ಕನ್ನಡ ಭಾಷೆಗೆ ಸವಾಲುಗಳಿವೆ ಹೊರತು ಸಾವಿಲ್ಲ
Team Udayavani, May 7, 2019, 10:27 AM IST
ಧಾರವಾಡ: ಹಿಂದಿ, ಸಂಸ್ಕೃತ, ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಅರಗಿಸಿಕೊಳ್ಳುತ್ತ ಸಾಗಿರುವ ಕನ್ನಡ ಭಾಷೆಗೆ ಸವಾಲುಗಳಿವೆ ಹೊರತು ಸಾವಿಲ್ಲ. ಕನ್ನಡಿಗರು ಕನ್ನಡ ಭಾಷೆ ಮಾತನಾಡುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಕವಿವಿಯ ಸುವರ್ಣ ಮಹೋತ್ಸವದ ಉನ್ನತ ಶಿಕ್ಷಣ ಅಕಾಡೆಮಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಾಪಕರು ಕನ್ನಡ ಭಾಷೆಯನ್ನು ಕೇವಲ ಶೈಕ್ಷಣಿಕ ವಿಷಯವಾಗಿ ನೋಡದೇ ಕನ್ನಡವನ್ನು ಜೀವನ ವಿಧಾನ, ಸಾಂಸ್ಕೃತಿಕ ವಿನ್ಯಾಸ ಅಲ್ಲದೇ ಒಂದು ಮನೋಧರ್ಮವಾಗಿ ಭಾವಿಸಿಕೊಳ್ಳಬೇಕು. ಅಂದಾಗ ಕನ್ನಡ ಭಾಷೆ ಬೆಳೆಯಲು ಸಾಧ್ಯ. ಜತೆಗೆ ಕನ್ನಡ ವಿಷಯದಲ್ಲಿಯೇ ಎಲ್ಲ ಜ್ಞಾನ ಸಾಧನಗಳು ಬರುವಂತಾಗಬೇಕು. ನೂತನವಾಗಿ ಆಯ್ಕೆಯಾದ ಅಧ್ಯಾಪಕರು ಸಮಾಜ ಬೆಳವಣಿಗೆ ಹಾಗೂ ಕನ್ನಡವನ್ನು ಹೇಗೆ ಬೆಳೆಸಬಹುದು. ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನಗಳ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದರು.
ನಮ್ಮ ಧರ್ಮ ಜಾತಿ ನಂಬಿಕೊಳ್ಳ ಬಹುದು. ಆದರೆ, ಅದನ್ನು ಮೀರಿ ಬೆಳೆಯಬೇಕು. ಪಕ್ಷದಲ್ಲಿದ್ದು ಪಕ್ಷವನ್ನು ಮೀರುವವನು ನಿಜವಾದ ರಾಜಕೀಯ ನಾಯಕ. ಧರ್ಮದಲ್ಲಿ ಇದ್ದೂ ಧರ್ಮವನ್ನು ಮೀರಿ ಬೆಳೆಯುವವನು ನಿಜವಾದ ಧಾರ್ಮಿಕ ನಾಯಕ. ಆದರೆ, ಇಂದಿನ ಸಮಾಜದಲ್ಲಿ ನಮ್ಮ ಜಾತಿ, ನಮ್ಮ ಧರ್ಮ ಅಂತಾ ಹೇಳಿಕೊಳ್ಳುತ್ತಿದ್ದೇವೆ. ನಮ್ಮ ಸಿಎಂ ವಿಷಯಕ್ಕೆ ಬಂದರೆ ನೋಡಿ ಅಂತಾ ಈಗಿನ ಕೆಲ ಧರ್ಮಾಧಿಪತಿಗಳೇ ಹೇಳುತ್ತಿದ್ದಾರೆ. ಜತೆಗೆ ಕೆಲ ಧರ್ಮಾಧಿಕಾರಿಗಳೇ ಈಗ ಮುಖ್ಯಮಂತ್ರಿಗಳೂ ಕೂಡ ಆಗಿದ್ದಾರೆ. ಧಾರ್ಮಿಕತೆ ಹೇಳಿದ ಕನ್ನಡದ ಯಾವ ಸಾಹಿತಿಯೂ ಕೂಡ ಖಾವಿ ಧರಿಸಲಿಲ್ಲ. ಧರ್ಮಾಧಿಕಾರಿಗಳು ಹಣದ ಹಣತೆ ಸಂವಾದ ನಡೆಸಬಲ್ಲರು. ಆದರೆ, ನಿಜವಾಗಿಯೂ ದೇವರೊಂದಿಗೆ ಸಂವಾದ ನಡೆಸುವ ಶಕ್ತಿ ಭಕ್ತರಿಗೆ ಮಾತ್ರ ಎಂದರು.
ಇಂದು ಸೃಜನಶೀಲ ಸ್ವಾತಂತ್ರ್ಯದ ಮೇಲೆ ದೊಡ್ಡ ಹಲ್ಲೆಗಳು ಆಗುತ್ತಿವೆ. ಪದ್ಮಾವತ್‌ದಂತಹ ಸಿನಿಮಾಗಳು ಬಂದರೆ ವಿರೋಧಗಳು ಬರುತ್ತಿವೆ. ಈ ಹಿಂದೆಯೂ ಕೂಡ ಹಲ್ಲೆಗಳಾಗಿವೆ. ಆದರೆ, ಅದು ಪ್ರಭುತ್ವದ ಹಿಡಿತದಿಂದ ಆಗುತ್ತಿತ್ತು. ಆದರೆ, ಇಂದುಪ್ರಭುತ್ವದ ಹೆಸರಿನಲ್ಲಿ ಚಿಕ್ಕ ಚಿಕ್ಕ ಗುಂಪುಗಳು ಕಟ್ಟಿಕೊಂಡು ಸೃಜನಶೀಲ ಸ್ವಾತಂತ್ರ್ಯದ ಮೇಲೆ ಹಲ್ಲೆ ಮಾಡುತ್ತಿವೆ. ಅನ್ನದ ಅಗುಳಲ್ಲಿ ಅಣ್ವಸ್ತ್ರ ಕಾಣುವ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ|ಎಸ್.ಎಂ. ಶಿವಪ್ರಸಾದ ಮಾತನಾಡಿ, ಶಿಕ್ಷಕರ ಕೂಡ ದೇಶದ ಗಡಿ ಕಾಯುವ ಸೈನಿಕರಿದಂತೆ. ಹೀಗಾಗಿ ಸಮಾಜವನ್ನು ಅದ್ಭುತವಾಗಿ ಕಟ್ಟುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು. ಡಾ|ಎಚ್.ಬಿ.ನೀಲಗುಂದ, ಡಾ| ಈಶ್ವರ ಸಾತಿಹಾಳ ಸೇರಿದಂತೆ ಅಧ್ಯಾಪಕರು ಇದ್ದರು. ಡಾ|ಅರುಂಧತಿ ನಿರೂಪಿಸಿದರು. ಎಚ್.ಎಂ ಹೆಗಡೆ ಪರಿಚಯಿಸಿದರು. ಡಾ|ಎ.ಆರ್.ಜಗತಾಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.