ಮಾಸ್ಕ್ ಕಾರಣಕ್ಕೆ ಪೊಲೀಸರ ಜತೆ ಯೋಧನ ವಾಗ್ವಾದ
Team Udayavani, Jun 4, 2021, 6:51 PM IST
ಹುಬ್ಬಳ್ಳಿ: ಮಾಸ್ಕ್ ಧರಿಸದ ಕಾರಣಕ್ಕೆ ಸಿಆರ್‌ಪಿಎಫ್ ಯೋಧರೊಬ್ಬರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಕೊನೆಗೆ ದಂಡ ಕಟ್ಟಿ ಹೋದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ ಸಿಆರ್‌ಪಿಎಫ್ ಯೋಧರೊಬ್ಬರು ವಿಮಾನ ನಿಲ್ದಾಣದಿಂದ ಗದುಗಿನ ಹುಲಕೋಟಿಗೆ ಹೊರಟಿದ್ದರು. ಇಲ್ಲಿನ ಚನ್ನಮ್ಮ ವೃತ್ತದ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ವೇಳೆ ಇವರ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ವಾಹನ ತಡೆದರು. ಆದರೆ ಇದೇ ಚೆಕ್‌ಪೋಸ್ಟ್ ನ ಹಿಂದೆ ನಿಂತಿದ್ದ ಪೊಲೀಸರು ಮಾಸ್ಕ್ ಧರಿಸಿದ ಕಾರಣಕ್ಕೆ ವಾಹನ ಬಿಟ್ಟಿದ್ದಾರೆ. ಆದರೆ ಈಗ ಮಾಸ್ಕ್ ಹಾಕಿಲ್ಲ ದಂಡ ಕಟ್ಟಿ ಎಂದು ಇನ್ನೊಬ್ಬರು ಹೇಳುವುದು ಯಾವ ನ್ಯಾಯ ಎಂದು ತಕರಾರು ತೆಗೆದರು. ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಇನ್‌ಸ್ಪೆಕ್ಟರ್ ರವಿಚಂದ್ರ ಮಾಸ್ಕ್ ಧರಿಸಿಲ್ಲ ಎಂದ ಮೇಲೆ ದಂಡ ಕಟ್ಟಬೇಕು ಎಂದರು.
ಇದರಿಂದ ಮತ್ತಷ್ಟು ಕೆರಳಿದ ಸಿಆರ್‌ಪಿಎಫ್ ಯೋಧ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಹೀಗೆ ವಾದ ಮಾಡಿದರೆ ವಾಹನ ಸೀಜ್ ಮಾಡುವುದಾಗಿ ಕೀ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಎಲ್ಲಾ ದಾಖಲೆಗಳು ಸರಿಯಿವೆ ಯಾವ ಕಾರಣಕ್ಕಾಗಿ ವಾಹನ ಸೀಜ್ ಮಾಡುತ್ತೀರಿ ಎಂದು ಯೋಧ ಕೀಲಿ ನೀಡುವುದಿಲ್ಲ ಎಂದು ತಕರಾರು ತೆಗೆದರು.
ವಾಹನ ಸೀಜ್ ಮಾಡುವುದಾಗಿ ಪೊಲೀಸರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಂಬಂಧಿಕರು ಯೋಧನನ್ನು ಸಮಾಧಾನ ಪಡಿಸಿ ದಂಡ ಕಟ್ಟಿ ತೆರಳಿದರು. 72 ವಾಹನ ಜಪ್ತಿ: ಕೋವಿಡ್ ನಿಯಮಗಳನ್ನು ಉಲ್ಲಂಘಿ ಸಿದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದ 100 ಪ್ರಕರಣಗಳಲ್ಲಿ 25,000 ರೂ. ದಂಡ, ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ 541 ಪ್ರಕರಣಗಳಲ್ಲಿ 1,08,200 ರೂ. ದಂಡ ಹಾಕಿದ್ದಾರೆ. 72 ವಾಹನಗಳನ್ನು ಜಪ್ತಿ ಮಾಡಿ 26 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.