈತರು ಇದೀಗ ಕೃಷಿ ಹೊಂಡಗಳ ನೀರನ್ನು ಹನಿ ಇಲ್ಲವೆ ತುಂತುರು ನೀರಾವರಿ ಮೂಲಕ ಬಳಸಿಕೊಂಡು ಪಪ್ಪಾಯ, ತರಕಾರಿ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಅತಿಸಣ್ಣ-ಸಣ್ಣ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಷ್ಠಾನದಿಂದ ರೈತ ಉತ್ಪಾದಕ ಸಂಘ (ಎಫ್ಪಿಒ) ರಚಿಸಲಾಗಿದ್ದು, ಉತ್ಪನ್ನ ಹೆಚ್ಚಳ ತಂತ್ರಜ್ಞಾನ, ಮಾರುಕಟ್ಟೆ, ಬಿತ್ತನೆಯಿಂದ ಕೊಯ್ಲುವರೆಗೆ ವಿವಿಧ ಸೇವೆ ನೀಡುತ್ತಿದೆ. ಉತ್ತರ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಗಳ ವಿವಿಧ ಜಿಲ್ಲೆಗಳಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ಫಸಲು ಹೆಚ್ಚಳಕ್ಕೆ ಕ್ರಮ, ಮಾರುಕಟ್ಟೆ ಸಂಪರ್ಕದ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮೆಣಸಿನಕಾಯಿ ಫಸಲು ವೃದ್ಧಿಗೆ ಬಳ್ಳಾರಿ ಭಾಗದಲ್ಲಿ ಎಸ್‌ಎಸ್‌ಐ ಯೋಜನೆಯಡಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ತರಬೇತಿ: ಸ್ಕಿಲ್ ಇನ್ ವಿಲೇಜ್ ಯೋಜನೆಯಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸೇರಿದಂತೆ ವಿವಿಧ ಕೌಶಲ ತರಬೇತಿ ನೀಡಲಾಗುತ್ತಿದೆ. ಸುಮಾರು 28 ಗ್ರಾಮಗಳಲ್ಲಿ 1,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು, ಇದರಲ್ಲಿ ಶೇ.60 ವಿದ್ಯಾರ್ಥಿನಿಯರಿದ್ದಾರೆ. ನಾಲ್ಕಾರು ದೇಶಗಳ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿಯೇ ಸಂವಾದ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.