ಬೂದನಗುಡ್ಡ ಮೂರ್ತಿ ಭಗ್ನ ಪ್ರಕರಣ: 8 ಜನರ ಬಂಧನ
Team Udayavani, Jun 17, 2019, 12:54 PM IST
ಕಲಘಟಗಿ: ತಾಲೂಕಿನ ಉಗ್ಗಿನಕೇರಿ ಗ್ರಾಪಂ ವ್ಯಾಪ್ತಿಯ ಬೂದನಗುಡ್ಡದ ಬಸವೇಶ್ವರ ದೇವಸ್ಥಾನದ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ.
ಕರುವಿನಕೊಪ್ಪದ ಲಕ್ಷ್ಮಣ ಚಂಡೂನವರ, ಚಳಮಟ್ಟಿಯ ಮಹಾಂತೇಶ ಮಾಳಗಿ, ಸಿದ್ದರಾಮ ಮರದನ್ನವರ, ಮಿಶ್ರಿಕೋಟಿಯ ಶಿವರಾಜ ಜೀವಕನ್ನವರ, ನಾಗರಾಜ ಚೌಡಪ್ಪನವರ, ಲಾಲಸಾಬ ಹಾಜಿಸಾಬ ಬಾವಿ, ರವಿ ಕೋಳೂರ, ಮಂಜುನಾಥ ಮೊಸಳೆಣ್ಣವರ ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ ಹಾಗೂ ಒಂದು ಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ.
ಮೇ 28ರಂದು ಮಧ್ಯರಾತ್ರಿ ದೇವಸ್ಥಾನದ ಬೀಗ ಒಡೆದು ಒಳ ಹೋಗಿದ್ದ ಆರೋಪಿಗಳು, ಬಸವೇಶ್ವರ ಮೂರ್ತಿಗೆ ಬೆಂಕಿ ಹಚ್ಚಿ ಕಿವಿಯ ಭಾಗ ವಿರೂಪಗೊಳ್ಳುವಂತೆ ಮಾಡಿದ್ದರು. ಇಷ್ಟೇ ಅಲ್ಲದೇ ಪಕ್ಕದಲ್ಲಿಯೇ ಇದ್ದ ಅರಣ್ಯ ಇಲಾಖೆಯ ಕೊಠಡಿಯ ಬೀಗ ಒಡೆದು ಅಲ್ಲಿನ ವೈರ್‌ಸೆಟ್‌ಗಳನ್ನು ನಾಶಪಡಿಸಿ ಬ್ಯಾಟರಿಗಳನ್ನೂ ಕದ್ದು ಪರಾರಿ ಆಗಿದ್ದರು. ಈ ಕುರಿತಂತೆ ಮೇ 29ರಂದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್‌ಪಿ ಜಿ. ಸಂಗೀತಾ ಹಾಗೂ ಡಿಎಸ್‌ಪಿ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಘಟಗಿ ಠಾಣೆಯ ಇನ್ಸ್‌ಪೆಕ್ಟರ್ ವಿಜಯ ಬಿರಾದಾರ, ಪಿಎಸ್‌ಐ ಆನಂದ ಢೋಣಿ, ಸಿಬ್ಬಂದಿ ಎನ್.ಎಂ. ಹೊನ್ನಪ್ಪನವರ, ಆತ್ಮಾನಂದ ಬೆಟಗೇರಿ, ಎಚ್.ಎಂ.ನರರುಂದ, ಎಸ್.ಡಿ. ಮಲ್ಲನಗೌಡ್ರ, ಬಿ.ಎ. ಶಿರಕೋಳ, ದೇವೆಂದ್ರ ನಾಯಕ್, ಎಮ್.ಎಲ್. ಪಾಶ್ಚಾಪುರ, ಜಿ.ಬಿ.ಕಾಂಬಳೆ, ಉಳವೀಶ ಸಂಪಗಾವಿ, ಎನ್.ಪಿ. ಸಣ್ಣಮೇಟಿ, ಶಿವಾನಂದ ಕಾಂಬಳೆ, ಎ.ಎಮ್. ನವಲೂರ ತನಿಖಾ ತಂಡದಲ್ಲಿ ಇದ್ದರು.
ದೇವರ ಮೂರ್ತಿಯ ಹಣೆಯೊಳಗೆ ಅಪಾರ ಬೆಲೆಬಾಳುವ ಹವಳ, ವಜ್ರ, ಮುತ್ತು ಇರುತ್ತವೆ. ಅವುಗಳನ್ನು ಕಳವು ಮಾಡಬೇಕು ಎಂಬ ಮೂಢ ನಂಬಿಕೆಯಿಂದ ದೇವರ ಮೂರ್ತಿಯ ತಲೆಯ ಮೇಲೆ ಬೆಂಕಿಹಚ್ಚಿ ವಿರೂಪಗೊಳಿಸಿದ್ದಾರೆ. ನಂತರ ಅರಣ್ಯ ಇಲಾಖೆಯ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಸಾಧನಗಳಿರುತ್ತವೆ ಎಂಬ ಕಲ್ಪನೆಯಲ್ಲಿ ಅಲ್ಲಿಯ ವೈರ್‌ಲೆಸ್ ಸೆಟ್‌ಗಳನ್ನು ನಾಶಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.