ಆಹಾರ-ನಾಗರಿಕ ಪೂರೈಕೆ ಕಚೇರಿಗೆ ಸಿಬ್ಬಂದಿ “ಹಸಿವು’
Team Udayavani, Jun 7, 2017, 4:47 PM IST
ಹುಬ್ಬಳ್ಳಿ: ರಾಜ್ಯ ಸರಕಾರದ ದಿನಕ್ಕೊಂದು ನೀತಿ, ವರ್ತನೆಯಿಂದಾಗಿ ಪಡಿತರ ಕಾರ್ಡ್ ಹಾಗೂ ಪಡಿತರ ಸಮರ್ಪಕವಾಗಿ ದೊರೆಯದೆ ಬಡವರು ಪರದಾಡುವಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇರುವುದು ಜನರ ಸಂಕಷ್ಟವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಹುಬ್ಬಳ್ಳಿಯಂತಹ ಮಹಾನಗರದಲ್ಲಿ ಪಡಿತರ ಸಮಸ್ಯೆಗಳ ನಿವಾರಣೆ ಹಾಗೂ ಜನತೆಗೆ ಸಮರ್ಪಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎರಡು ಕಚೇರಿಯನ್ನಾದರೂ ಆರಂಭಿಸಬೇಕು ಎಂಬ ಬೇಡಿಕೆ ಅನೇಕರದ್ದಾಗಿದೆ. ಆದರೆ ಇರುವ ಒಂದು ಕಚೇರಿಯಲ್ಲೂ ಸಮರ್ಪಕ ಸಿಬ್ಬಂದಿ ಇಲ್ಲವಾಗಿದೆ.
ಕಳೆದೆರಡು ವರ್ಷಗಳಿಂದ ಖಾಲಿ ಇದ್ದ ಸಹಾಯಕ ನಿರ್ದೇಶಕ ಹುದ್ದೆಯನ್ನು ಪ್ರಭಾರಿ ಅಧಿಕಾರಿ ನಿರ್ವಹಿಸಿದ್ದರಾದರೂ, ಅವರೂ ನಿವೃತ್ತಿ ಹೊಂದಿದ್ದಾರೆ. ಸರಕಾರ ಒಂದು ಕಡೆ ಉಚಿತವಾಗಿ ಪಡಿತರ ಧಾನ್ಯ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅರ್ಹ ಬಡವರಿಗೆ ಪಡಿತರ ಚೀಟಿಯೇ ಇಲ್ಲವೆಂದಾದರೆ ಉಚಿತವಾಗಿ ನೀಡಿದರೇನು, ಹಣ ಪಡೆದರೇನು ಪ್ರಯೋಜನ.
ಮುಖ್ಯವಾಗಿ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ, ಒಂದು ವಾರದಲ್ಲಿ ಮುಗಿಯಬೇಕಾದ ಬಡವರ ಕೆಲಸಗಳು ತಿಂಗಳು-ಎರಡು ತಿಂಗಳಿಗೆ ಮುಗಿದರೂ ಬಡವರ ಪುಣ್ಯ ಎಂದುಕೊಳ್ಳಬೇಕಾಗುತ್ತದೆ.
ಹುಬ್ಬಳ್ಳಿ ಪಡಿತರ ಫಲಾನುಭವಿಗಳು ಇಂತಹ ಸ್ಥಿತಿ ಅನುಭವಿಸಬೇಕಿದೆ. ಬಡವರಿಗೆ ಬಿಪಿಎಲ್ ಕಾರ್ಡ್ ದೊರೆಯದೆ ಒಂದು ಕಡೆ ಪಡಿತರಕ್ಕೆ ಹೊಡೆತ ಬಿದ್ದಿದ್ದರೆ, ಇನ್ನೊಂದೆಡೆ ವೈದ್ಯಕೀಯ ಚಿಕಿತ್ಸೆಗೆ ಸರಕಾರದ ವಿವಿಧ ಆರೋಗ್ಯ ವಿಮಾ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಇಲ್ಲದೆ ಸೌಲಭ್ಯಗಳಿಂದ ವಂಚಿತವಾಗಬೇಕಾಗಿದೆ.
ಹುದ್ದೆ ಖಾಲಿ: ಆಹಾರ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಹಾಯಕ ನಿರ್ದೇಶಕ, ನಾಲ್ವರು ಆಹಾರ ನಿರೀಕ್ಷಕರು (ಫುಡ್ ಇನ್ಸ್‌ಪೆಕ್ಟರ್), ಓರ್ವ ವ್ಯವಸ್ಥಾಪಕ, ತಲಾ ಒಂದು ಎಫ್‌ಡಿಸಿ ಹಾಗೂ ಎಸ್‌ಡಿಸಿ ಹುದ್ದೆಗಳ ಅವಶ್ಯಕತೆಯಿದೆ. ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ಎರಡು ವರ್ಷಗಳಿಂದ ಕಾಯಂ ಅಧಿಕಾರಿ ಇಲ್ಲವಾಗಿದೆ.
ಹುದ್ದೆ ಖಾಲಿ ಇದ್ದುದರಿಂದ 2015ರ ಡಿಸೆಂಬರ್ ನಲ್ಲಿ ಕಚೇರಿ ವ್ಯವಸ್ಥಾಪಕರಾಗಿದ್ದ ನಾಗರಾಜ ಬನವಾಸಿ ಅವರೇ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ವರ್ಷದ ಮೇ ಅಂತ್ಯಕ್ಕೆ ಅವರು ಸಹ ಸೇವಾ ನಿವೃತ್ತಿ ಹೊಂದಿದ್ದಾರೆ. ಕಚೇರಿ ವ್ಯವಸ್ಥಾಪಕ ಹುದ್ದೆಯೂ ಖಾಲಿ ಇದೆ. ಅದೇ ರೀತಿ 2015ರ ಜೂನ್‌ನಿಂದಲೇ ಆಹಾರ ನಿರೀಕ್ಷಕರ ಎರಡು ಹುದ್ದೆಗಳು ಖಾಲಿಯಾಗಿವೆ.
ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ 98 ಸಾವಿರ ಅಂತ್ಯೋದಯ, ಬಿಪಿಎಲ್ ಕಾಡ್ ìದಾರರು ಹಾಗೂ 22 ಸಾವಿರ ಎಪಿಎಲ್ ಪಡಿತರದಾರರು ಇದ್ದಾರೆ. ಇವರಿಗೆ ಸಮರ್ಪಕ ಪಡಿತರ ಕಾರ್ಡ್, ಪಡಿತರ ವಿತರಣೆ, ಹಲವು ಸಮಸ್ಯೆ ಹಾಗೂ ಇನ್ನಿತರ ಕಾರ್ಯಗಳಿಗೆ ಸಕಾಲಿಕ ಪರಿಹಾರಕ್ಕಾಗಿ ಜನರು ಕಚೇರಿಗೆ ಬಂದರೂ ಸಮರ್ಪಕ ಸಿಬ್ಬಂದಿಯೇ ಇಲ್ಲವಾಗಿದೆ.
ಜನಪ್ರತಿನಿಧಿಗಳ ಮೌನ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಪಡಿತರ ಸೌಲಭ್ಯಗಳ ನೀಡುವ ಮಹತ್ವ ಜವಾಬ್ದಾರಿ ಹೊಂದಿದೆ. ಇಂತಹ ಇಲಾಖೆಯಲ್ಲಿ ಬಹುತೇಕ ಪ್ರಮುಖ ಹುದ್ದೆಗಳು ಖಾಲಿಯಾಗಿ ಎರಡು ವರ್ಷಗಳಾದರೂ ಯಾವ ಜನಪ್ರತಿನಿಧಿಯೂ ಈ ಬಗ್ಗೆ ಗಮನ ಹರಿಸದೇ ಮೌನಕ್ಕೆ ಜಾರಿದಂತೆ ಭಾಸವಾಗುತ್ತಿದೆ.
ಪಡಿತರ ವಿಚಾರದಲ್ಲಿ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿವೆ. ಪಡಿತರ ಕಾರ್ಡ್ ದೊರೆಯದೆ, ಪಡಿತರ ಧಾನ್ಯಗಳನೀಡಿಕೆಯಲ್ಲಿ ಆಗುತ್ತಿರುವ ಅನ್ಯಾಯ, ತೊಂದರೆ ಖಂಡಿಸಿ ಜನರು ಆಗಾಗ ರಸ್ತೆಗಿಳಿದಿದ್ದಾಗಿದೆ. ಕಾರ್ಡ್ ನೀಡುತ್ತಾರೆ, ಬದಲಾಯಿಸುತ್ತಾರೆ ಎಂಬ ಸಣ್ಣದೊಂದು ಸುದ್ದಿ ಹಬ್ಬಿದರೆ ಸಾಕು ಜನ ತಮ್ಮೆಲ್ಲ ಕೆಲಸ-ಕಾರ್ಯಗಳನ್ನು ಬಿಟ್ಟು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗೆ ಲಗ್ಗೆಯಿಡುತ್ತಾರೆ.
ಸೌಲಭ್ಯಗಳ ದಾಖಲಾತಿಗೆ ಝರಾಕ್ಸ್ ಅಂಗಡಿ ಇನ್ನಿತರ ಏಜೆನ್ಸಿಗಳ ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಪರಿತಪಿಸುತ್ತಾರೆ. ಇಷ್ಟೆಲ್ಲ ಇದ್ದರೂ ಜನಪ್ರತಿನಿಧಿಗಳು ಮಾತ್ರ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆಯ ಕಚೇರಿ ಸಿಬ್ಬಂದಿ ಭರ್ತಿ ವಿಚಾರದಲ್ಲಿ ಗಂಭೀರವಾಗಿ ಚಿಂತಿಸದಿರುವ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.