ಶಿಕ್ಷಣ ಸಂಸ್ಥೆಗಳಲ್ಲಿಂದು ಸಂಸ್ಕೃತಿ-ಸಂಪ್ರದಾಯದ ಶಿಕ್ಷಣ ಉಳಿದಿಲ್ಲ
Team Udayavani, Jul 14, 2017, 12:14 PM IST
ಹುಬ್ಬಳ್ಳಿ: ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಶಿಕ್ಷಣ ಉಳಿದಿಲ್ಲ ಎಂದು ಪದ್ಮರಾಜ ನಗರದ ಅದ್ವೆ„ತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಹೇಳಿದರು. ಗೋಕುಲ ರಸ್ತೆ ರೇಣುಕಾ ನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಅಕ್ಷರಾಭ್ಯಾಸ ಹಾಗೂ ಶಾಲಾ ವೆಬ್‌ಸೈಟ್ ಅನಾವರಣ ಮಾಡಿ ಅವರು ಮಾತನಾಡಿದರು.
ಮಕ್ಕಳಿಗೆ ಆರಂಭದಲ್ಲೇ ಭದ್ರ ಬುನಾದಿ ಹಾಕಬೇಕು. ಆರಂಭದಲ್ಲಿ ಎಡವಿದರೆ ಇಡೀ ಜೀವನದಲ್ಲಿ ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಲಕರು, ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು. ಇಂದಿನ ಆಧುನಿಕ ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಯಾವುದೂ ಇಲ್ಲ.
ಕೇವಲ ಮಕ್ಕಳು ಪುಸ್ತಕದ ಹುಳುಗಳಾಗುತ್ತಿದ್ದು, ಅವರನ್ನು ಅದರಿಂದ ಹೊರ ತರಬೇಕಿದೆ. ಹೊಸ ಶಿಕ್ಷಣ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಾಗಿದ್ದು ಅದರಿಂದ ಮಕ್ಕಳಿಗೆ ಮುಕ್ತಿ ಕೊಡಿಸಬೇಕಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ, ಸಂಪ್ರದಾಯ ಹೆಚ್ಚು ಬೆಳೆಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸುಮಾರು 34ಕ್ಕೂ ಹೆಚ್ಚು ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು.
ಮಜೇಥಿಯಾ ಫೌಂಡೇಶನ್‌ನ ಅಧ್ಯಕ್ಷ ಜಿತೇಂದ್ರ ಮಜೇಥಿಯಾ www.rvkhbl.co.in ಶಾಲಾ ವೆಬ್‌ಸೈಟ್ ಅನಾವರಣಗೊಳಿಸಿದರು. ದತ್ತಾತ್ರೇಯ ರತನ, ಅರವಿಂದ, ಸೋಮಶೇಖರ ಬೆಟಗೇರಿ, ಶಾಲಾ ಆಡಳಿತಾಧಿಕಾರಿ ಶ್ರೀಧರ ಜೋಶಿ, ವೀರೇಂದ್ರ ಕೌಜಲಗಿ ಹಾಗೂ ಶಾಲಾ ಶಿಕ್ಷಕರು-ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.