ಬಣಜಿಗ ಸಮಾಜ ನಾಡಿನ ಪರಂಪರೆ ಬಸವ ತತ್ವ ಅಳವಡಿಕೊಂಡಿರುವ ಸಮಾಜ : ವಿಜಯೇಂದ್ರ

ಒಬ್ಬ ಸ್ವಾಮೀಜಿ ತಪ್ಪು ಮಾಡಿದರೆ ಎಲ್ಲರೂ ಹಾಗೆಯೇ ಇರುವುದಿಲ್ಲ : ಜಗದೀಶ್ ಶೆಟ್ಟರ್

Team Udayavani, Dec 10, 2022, 7:28 PM IST

1-sadasdasd

ನವಲಗುಂದ : ಬಣಜಿಗ ಸಮಾಜ ನಾಡಿನ ಪರಂಪರೆ ಬಸವ ತತ್ವವನ್ನು ಜೀವನದಲ್ಲಿ ಅಳವಡಿಕೊಂಡಿರುವ ಸಮಾಜ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿ.ವೈ.ವಿಜಯೇಂದ್ರ ಅವರು ಹೇಳಿದರು.

ಶಂಕರ ಮಹಾವಿದ್ಯಾಲಯದ ಆವರಣದಲ್ಲಿ ಲಿಂಗೈಕ್ಯ ಈಶ್ವರಪ್ಪ ಪರುತಪ್ಪ ಅಂಗಡಿ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘ ತಾಲೂಕ ಘಟಕ ನವಲಗುಂದ ಇವರ ನೂತನ ಬಣಜಿಗ ಭವನ ಉದ್ಟಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿ ”ಬಣಜಿಗ ಸಮಾಜ ಒಗ್ಗಟ್ಟಿನಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಹುಮ್ಮಸು ನೀಡಿದಂತಾಗುತ್ತದೆ ಎಂದರು.

ಬಣಜಿಗ ಸಮಾಜ ಎಲ್ಲ ಒಳಪಂಗಡಗಳನ್ನು ಸಮನ್ವಯತೆಯಿಂದ ಬಂಧುತ್ವ ಭಾವನೆಯಿಂದ ನೋಡಿಕೊಂಡು ಹೋಗುತ್ತದೆ. ಕೃಷಿ, ವಾಣಿಜ್ಯ,ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದೆ. ಸಮಾಜದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಜೀವನದಲ್ಲಿ ಬರುವಂತಹ ಸಮಸ್ಯೆಯನ್ನು ಎದುರಿಸುವ ಶಕ್ತಿ, ದೈರ್ಯವನ್ನು ಪಾಲಕರು ನೀಡಬೇಕಾಗಿದೆ ಎಂದರು.

ನಮ್ಮ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಎಲ್ಲ ಕಷ್ಟ ನೋವುಗಳನ್ನು ಅನುಭವಿಸಿದ್ದಾರೆ ಅವುಗಳನ್ನೆಲ್ಲ ನಾವು ಕಂಡಿರುತ್ತೇವೆ. ಅವರ ರಾಜಕೀಯ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ಮಕ್ಕಳ ಶಿಕ್ಷಣದಲ್ಲಿ ಗುರಿ ಮುಟ್ಟಿ ಒಳ್ಳೆಯ ಹೆಸರು ಪಡೆದುಕೊಳ್ಳಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿರಂತರವಾಗಿರಲಿ ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳು ಪರಂಪರೆ, ಸಂಬಂಧಗಳಿಗೂ ಬೆಲೆ ಕೊಡಬೇಕೆಂದು ಕಿವಿಮಾತು ಹೇಳಿದರು.

ಬಣಜಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಹಾಸ್ಟೆಲ್ ಶಿಕ್ಷಣದ ಅನೇಕ ತೊಂದರೆಗಳು ಸಮಾಜದ ಅಭಿವೃದ್ದಿಗಾಗಿ ನಿಮ್ಮ ಮನೆಯ ಮಗನಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆಂದು ಹೇಳಿದರು.

ಎಲ್ಲರೂ ಹಾಗೆಯೇ ಇರುವುದಿಲ್ಲ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಬಣಜಿಗ ಸಮಾಜ ಸಮಾನತೆಗೆ ಸಾಕ್ಷಿಯಾದ ಸಮಾಜ ಎಲ್ಲ ಒಳ ಪಂಗಡಗಳನ್ನು ಒಳಗೊಂಡ ಸಮಾಜ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಗುರುಗಳ ಅಶೀರ್ವಾದ ಅವಶ್ಯ. ಎಲ್ಲಿಯೂ ಒಬ್ಬ ಸ್ವಾಮೀಜಿ ತಪ್ಪು ಮಾಡಿದ ಪರಿಣಾಮ ಎಲ್ಲರೂ ಹಾಗೆಯೇ ಇರುವುದಿಲ್ಲವೆಂದು ಹೇಳಿದರು.

ಕೈಮಗ್ಗ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬಣಜಿಗ ಸಮಾಜದ ಶ್ರೇಯೋಭಿವೃದ್ದಿಗೆ ನಾನು ಸದಾ ಸಿದ್ದ. ಬಣಜಿಗ ಸಮಾಜ ಪಟ್ಟಣದ ವಿವಿಧ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಸರಕಾರದಿಂದ ಸಹಾಯ ಸಹಕಾರ ಮಾಡುವುದಾಗಿ ಭರವಸೆ ನೀಡಿದರು.

ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಅಣ್ಣಿಗೇರಿ ಸೀತಾಗಿರಿ ಆಶ್ರಮ ಡಾ.ಎ.ಸಿ.ವಾಲಿ ಗುರೂಜಿ ಮಾತನಾಡಿ ಬಣಜಿಗ ಸಮಾಜದ ಭವ್ಯವಾದ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಇದರಿಂದ ವಿದ್ಯಾರ್ಥಿಗಳ ಸಾಧನೆಯನ್ನು ಸಮಾಜ ಗುರ್ತಿಸಿ ಅವರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಬಣಜಿಗ ಸಮಾಜ ಇನ್ನು ಸಮಾಜ ಮುಖಿ ಕಾರ್ಯವನ್ನು ಮಾಡಲಿ ಎಂದು ಆಶೀರ್ವಾಚನ ನೀಡಿದರು.

ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಅಣ್ಣಪ್ಪ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ರಾಜ್ಯ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾ ಹೈಕೋರ್ಟ ಜನರಲ್ ಹೆಚ್ಚುವರಿ ಅಡ್ವೋಕೇಟ್ ವಿದ್ಯಾವತಿ ಕೊಟೂರಶೆಟ್ಟರ ಬಣಜಿಗ ಸಮಾಜದ ಕುರಿತು ಮಾತನಾಡಿದರು.

ವೈಷ್ಣವಿ ಸಂಗಣ್ಣ ಹರಳಿ ಹಾಗೂ ತನುಶ್ರೀ ಮಹಾಂತೇಶ ನಾಗಾವಿ ವಿದ್ಯಾರ್ಥಿನಿಯರು ಭರತನಾಟ್ಯ ಪ್ರದರ್ಶಿಸಿದರು. ಪಲ್ಲವೆ ಶಿದ್ರಾಮಶೆಟ್ಟರ ಸಂಗಡಿಗರು ಪ್ರಾರ್ಥಿಸಿದರು.ಪ್ರಕಾಶ ಅಂಗಡಿ, ಎಸ್.ಎಮ್.ಪಟ್ಟಣಶೆಟ್ಟಿ, ಪ್ರಭಣ್ಣ ಬ್ಯಾಳಿ, ಶೇಖರ ಕವಳಿ, ಡಾ.ಬಿ.ವಿ.ಹೊಸಕೇರಿ, ರವಿ ಕಮಟಗಿ, ವೀರೇಶ ಸಂಗಳದ, ಬಸಣ್ಣ ಹೆಸರೂರ, ಈಶಣ್ಣ ಮುನವಳ್ಳಿ, ಅರುಣ ಶೀಲವಂತರ, ಫಕ್ಕೀರೇಶ ಕೋರಿ, ಬಸವರಾಜ ಮಹಾಜನಶೆಟ್ರ, ಎಸ್.ವಿ.ಅಂಗಡಿ, ವೀರಣ್ಣ ಮಳಗಿ, ಮಹೇಶ ಮುಂಡರಗಿ, ಶಂಭು ಶಿದ್ರಾಮಶೆಟ್ಟರ, ಚಂಬಣ್ಣ ಸುರಕೋಡ, ಜಗದೀಶ ಹುರಕಡ್ಲಿ, ವಿಜಯಮಹಾಂತೇಶ ನಾಗಾವಿ, ನಿಂಗಪ್ಪ ಶಿದ್ರಾಮಶೆಟ್ಟರ, ಬಾಬಣ್ಣ ಹುರಕಡ್ಲಿ ಇತರರು ಇದ್ದರು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.